Composer : Shri Gopaladasaru
ವಿಜಯರಾಯರ ನೆನೆದು ದಿಗ್ವಿಜಯ ಮಾಡಿರೋ |
ಋಜುಮಾರ್ಗ ಪಿಡಿದಿನ್ನು | ನಿಜಪುರಕೆ ಸೇರಿಪರೋ || ಪ ||
ಶ್ರವಣ ಮನನವು ನಿಧಿ ಧ್ಯಾಸನವು ಮಾಡುವಾಗ |
ಕವನವ ರಚಿಸಿ ನಿತ್ಯ ಕುಳ್ಳಿರುವಾಗ |
ಭುವನೇಶನ ತತ್ವ ವಿವರವನು ಮಾಡುವಾಗ |
ಪವನಮತದಿ ಸದಾಚಾರ ಕರ್ಮವನು ಮಾಡುತ || ೧ ||
ಹರಿದಿನದಲಿ ಉತ್ಸಾಹ ಜಾಗರವ ಮಾಡುವಾಗ |
ಹರಿಯಾತ್ರೆ ತೀರ್ಥಗಳ ಚರಿಸುವಾಗ |
ಹರಿನಾಮ ಕೀರ್ತನೆಯ ಒರದೊರದು ಪೇಳ್ವಾಗ |
ಪರಿಪರಿ ವೃತ ಚಾಂದ್ರಾಯಣಿಯ ಚರಿಸುವಾಗ || ೨ ||
ಅರಸುಗಳಿಂದ ಆದರಿಸಿಕೊಂಬುವಾಗ |
ಕರಕರಿಯ ಸಂಸಾರದಿ ತೊಳಲುವಾಗ |
ಕರವೆತ್ತಿ ದಾನವನು ಕೊಡುವಾಗ ಕೊಂಬುವಾಗ |
ದುರಿತ ಭಯಗಳು ತಡಹಿ ಬಿಡುವುವಾಗ || ೩ ||
ದ್ವೈತ ಅದ್ವೈತ ಪ್ರಸಂಗಗಳು ಮಾಡುವಾಗ |
ಶೈತ್ಯವಾತ ಪಿತ್ತವನು ತೊಡರಿದಾಗ |
ನೀತವಾದ ಮಂತ್ರ ಜಪಕೆ ಕುಳ್ಳಿರುವಾಗ |
ವಾತ ನಿರೋಧಿಸಿ ಪ್ರಾಣಾಯಾಮ ಮಾಡುವಾಗ || ೪ ||
ವರಗಳನು ಬೇಡುವಾಗ ವರಗಳನು ಕೊಡುವಾಗ |
ಶರಣು ಜನರಿಂದ ಸೇವೆ ಕೈಕೊಳುವಾಗ |
ಮರಿಯದೆ ಹರಿಸ್ಮೃತಿಯ ಮನದೊಳಗೆ ಮಾಡುವಾಗ |
ಪರಿಪರಿಯ ಸುಖ ರಸವು ಸವಿವುವಾಗ || ೫ ||
ವಿ ಯೆಂದು ಜಪಿಸಲು ವಿರಕುತಿ ದೊರಕುವದು |
ಜ ಯೆನ್ನೆ ಜನನಮರಣ ನಾಶವು |
ಯ ಯನ್ನೆ ಯೆಲ್ಲದಕ್ಕಿಂತ ಭಕುತ್ಯಧಿಕಿತ್ತು |
ರಾಯೆನ್ನೆ ರಾಯರಾಯರನ ತೋರ್ಪುವುದು || ೬ ||
ಹರಿಯೆ ನಿರ್ದೋಷ ಜ್ಞಾನಾನಂದ ಪರಿಪೂರ್ಣ |
ಹರಿಯೆ ಸರ್ವತಂತ್ರ ಸ್ವತಂತ್ರನು |
ಸಿರಿ ಅಜಭವರೆಲ್ಲ ಪರಿವಾರ ಹರಿಗೆಂದು |
ಗುರುಗತ ಗೋಪಾಲವಿಠಲನ್ನ ಸ್ಮರಿಸುತ || ೭ ||
vijayarAyara nenedu digvijaya mADirO |
RujumArga piDidinnu | nijapurake sEriparO || pa ||
SravaNa mananavu nidhi dhyAsanavu mADuvAga |
kavanava racisi nitya kuLLiruvAga |
BuvanESana tatva vivaravanu mADuvAga |
pavanamatadi sadAcAra karmavanu mADuta || 1 ||
haridinadali utsAha jAgarava mADuvAga |
hariyAtre tIrthagaLa carisuvAga |
harinAma kIrtaneya oradoradu pELvAga |
paripari vRuta cAMdrAyaNiya carisuvAga || 2 ||
arasugaLiMda AdarisikoMbuvAga |
karakariya saMsAradi toLaluvAga |
karavetti dAnavanu koDuvAga koMbuvAga |
durita BayagaLu taDahi biDuvuvAga || 3 ||
dvaita advaita prasaMgagaLu mADuvAga |
SaityavAta pittavanu toDaridAga |
nItavAda maMtra japake kuLLiruvAga |
vAta nirOdhisi prANAyAma mADuvAga || 4 ||
varagaLanu bEDuvAga varagaLanu koDuvAga |
SaraNu janariMda sEve kaikoLuvAga |
mariyade harismRutiya manadoLage mADuvAga |
paripariya suKa rasavu savivuvAga || 5 ||
vi yeMdu japisalu virakuti dorakuvadu |
ja yenne jananamaraNa nASavu |
ya yanne yelladakkiMta Bakutyadhikittu |
rAyenne rAyarAyarana tOrpuvudu || 6 ||
hariye nirdOSha j~jAnAnaMda paripUrNa |
hariye sarvataMtra svataMtranu |
siri ajaBavarella parivAra harigeMdu |
gurugata gOpAlaviThalanna smarisuta || 7 ||
Leave a Reply