Gaya Mahatme Suladi – Vijayadasaru

Smt.Nandini Sripad

ಶ್ರೀ ವಿಜಯದಾಸಾರ್ಯ ಕೃತ ಗಯಾದ ಮಹಾತ್ಮೆ ಸುಳಾದಿ
ರಾಗ: ಹಂಸಾನಂದಿ

ಧ್ರುವತಾಳ
ಶ್ರೀ ಗಯಾದ ಯಾತ್ರಿ ಮಾಡಿ ಸಿದ್ಧ ಸಾಧ್ಯ ಮಾನವರು |
ಆಗಮೋಕ್ತಿಯಿಂದ ತಿಳಿದುನೋಡಿ |
ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ |
ಯೋಗಿ ಜನರು ಸಂಗಡದಿಂದಲಿ |
ಯಾಗ ಮೊದಲಾದ ಕರ್ಮಕಲಾಪಂಗಳು |
ತ್ಯಾಗಮಾಡಿದರು ದೋಷವಿಲ್ಲಾ |
ಸಾಗಿ ಬಂದು ಇಲ್ಲಿ ನೂರೊಂದು ಕುಲವ ಲೇ – |
ಸಾಗಿ ಉದ್ಧರಿಸಬೇಕು ತ್ರಿಕರ್ಣದೀ |
ಭಾಗಾದೆಯಾದವ ದ್ವೇಷದಿಂದಲಿ ಬರ – |
ಲಾಗಿ ಮುಕ್ತಿಯುಂಟು ಪಿತ್ರಾದಿಗೇ |
ಈಗಲಾಗೆನ್ನದಿರಿ ಕಂಡ ಮಾತುರ ಬಲು |
ವೇಗಾದಿಂದಲಿ ನರಕಾ ದೂರಾಗೋವೂ |
ಸಾಗರಶಾಯಿ ನಮ್ಮ ವಿಜಯವಿಠಲ ನಂಘ್ರಿ |
ಜಾಗುಮಾಡದೆ ನೆನೆಸೆ ಸಮಸ್ತ ಕಾರ್ಯಸಿದ್ಧಿ || ೧ ||

ಮಟ್ಟತಾಳ
ಪರಮ ಪ್ರೀತಿಯಿಂದ ಫಲ್ಗುಣಿ ಶ್ರಾದ್ಧವನು |
ವಿರಚಿಸಿ ವಿನಯದಲಿ ಪ್ರಥಮ ದಿವಸದಲ್ಲಿ |
ತರುವಾಯ ಕಮಲಾಸನ ತೀರ್ಥಪ್ರೇತ ಶಿಲೆಯು |
ಚರಿಸಿ ಚತುರನಾಗಿ ಎರಡನೆ ಸ್ಥಾನದ – |
ಲಿ ರಾಮ ಪರ್ವತರಾಮಾ ಸರೋವರ ಕಾಕಬಲಿ |
ಎರಡೆರಡೂ ಒಂದೂ ಸ್ಥಳ ಒಂದೇ ದಿವಸ |
ಕರಣಶುದ್ಧಿಯಿಂದ ಪಿಂಡ ಪ್ರದಾನವಗೈದು |
ಸುರಸಾರ್ವಭೌಮ ವಿಜಯವಿಠಲ ಗದಾ – |
ಧರನ ಪ್ರೀತಿಬಡಿಸಿ ಕುಲವನು ಉದ್ಧರಿಸಿ || ೨ ||

ರೂಪಕತಾಳ
ಉತ್ತರ ಮಾನಸ ಕನಕ ತೀರ್ಥ ಸೂರ್ಯ |
ಹತ್ತಿಲಿ ದಕ್ಷಿಣ ಮಾನಸ ಮಧುಕುಲ್ಯಾ |
ಸತ್ಯವಾಗಿ ಐದು ಸ್ಥಾನದಲ್ಲಿ ತಮ್ಮ |
ಪಿತೃಗಳನುದ್ಧರಿಸೆ ಅಲ್ಲಿಂದಾ ಮರುದಿವಸಾ |
ಮಾತೆಮಾತಂಗ ಧರ್ಮಕೂಪ ಅಶ್ವತ್ಥ |
ತತ್ತಳಿಸುವ ಬ್ರಹ್ಮಕುಂಡಕ ಕಾಶ್ವಾನ |
ಪ್ರತ್ಯೇಕವಾಗಿ ಪಿಂಡ ಪ್ರದಾನವ ಗೈದು |
ಪಿತೃಮಾತೃವಂಶ ಗತಿಗೆ ಪೊಂದಿಸುವದು |
ಸತ್ಯಸಂಕಲ್ಪ ವಿಜಯವಿಠಲ ರೇಯ |
ಆತ್ಮಸಮ್ಮತ ಪಾಲಿಸುತಿಪ್ಪ ಪ್ರತಿದಿನ || ೩ ||

ತ್ರಿವಿಡಿತಾಳ
ಇನಿತು ಮಾಡಿದ ಮೇಲೆ ಪಿಷ್ಠಯಳ್ಳು ಪರಮಾನ್ನ |
ಘನಕ್ಷೀರ ತರ್ಪಣ ದೀಪವ ವಿರಚಿಸಿ |
ಅಣೋರಣಿಯಾದ ಶ್ರೀ ವಿಷ್ಣುಮೂರ್ತಿಯ ಮತ್ತೆ |
ವನಜಾಸನಾ ರುದ್ರ ಇಂದ್ರ ಸ್ಕಂದಾರ್ಕಾಬ್ಜಾ |
ಅನಲೈದು ಗಣೇಶ್ವರ ಕ್ರೋಂಚಕಲಶೋದ್ಭವ |
ಮುನಿ ಕಾಣ್ವ ದಧಿಚಿ ಮಾತಂಗಾ ಕಶ್ಯಪಮುನಿ |
ಎಣಿಸಿ ಹತ್ತೊಂಭತ್ತು ಪಾದದ ಮೇಲೆ ಸ – |
ದ್ಗುಣದಿಂದ ಪೂರ್ವೋಕ್ತ ಪ್ರಕಾರಮಾಳ್ಪದೂ |
ಗುಣಪೂರ್ಣ ವಿಜಯವಿಠಲ ಗದಾಧರಗೆ ವಂ – |
ದನೆ ಮಾಡು ಗಜರೂಪದಲ್ಲಿಗೆ ಬಂದು ನಿಂದೂ || ೪ ||

ಝಂಪೆತಾಳ
ಭಕುತಿಯಿಂದಲಿ ಮೂಲವಟದಲ್ಲಿ ಶ್ರಾದ್ಧವನು |
ಸಕಲ ಗೋತ್ರಗಳು ಉದ್ಧಾರಾರ್ಥವಾಗಿ |
ಲಕುಮಿ ಕುಂಡ ಗದಾ ಲೋಲ ಕರ್ನಿಕೆಯಲ್ಲಿ |
ಮಖ ಸಮನಾದ ಪಿಂಡಗಳನಿಟ್ಟೂ |
ಭಕುತಿಯಿಂದಲಿ ಕ್ಷೇತ್ರವಾಸಿಗಳ ಪೂಜಿಸಿ |
ಸುಖಬಡಿಸಿ ವಟದಲ್ಲಿ ಪಿಂಡ ಪ್ರದಾನವಗೈದು |
ಕಕುಲಾತಿ ಸಲ್ಲಾ ನಿಮಗೆಲ್ಲಿ ಈ ನಿಧಿಯಲ್ಲಿ |
ದುಃಖದಿಂದ ಕಡೆಬಿದ್ದು ಪೋಪ ನರನು |
ಅಖಿಳ ಲೋಕೇಶಸಿರಿ ವಿಜಯವಿಠಲರೇಯಾ |
ಅಕಳಂಕ ಜನರೊಡನೆ ಇಡುವ ಕರುಣದಲಿ || ೫ ||

ಅಟ್ಟತಾಳ
ಸೀತರಾಮ ಗಯ ಗಯ ಶೀರ್ಷ ಗಯ ರೂಪ |
ನೀತಾ ಮುಂಡ ಪೃಷ್ಠಗಿರಿ ಆದಿಗಯ ಮುಂದೆ |
ಧೌತ ಪಾಪ ಭೀಮ ಗಯ ಗೋಪಾದವು |
ವೈತರಣಿ ತೀರ್ಥ ಇನಿತು ಸ್ಥಾನದಲ್ಲಿ |
ಕಾತುರದಿಂದಲಿ ಪಿಂಡ ಪ್ರದಾನವ |
ಮಾತಾ ಪಿತೃಗಳಿಗೋಸುಗ ಸ್ವಾಮಿ ಕೈಯಲ್ಲಿ ಕೊಟ್ಟುಕೊಂಡಾಡಿ |
ಆತುಮಾರ್ಥವಾಗಿ ದಧ್ಯಾನ್ನದ ಪಿಂಡ |
ದಾತ ಜನಾರ್ದನ ಸ್ವಾಮಿಯ ಕೈಯಲ್ಲಿ |
ತಾ ತೃಪ್ತಿಯಿಂದಲಿ ತಿಲರಹಿತವಾಗಿ |
ಪ್ರೀತಿಯಿಂದಲಿ ಕೊಟ್ಟು ಸ್ತೋತ್ರವ ಮಾಡೀ |
ಗಾತುರ ತೊಲಗಿದಾಗಲಿ ಮುದದಿಂದ ಪ್ರ – |
ಖ್ಯಾತ ವಿಷ್ಣು ಪಾದದಲ್ಲಿ ಹಾಕೆಂದು ಭ -|
ಕೂತಿಯಿಂದಲಿ ಪೇಳಿ |
ಸಂತೋಷವಹುದು ಹೇಯ ದಾನವ ಹರ
ವಿಜಯವಿಠಲರೇಯಾ |
ಭೂತಳದೊಳಗೆ ಈ ತೆರದಲ್ಲಿ ಮೆರೆವ || ೬ ||

ಆದಿತಾಳ
ಶ್ರೀ ಗಯಾ ಯಾತ್ರಿ ಸಾವಿತ್ರಿ ಸರಸ್ವತಿ ತೀರ್ಥ ಮಿಂದು ನಿತ್ಯ |
ಈ ಗಿರಿಗಳಲ್ಲಿ ಇಷ್ಟಾರ್ಥ ಬೇಡುವುದು |
ಯೋಗಿ ಜನರು ಇಲ್ಲಿ ಧ್ಯಾನ ಮಾಡುವದು, ಲೇ – |
ಸಾಗಿ ನಾನಾ ತೀರ್ಥದಲ್ಲಿ ವಾಸವಾಗಿ |
ಭೋಗಭೂಷಣ ಬಹುರೂಪದಲ್ಲಿ ನಿಂದು |
ಸಾಗರತಲ್ಪನ ಧ್ಯಾನ ಮಾಡುವನು |
ಆಗಮೋಕ್ತಿಯಿಂದ ಸಿದ್ಧವಾಗಿದೆ ಕೇಳಿ |
ನಾಗವಹನ ಮಿಕ್ಕಾ ದೇವಾದಿಗಳು, ಅನು – |
ರಾಗ ಮತಿಯಲ್ಲಿ ಹರಿಯ ಪೂಜಿಸುವರು |
ಈ ಗಯಾದ ಯಾತ್ರೆ ಮಾಡೆ ನೂರೊಂದು ಕುಲದವರು |
ಸಾಗುವರು ಸರ್ವಬಾಧೆ ಗೆದ್ದು ಹರಿಪುರಕೆ |
ಭಾಗೀರಥಿ ಜನಕ ವಿಜಯವಿಠಲ ನಂಘ್ರಿಗೆ |
ಬಾಗಿ ಸಮಸ್ತ ಸೌಖ್ಯ ಪಡೆದು ಧನ್ಯನಾಗಿ || ೭ ||

ಜತೆ
ಪಿತ್ರಾದಿಕುಲ ಇಲ್ಲಿ ಉದ್ಧಾರವಾಗುವದು |
ಗೋತ್ರದೊಳಗೆ ಇಪ್ಪಾ ವಿಜಯವಿಠಲ ಬಂಧೂ ||


SrI vijayadAsArya kRuta gayAda mahAtme suLAdi
rAga: haMsAnaMdi

dhruvatALa
SrI gayAda yAtri mADi siddha sAdhya mAnavaru |
AgamOktiyiMda tiLidunODi |
BOgadAseya biTTu BakutimArgadiMda |
yOgi janaru saMgaDadiMdali |
yAga modalAda karmakalApaMgaLu |
tyAgamADidaru dOShavillA |
sAgi baMdu illi nUroMdu kulava lE – |
sAgi uddharisabEku trikarNadI |
BAgAdeyAdava dvEShadiMdali bara – |
lAgi muktiyuMTu pitrAdigE |
IgalAgennadiri kaMDa mAtura balu |
vEgAdiMdali narakA dUrAgOvU |
sAgaraSAyi namma vijayaviThala naMGri |
jAgumADade nenese samasta kAryasiddhi || 1 ||

maTTatALa
parama prItiyiMda PalguNi SrAddhavanu |
viracisi vinayadali prathama divasadalli |
taruvAya kamalAsana tIrthaprEta Sileyu |
carisi caturanAgi eraDane sthAnada – |
li rAma parvatarAmA sarOvara kAkabali |
eraDeraDU oMdU sthaLa oMdE divasa |
karaNaSuddhiyiMda piMDa pradAnavagaidu |
surasArvaBauma vijayaviThala gadA – |
dharana prItibaDisi kulavanu uddharisi || 2 ||

rUpakatALa
uttara mAnasa kanaka tIrtha sUrya |
hattili dakShiNa mAnasa madhukulyA |
satyavAgi aidu sthAnadalli tamma |
pitRugaLanuddharise alliMdA marudivasA |
mAtemAtaMga dharmakUpa aSvattha |
tattaLisuva brahmakuMDaka kASvAna |
pratyEkavAgi piMDa pradAnava gaidu |
pitRumAtRuvaMSa gatige poMdisuvadu |
satyasaMkalpa vijayaviThala rEya |
Atmasammata pAlisutippa pratidina || 3 ||

triviDitALa
initu mADida mEle piShThayaLLu paramAnna |
GanakShIra tarpaNa dIpava viracisi |
aNOraNiyAda SrI viShNumUrtiya matte |
vanajAsanA rudra iMdra skaMdArkAbjA |
analaidu gaNESvara krOMcakalaSOdBava |
muni kANva dadhici mAtaMgA kaSyapamuni |
eNisi hattoMBattu pAdada mEle sa – |
dguNadiMda pUrvOkta prakAramALpadU |
guNapUrNa vijayaviThala gadAdharage vaM – |
dane mADu gajarUpadallige baMdu niMdU || 4 ||

JaMpetALa
BakutiyiMdali mUlavaTadalli SrAddhavanu |
sakala gOtragaLu uddhArArthavAgi |
lakumi kuMDa gadA lOla karnikeyalli |
maKa samanAda piMDagaLaniTTU |
BakutiyiMdali kShEtravAsigaLa pUjisi |
suKabaDisi vaTadalli piMDa pradAnavagaidu |
kakulAti sallA nimagelli I nidhiyalli |
duHKadiMda kaDebiddu pOpa naranu |
aKiLa lOkESa siri vijayaviThalarEyA |
akaLaMka janaroDane iDuva karuNadali || 5 ||

aTTatALa
sItarAma gaya gaya SIrSha gaya rUpa |
nItA muMDa pRuShThagiri Adigaya muMde |
dhauta pApa BIma gaya gOpAdavu |
vaitaraNi tIrtha initu sthAnadalli |
kAturadiMdali piMDa pradAnava |
mAtA pitRugaLigOsuga svAmi kaiyalli koTTukoMDADi |
AtumArthavAgi dadhyAnnada piMDa |
dAta janArdana svAmiya kaiyalli |
tA tRuptiyiMdali tilarahitavAgi |
prItiyiMdali koTTu stOtrava mADI |
gAtura tolagidAgali mudadiMda pra – |
KyAta viShNu pAdadalli hAkeMdu Ba -|
kUtiyiMdali pELi |
saMtOShavahudu hEya dAnava hara
vijayaviThalarEyA |
BUtaLadoLage I teradalli mereva || 6 ||

AditALa
SrI gayA yAtri sAvitri sarasvati tIrtha miMdu nitya |
I girigaLalli iShTArtha bEDuvudu |
yOgi janaru illi dhyAna mADuvadu, lE – |
sAgi nAnA tIrthadalli vAsavAgi |
BOgaBUShaNa bahurUpadalli niMdu |
sAgaratalpana dhyAna mADuvanu |
AgamOktiyiMda siddhavAgide kELi |
nAgavahana mikkA dEvAdigaLu, anu – |
rAga matiyalli hariya pUjisuvaru |
I gayAda yAtre mADe nUroMdu kuladavaru |
sAguvaru sarvabAdhe geddu haripurake |
BAgIrathi janaka vijayaviThala naMGrige |
bAgi samasta sauKya paDedu dhanyanAgi || 7 ||

jate
pitrAdikula illi uddhAravAguvadu |
gOtradoLage ippA vijayaviThala baMdhU ||

Leave a Reply

Your email address will not be published. Required fields are marked *

You might also like

error: Content is protected !!