Composer : Shri Kanakadasaru
ಏಸು ಕಾಯಂಗಳ ಕಳೆದು ಎಂಭತ್ನಾಲ್ಕು ಲಕ್ಷ
ಜೀವ ರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ ||
ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ ಯಮನ
ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು |
ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ
ದೋಷ ನಾಶ ಕೃಷ್ಣವೇಣೀ ಗಂಗೆ ಗೋದಾವರಿ ಭವನಾಶಿ
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || ೧ ||
ಅಂದಿಗೋ ಇಂದಿಗೋ ಒಮ್ಮೆ ಸಿರಿ ಕಮಲೇಶನನ್ನು
ಒಂದು ಬಾರಿಯಾರೂ ಹಿಂದ ನೆನೆಯಲಿಲ್ಲ ಮನ ದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಲುಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || ೨ ||
ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದ ಬ್ರಹ್ಮನ ಪಿಡಿದು
ಸಾರಿ ಸೂರಿ ಯುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ
ಲಂಡ ಜೀವವೇ ಎಲೊ ಭಂಡ ಜೀವವೇ || ೩ ||
Esu kAyaMgaLa kaLedu eMbhatnAlku lakSha
jIva rASiyannu dATi baMda I SarIra |
tAnalla tannadalla Ase tharavalla muMde bAhOdalla
dAsanAgu viSEShanAgu dAsanAgu BavapASa nIgu || pa ||
ASa klESa dOShaveMba abdhiyoLu muLugi yamana
pASakkoLagAgade nirdOShiyAgu saMtOShiyAgu |
kASi vAraNAsi kaMci kALahasti rAmESvara
Esu dESa tirugidare bAhOdEnO alli hOdEnO
dOSha nASa kRuShNavENI gaMge gOdAvari BavanASi
tuMgaBadre yamune vAsadalli upavAsadalli |
mIsalAgi miMdu japa tapa hOma nEmagaLa
Esu bAri mADidaru PalavEnu I CalavEnu || 1 ||
aMdigO iMdigO omme siri kamalESanannu
oMdu bAriyArU hiMda neneyalilla mana daNiyalilla |
baMdu baMdu BramegoMDu mAyAmOhakke siluki
noMdu beMdu oMdariMda uLiyalilla baMdha kaLeyalilla |
saMdEhava mADadiru arivu eMba dIpaviTTu
iMdu kaMDya dEhadalli piMDAMDa hAge brahmAMDa |
iMdu hariya dhyAnavannu mADi vivEkadi
mukuMdaniMda mukti bEDu kaMDya nI nODu kaMDya || 2 ||
nUru bAri SaraNu mADi nIra muLugalyAke
para nAriyara nOTake guriya mADidi mana sereya mADidi |
sUreyoLu sUre tuMbi mEle hUvina hAra
gIru gaMdha akShateya dharisidaMte nI meresidaMte |
gAruDhiya mAta biTTu nAda brahmana piDidu
sAri sUri yuktiyannu SamanadiMda matte sumanadiMda |
nArAyaNa acyuta anaMtAdi kESavana
sArAmRutavannuMDu suKisO
laMDa jIvavE elo BaMDa jIvavE || 3 ||
Leave a Reply