Baayi Naridamele

Composer : Shri Kanakadasaru

By Smt.Shubhalakshmi Rao

ಬಾಯಿ ನಾರಿದ ಮೇಲೆ ಏಕಾಂತವೆ
ತಾಯಿ ತೀರಿದ ಮೇಲೆ ತವರಾಸೆಯೆ, ಮನವೆ ||ಪ||

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ,
ಬಣ್ಣಗುಂದಿದ ಮೇಲೆ ಬಹುಮಾನವೆ,
ಪುಣ್ಯತೀರಿದ ಮೇಲೆ ಪರಲೋಕ ಸಾಧನವೆ,
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ||೧||

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣ ಬಹುದೆ,
ಚಳಿಯುರಿಗೆ ಚಂದನದ ಲೇಪ ಹಿತವೆ,
ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ,
ಬೆಲೆಬಿದ್ದ ಸರಕಿನೊಳು ಲಾಭವುಂಟೆ ||೨||

ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ,
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ,
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ,
ಭಕ್ತಿಯಿಲ್ಲದ ನರಗೆ ಮುಕ್ತಿಯು ಉಂಟೆ? ||೩||


bAyi nArida mEle EkAMtave
tAyi tIrida mEle tavarAseye, manave ||pa||

kaNNu keTTa mEle kaDurUpa celvikeye,
baNNaguMdida mEle bahumAnave,
puNyatIrida mEle paralOka sAdhanave,
suNNavillada vILyavadu svAdumayave ||1||

kilubinA baTTaloLu huLi kalasi uNa bahude,
caLiyurige caMdanada lEpa hitave,
molebidda heNNinoLu mOhakke sogasahude,
belebidda sarakinoLu lABavuMTe ||2||

pathya sErada mEle nitya suKavenabahude,
sattva taggida mEle sAmarthyave,
pRuthviyoLu kAgineleyAdikESava ninna,
Baktiyillada narage muktiyu uMTe? ||3||

Leave a Reply

Your email address will not be published. Required fields are marked *

You might also like

error: Content is protected !!