Composer : Shri Kanakadasaru
ರಾಗ: ಕಲ್ಯಾಣಿ, ಖಂಡಛಾಪುತಾಳ
ಭಜಿಸಿ ಬದುಕೆಲೊಮಾನವ || ಪ ||
ಅಜಭವೇಂದ್ರಾದಿಗಳು ಪೂಜಿಸುವ ಪಾದವನು || ಅ ಪ ||
ಪಾಕಶಾಸನಗೊಲಿದು ಬಲಿಯ ಮೆಟ್ಟಿದಪಾದ|
ಕಾಕುಶಕಟನ ಒದ್ದು ಕೊಂದ ಪಾದ ||
ನಾಕಭೀಕರ ಬಕನ ಮೆಟ್ಟಿ ಸೀಳಿದ ಪಾದ |
ಲೋಕಪಾವನೆ ಗಂಗೆ ಪುಟ್ಟಿದ ಪಾದವನು || ೧ ||
ಶಿಲೆಯಾದ ಅಹಲ್ಯೆಯನು ಶುದ್ಧ ಮಾಡಿದ ಪಾದ |
ಒಲಿದು ಪಾರ್ಥನ ರಥವನೊತ್ತಿದ ಪಾದ ||
ಕಲಿ ಸುಯೋಧನನ ಓಲಗದಿ ಕೆಡಹಿದ ಪಾದ |
ಬಲಿದ ಕಾಳಿಂಗನ ಪೆಡೆ ತುಳಿದ ಪಾದವನು || ೨ ||
ಗರುಡ ಶೇಷಾದಿಗಳು ಪೊತ್ತು ತಿರುಗುವ ಪಾದ |
ಧರೆಯ ಈರಡಿ ಮಾಡಿ ಅಳೆದ ಪಾದ ||
ಸಿರಿ ತನ್ನ ತೊಡೆಯ ಮೇಲಿರಿಸಿ ಒತ್ತುವ ಪಾದ |
ಸಿರಿ ಕಾಗಿನೆಲೆಯಾದಿ ಕೇಶವನ ಪಾದವನು || ೩ ||
rAga: kalyANi, KaMDaCAputALa
Bajisi badukelo mAnava || pa ||
ajaBavEMdrAdigaLu pUjisuva pAdavanu || a pa ||
pAkaSAsanagolidu baliya meTTida pAda |
kAku SakaTana oddu koMda pAda ||
nAkaBIkara bakana meTTi sILida pAda |
lOkapAvane gaMge puTTida pAdavanu || 1 ||
SileyAda ahalyeyanu Suddha mADida pAda |
olidu pArthana rathavanottida pAda ||
kali suyOdhanana Olagadi keDahida pAda |
balida kALiMgana peDe tuLida pAdavanu || 2 ||
garuDa SEShAdigaLu pottu tiruguva pAda |
dhareya IraDi mADi aLeda pAda ||
siri tanna toDeya mElirisi ottuva pAda |
siri kAgineleyAdi kESavana pAdavanu || 3 ||
Leave a Reply