ಶ್ರೀ ವಿಜಯದಾಸಾರ್ಯ ಕೃತ ಶ್ರೀ ವಿಷ್ಣುಪಾದ ಸುಳಾದಿ
ರಾಗ: ಮಾಂಡ್
ಧ್ರುವತಾಳ
ಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯ ಪಾದ |
ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹಾರ ಪಾದ |
ಝಗಝಗಿಸುವ ಪರಮ ಮಂಗಳ ಖಣಿಯ ಪಾದ |
ನಿಗಮಾವಳಿಗೆ ಇದು ನಿಲುಕದ ಪಾದ |
ಅಗಣಿತ ಗುಣಪೂರ್ಣ ಸೌಮ್ಯ ಪಾದ |
ತ್ರಿಗುಣಾತೀತವಾದ ಶೃಂಗಾರನಿಧಿ ಪಾದ |
ಗಗನ ನದಿಯ ಪೆತ್ತ ಗಂಭೀರ ಪಾದ |
ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ |
ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ |
ಬಗೆ ಬಗೆ ವರಗಳ ಕೊಡುವ ಪಾದ |
ಮಿಗೆ ಸಹಾಸವುಳ್ಳ ಮಿಸಣಿಯಾಭರಣ ಪಾದ |
ಅಘದೂರ ಪಾದ ಅತಿಚಿತ್ರ ಪಾದ |
ನಗವೈರಿನುತ ನಮ್ಮ ವಿಜಯವಿಠ್ಠಲನ ಪ – |
ನ್ನಗಶಾಯಿಯ ಪಾದ ವಿಷ್ಣುಪಾದ || ೧ ||
ಮಟ್ಟತಾಳ
ಧರ್ಮಶಿಲಿಯ ಮೇಲೆ ಮೆರೆವ ಮಣಿಯ ಪಾದ |
ಕರ್ಮ ಖಂಡನೆ ಮಾಳ್ಪ ಕಲುಷ ವಿಗತ ಪಾದ |
ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ |
ಪೇರ್ಮೆಯುನ್ನತವಾದ ಪ್ರೇಮಭರಿತ ಪಾದ |
ಕೂರ್ಮರೂಪ ನಮ್ಮ ವಿಜಯವಿಠಲ ರೇಯನ |
ಧರ್ಮ ಮೂರುತಿಯ ಪಾದ ಸಿರಿಪಾದ || ೨ ||
ತ್ರಿವಿಡಿತಾಳ
ದಹರಾಕಾಶದಲ್ಲಿ ಮಿಂಚುವ ಘನಪಾದ |
ಬಹು ಗಮನವಾಗಿದ್ದ ಭಾಗ್ಯಪಾದ |
ಅಹೋರಾತ್ರಿಯಲಿ ಬಿಡದೆ ಆನಂದದ ಪಾದ |
ಮಹಾ ಪುಣ್ಯ ತಂದೀವ ಮಂತ್ರ ಪಾದ |
ದ್ರೋಹಿ ಮಾನವರಿಗೆ ದೂರವಾದ ಪಾದ |
ಗಹನವಾದ ಪಾದ ಗುಪ್ತಪಾದ |
ಸ್ನೇಹಭಾವದಿಂದ ಸಾಕುವ ನಿಧಿ ಪಾದ |
ರಾಹಸ್ಯವಾಗಿ ಜಪಿಸುವ ಪಾದ |
ತ್ರಾಹಿ ತಾವರೆನಯನ ವಿಜಯವಿಠಲ ಸರಸಿ – |
ರೂಹ ಪೋಲುವ ಪಾದ ಆರ್ಜವ ಪಾದ || ೩ ||
ಅಟ್ಟತಾಳ
ಅಸುರಗಯನ ಶಿರದಲ್ಲಿ ನಿಂದ ಪಾದ |
ಎಸೆವ ಹದಿನೆಂಟು ಪಾದದೊಳಿಪ್ಪ ಪಾದ |
ಶಶಿಮುಖಿ ಗೋಪೇರ ಮನಕೆ ಮೋಹನ ಪಾದ |
ವಶವಾಗಿ ಭಕ್ತರ ಬಳಿಯಲಿಪ್ಪ ಪಾದ |
ವಿಷ ವರ್ಜಿತ ವಿಲಕ್ಷಣ ಪಾದ |
ಬೆಸನೆ ಲಾಲಿಸಿ ಲಾಲನೆ ಮಾಡುವ ಪಾದ |
ಅಸಮದೈವ ನಮ್ಮ ವಿಜಯವಿಠ್ಠಲರೇಯಾ |
ಪೆಸರಾದ ಪಾದ ಪರಮ ಸೌಖ್ಯ ಪಾದ || ೪ ||
ಆದಿತಾಳ
ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ |
ಮಲ್ಲ ಮೊದಲಾದವರ ಖಳರ ಜೈಸಿದ ಪಾದ |
ಮೆಲ್ಲಮೆಲ್ಲನೆ ಶುದ್ಧ ಸ್ತೋತ್ರ ಕೈಕೊಂಬ ಪಾದ |
ಸಲ್ಲಲಿತ ಪಾದ ಸರ್ವ ಸೌಕಾರ್ಯ ಪಾದ |
ಎಲ್ಲೆಲ್ಲಿ ನೋಡಿದರೂ ವ್ಯಕ್ತವಾದ ಪಾದ |
ಬಲ್ಲಿದ ಹರಿ ನಮ್ಮ ವಿಜಯವಿಠಲರೇಯ |
ವಲ್ಲಭನ ಪಾದ ವಜ್ರಾಂಕಿತ ಪಾದ || ೫ ||
ಜತೆ
ಫಲ್ಗುಣಿ ತೀರದಲಿ ಮೆರೆವ ಮಹತ್ತು ಪಾದ |
ಪಲ್ಗುಣ ಸಾರಥಿ ವಿಜಯವಿಠಲ ನ ಪಾದ ||೬||
SrI vijayadAsArya kRuta SrI viShNupAda suLAdi
rAga: mAMD
dhruvatALa
jagavella vyApisida balu atIMdriya pAda |
pagegaLa mastakAdrige vajraprahAra pAda |
JagaJagisuva parama maMgaLa KaNiya pAda |
nigamAvaLige idu nilukada pAda |
agaNita guNapUrNa saumya pAda |
triguNAtItavAda SRuMgAranidhi pAda |
gagana nadiya petta gaMBIra pAda |
KagarAjana divya pegalalli poLeva pAda |
yugayugadalli illi pUjegoMbuva pAda |
bage bage varagaLa koDuva pAda |
mige sahAsavuLLa misaNiyABaraNa pAda |
aGadUra pAda aticitra pAda |
nagavairinuta namma vijayaviThThalana pa – |
nnagaSAyiya pAda viShNupAda || 1 ||
maTTatALa
dharmaSiliya mEle mereva maNiya pAda |
karma KaMDane mALpa kaluSha vigata pAda |
karmavarma marma karma saMgada pAda |
pErmeyunnatavAda prEmaBarita pAda |
kUrmarUpa namma vijayaviThala rEyana |
dharma mUrutiya pAda siripAda || 2 ||
triviDitALa
daharAkASadalli miMcuva GanapAda |
bahu gamanavAgidda BAgyapAda |
ahOrAtriyali biDade AnaMdada pAda |
mahA puNya taMdIva maMtra pAda |
drOhi mAnavarige dUravAda pAda |
gahanavAda pAda guptapAda |
snEhaBAvadiMda sAkuva nidhi pAda |
rAhasyavAgi japisuva pAda |
trAhi tAvarenayana vijayaviThala sarasi – |
rUha pOluva pAda Arjava pAda || 3 ||
aTTatALa
asuragayana Siradalli niMda pAda |
eseva hadineMTu pAdadoLippa pAda |
SaSimuKi gOpEra manake mOhana pAda |
vaSavAgi Baktara baLiyalippa pAda |
viSha varjita vilakShaNa pAda |
besane lAlisi lAlane mADuva pAda |
asamadaiva namma vijayaviThThalarEyA |
pesarAda pAda parama sauKya pAda || 4 ||
AditALa
ellariMdali piMDa hAkisikoMba pAda |
malla modalAdavara KaLara jaisida pAda |
mellamellane Suddha stOtra kaikoMba pAda |
sallalita pAda sarva saukArya pAda |
ellelli nODidarU vyaktavAda pAda |
ballida hari namma vijayaviThalarEya |
vallaBana pAda vajrAMkita pAda || 5 ||
jate
PalguNi tIradali mereva mahattu pAda |
palguNa sArathi vijayaviThala na pAda ||6||
Leave a Reply