Kayo Kayo Guru Vijayaraya

Composer : Shri Venugopala dasaru

By Smt.Shubhalakshmi Rao

ಕಾಯೊ ಕಾಯೊ ಗುರು ವಿಜಯರಾಯ ಕಾಯೊ |
ಕಾಯೊ ವರವೀಯೊ
ವಿಜಯ ಗುರುರಾಯ ನೀನಲ್ಲದೆ
ಉಪಾಯವೆ ಯಿಲ್ಲ ||ಪ||

ತಾಪತ್ರಯಗಳುದ್ದೀಪನವಾಗಿವೆ ನೀ ಪರಿ
ಪಾಲಿಪದೀ ಪರಿ ಥರವೆ ||೧||

ಪಾಪಗಳೆಣಿಸದೆ ಪಾವನ ಮಾಳ್ಪದು ಶ್ರೀಪತಿ
ಪಡೆದ ಸುರಾಪಗದಂತೆ ||೨||

ದೂರ ನೀ ನೋಡಲು ಆರು ಯಿಲ್ಲವೊ ಗತಿ
ಕಾರುಣ್ಯದಲಿ ನಿವಾರಿಸು ದುರಿತ ||೩||

ಸ್ವೀಕರ ಮಾಳ್ಪದು ನೀ ಕರಿಸದೆ ಬಲು ವ್ಯಾಕುಲ
ನಾಗಿಹೆ ನೀ ಕರುಣದಲಿ ||೪||

ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆ ಗುರುವೆ
ನಿಮ್ಮಯ ಚರಣ ಸೇವಕನ ||೫||

ನೀನಾಳುವರೊಳು ಈ ನರಮೂರ್ಖನು ಏನು
ಅರಿಯೆ ಬಲು ದೀನವಾಗಿಹನೊ ||೬||

ಆಲಸ ತಾಳದು ಪಾಲಿಸು ವೇಣು ಗೋ-
ಪಾಲ ವಿಠಲನ ಆಳು ಕೃಪಾಳೊ ||೭||


kAyo kAyo guru vijayarAya kAyo |
kAyo varavIyo
vijaya gururAya nInallade
upAyave yilla ||pa||

tApatrayagaLuddIpanavAgive nI pari
pAlipadI pari tharave ||1||

pApagaLeNisade pAvana mALpadu SrIpati
paDeda surApagadaMte ||2||

dUra nI nODalu Aru yillavo gati
kAruNyadali nivArisu durita ||3||

svIkara mALpadu nI karisade balu vyAkula
nAgihe nI karuNadali ||4||

pariharisali salla karaviDi byAgane guruve
nimmaya caraNa sEvakana ||5||

nInALuvaroLu I naramUrKanu Enu
ariye balu dInavAgihano ||6||

Alasa tALadu pAlisu vENu gO-
pAla viThalana ALu kRupALo ||7||

Leave a Reply

Your email address will not be published. Required fields are marked *

You might also like

error: Content is protected !!