Composer : Shri Purandara dasaru
ಕನಕದಾಸನ ಮೇಲೆ ದಯೆ ಮಾಡಲು
ವ್ಯಾಸಮುನಿ ಮಠದ ಜನರೆಲ್ಲ ದೂರಿಕೊಂಬುವರೊ |ಪ|
ತೀರ್ಥವನು ಕೊಡುವಾಗ ಕನಕನ್ನ ಕರೆಯೆನಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ |
ಸಾರ್ಥಕಾಯಿತು ಇವರ ಸನ್ಯಾಸಿತನವೆಲ್ಲ
ಪೂರ್ತಿಯಾಯಿತು ಎನಲು ಯತಿಯು ನಗುತಿಹನು [೧]
ಹರಿ ದಿವಸದಲ್ಲವರ ಪರೀಕ್ಷಿಸಲಿ ಬೇಕೆಂದು
ಕರೆದು ವಿದ್ವಾಂಸರನ ಕನಕನ್ನ ಬಿಡದೆ |
ಕರದಲ್ಲಿ ಕದಳಿಯ ಫಲಗಳನೆ ಇತ್ತು
ನಿಂದಿರದೆ ಏಕಾಂತದಲಿ ಮೆಲುವುದೆಂದೆನಲು [೨]
ಊರು ಬಿಟ್ಟು ಬಲು ದೂರದಲ್ಲಿ ತಾವು ಹೋಗಿ
ಬೇರೆ ಬೇರೆ ಕುಳಿತು ವಿದ್ವಾಂಸರು |
ಆರು ಇಲ್ಲದ ಬಳಿಯ ಮೆದ್ದೆವೆಂದರೆ ಕನಕ
ತೋರದೆನಗೇಕಾಂತ-ವೆನುತ ಪೇಳಿದನು [೩]
ಪೃಥ್ವ್ಯಾದಿ ಶಬ್ದಾದಿ ಶ್ರೋತ್ರಾದಿ ವಾಗಾದಿ
ತತ್ವಗಳ ಒಳ ಹೊರಗೆ ತತ್ವೇಶರು
ಎತ್ತ ನೋಡಿದರೆತ್ತ ಪ್ರಾಪ್ತವಗಿರಲು
ಹರಿ ಮತ್ತೆಲ್ಲಿ ಮೆಲುವುದೆಂದೆನುತ ಪೇಳಿದನು [೪]
ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನೆದುರಿಗೆ ಕಿನ್ನರಿ ಮೀಟಿದಂತೆ
ವೇಣು ಧ್ವನಿ ಬದಿರನ ಬಳಿ ಮೀಟಿದಂತೆ, ಕಣ್ಣು
ಕಾಣದವನಿಗೆ ಕನ್ನಡಿಯ ತೋರಿದಂತೆ [೫]
ನೋಡಿದಿರೆ ಈ ಕನಕನಾಡುವಾ ಮಾತುಗಳ
ಮೂಢ ಜನರರಿಯಬಲ್ಲರೆ ಮಹಿಮೆಯನ್ನು
ನಾಡಾಡಿಯಂತೆಯೇ ಮಾಡಿ ಬಿಟ್ಟರು ಇವಗೆ
ನಾಡೆಲ್ಲ ಹುಡುಕಿದರು ಈಡಾರ ಕಾಣೆ [೬]
ತಮ್ಮ ಕೈ ಮುಷ್ಠಿಯನು ಪಿಡಿದು ಕೇಳಲು ಯತಿಯು
ತಮತಮಗೆ ತೋರಿದ್ದು ಪೇಳೆ ಬ್ರಾಹ್ಮಣರು
ಗಮ್ಮನೆ ಕನಕ ಸಿರಿ ವಾಸುದೇವನೆ ಪರಬೊಮ್ಮ
ಪುರಂದರ ವಿಠ್ಠಲನೆಂದು ಸಾರಿದನು [೭]
kanakadAsana mEle daye mADalu
vyAsamuni maThada janarella dUrikoMbuvaro |pa|
tIrthavanu koDuvAga kanakanna kareyenalu
dhUrtarAgidda vidvAMsarella |
sArthakAyitu ivara sanyAsitanavella
pUrtiyAyitu enalu yatiyu nagutihanu [1]
hari divasadallavara parIkShisali bEkeMdu
karedu vidvAMsarana kanakanna biDade |
karadalli kadaLiya PalagaLane ittu
niMdirade EkAMtadali meluvudeMdenalu [2]
Uru biTTu balu dooradalli tAvu hOgi
bEre bEre kuLitu vidvAMsaru |
Aru illada baLiya meddeveMdare kanaka
tOradenagEkAMta-venuta pELidanu [3]
pRuthvyAdi SabdAdi SrOtrAdi vAgAdi
tatvagaLa oLa horage tatvESaru
etta nODidaretta prAptavagiralu
hari mattelli meluvudeMdenuta pELidanu [4]
mANikavu kODagana kaiyalli iddaMte
kONanedurige kinnari mITidaMte
vENu dhvani badirana baLi mITidaMte, kaNNu
kANadavanige kannaDiya tOridaMte [5]
nODidire I kanakanADuvA mAtugaLa
mUDha janarariyaballare mahimeyannu
nADADiyaMteyE mADi biTTaru ivage
nADella huDukidaru IDAra kANe [6]
tamma kai muShThiyanu piDidu kELalu yatiyu
tamatamage tOriddu pELe brAhmaNaru
gammane kanaka siri vAsudEvane parabomma
puraMdara viThThalaneMdu sAridanu [7]
Leave a Reply