Ava karmavo idu

Composer : Shri Kanakadasaru

By Smt.Shubhalakshmi Rao

ಆವ ಕರ್ಮವೊ ಇದು ಆವ ಧರ್ಮವೊ
ಆವ ಕರ್ಮವೆಂದರಿಯೆ, ಹಾರುವರಿವರು ಬಲ್ಲರೆ (ಪ)

ಸತ್ತವನು ಎತ್ತ ಪೋದ, ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು ನಿತ್ಯ ಪಿಂಡವಿಕ್ಕುತೀರಿ (೧)

ಎಳ್ಳು ದರ್ಭೆ ಕೈಲಿ ಪಿಡಿದು, ಪಿತರ ತೃಪ್ತಿ ಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು, ದರ್ಭೆ ನೀರೊಳು ಹರಿದು ಹೋಯಿತು (೨)

ಎಡಕೆ ಒಂದು ಬಲಕೆ ಒಂದು, ಎಡಕೆ ತೋರಿಸಿ ಬಲಕೆ ತೋರಿಸಿ
ಕಡು ಧಾವಂತ ಪಡಿಸಿ, ಕಟಿಯ ಹಸ್ತದೊಳಗೆ ಪಿಡಿಸುತೀರಿ (೩)

ಮಂತ್ರಾಕ್ಷತೆಯ ಕೈಗೆ ಕೊಟ್ಟು, ಮೋಕ್ಷವನ್ನು ಹಾರೈಸುವಿರಿ
ಮಂತ್ರವೆಲ್ಲೊ ಅಕ್ಷತೆಯೆಲ್ಲೊ, ಮೋಕ್ಷವೆಲ್ಲೊ ಮಂತ್ರ್ಯವೆಲ್ಲೊ (೪)

ಹೇಳುವವನು ಅವಿವೇಕಿ, ಕೇಳುವವನು ಅಜ್ಞಾನಿ
ಹೇಳುವ ಕೇಳುವ ಇಬ್ಬರ ಸೊಲ್ಲ ಆದಿಕೇಶವ ಮೂರ್ತಿ ಬಲ್ಲ (೫)


Ava karmavo idu Ava dharmavo
Ava karmaveMdariye, hAruvarivaru ballare (pa)

sattavanu etta pOda, sattu tanna janmake pOda
sattavanu uNNuvaneMdu nitya piMDavikkutIri (1)

eLLu darBe kaili piDidu, pitara tRupti paDisutIri
eLLu mInu nuMgi hOyitu, darBe nIroLu haridu hOyitu (2)

eDake oMdu balake oMdu, eDake tOrisi balake tOrisi
kaDu dhAvaMta paDisi, kaTiya hastadoLage piDisutIri (3)

maMtrAkShateya kaige koTTu, mOkShavannu hAraisuviri
maMtravello akShateyello, mOkShavello maMtryavello (4)

hELuvavanu avivEki, kELuvavanu aj~jAni
hELuva kELuva ibbara solla AdikESava mUrti balla (5)

Leave a Reply

Your email address will not be published. Required fields are marked *

You might also like

error: Content is protected !!