Composer : Shri Gurugovinda dasaru
Shri Vedesha Tirtharu:
Shishyaru of Shri Raghuttama Tirtharu,
Gurugalu of Shri Yadavaryaru
Brindavana at Manur
Aradhane – Kartika Shukla Shashti
ವೇದವ್ಯಾಸ ಕರಾಬ್ಜೋತ್ಥಂ | ಮಣಿಪೂರ ಪುರಸ್ಥಿತಂ
ಛಾಂದೋಗ್ಯ ವ್ಯಾಖ್ಯಾಕರ್ತಾರಂ | ಶ್ರೀ ವೇದೇಶಮಹಂಭಜೇ ||
ವೇದೇಶ ತೀರ್ಥಗುರು | ನತಜನಕ ಕಲ್ಪತರು
ಬೋಧಿಸೀ ತತ್ವಗಳ | ಕಳೆಯೊ ಭವಗರಳ [ಪ]
ಕರಜ ರಥೋತ್ತಮ ಸು | ತೀರ್ಥಭಿಧ ಸರ್ವೇಶ
ಚರಣಾಂಬುಜದ ಮಧುಪ | ಪೊರೆವುದೆನ ಮುನಿಪ |
ಅರುಹು ಉಪನಿಷದರ್ಥ | ಛಾಂದೋಗ್ಯಗಳ ಅರ್ಥ
ನಿರುತ ತವಪದ ರತಿಯ | ಅರ್ಥಿಸುವೆ ಮರೆಯ [೧]
ಛಂದೋಗ ಶ್ರುತ್ಯರ್ಥ | ಅಂತೆ ಕಾಠಕದರ್ಥ
ಅಂದ ತಲವಾಕಾರ | ಮಾನಪದ್ಧತಿಯ |
ಮಂದಜನಸೂಭೋಧ | ಲಕ್ಷಣವು ಮೊದಲಾದ
ಅಂದ ಗ್ರಂಥಗಳ್ಭಾವ | ಪೇಳ್ದೆ ಭೂದೇವ [೨]
ವೈರಾಗ್ಯ ಗುಣನಿಧಿಯೆ | ನೈರಪೇಕ್ಷದ ಖನಿಯೆ
ತೀರ ಭೀಮಾಸರಿತು | ಅಲ್ಲಿರುವೆ ಒಳಿತು |
ಧೀರ ಗುರು ಗೋವಿಂದ | ವಿಠಲಪದ ಆನಂದ
ವಾರಿಧೀಯೊಳು ಮೀನ | ಇದು ದಿನ್ನ ಖೂನ [೩]
vEdavyAsa karAbjOtthaM | maNipUra purasthitaM
CAMdOgya vyAKyAkartAraM | SrI vEdESamahaMBajE ||
vEdESa tIrthaguru | natajanaka kalpataru
bOdhisI tatvagaLa | kaLeyo BavagaraLa [pa]
karaja rathOttama su | tIrthaBidha sarvESa
caraNAMbujada madhupa | porevudena munipa |
aruhu upaniShadartha | CAMdOgyagaLa artha
niruta tavapada ratiya | arthisuve mareya [1]
CaMdOga Srutyartha | aMte kAThakadartha
aMda talavAkAra | mAnapaddhatiya |
maMdajanasUBOdha | lakShaNavu modalAda
aMda graMthagaLbhAva | pELde BUdEva [2]
vairAgya guNanidhiye | nairapEkShada Kaniye
tIra BImAsaritu | alliruve oLitu |
dhIra guru gOviMda | viThalapada AnaMda
vAridhIyoLu mIna | idu dinna KUna [3]
Leave a Reply