Vijayarayara dinadi

Composer : Shri Amba bai

By Smt.Shubhalakshmi Rao

ವಿಜಯರಾಯರ ದಿನದಿ ವಿಜಯ ಪಯಣವ ಮಾಳ್ಪೆ
ನಿಜದಾಸಕೂಟ ಪಥದಿ ||ಪ.||

ವಿಜಯ ಸಖಪ್ರಿಯ ತಂದೆ ಮುದ್ದುಮೋಹನ ಗುರು
ವಿಜಯವಿತ್ತುದ್ಧರಿಸಲಿ ದಯದಿ ||ಅ.ಪ.||

ಧರೆಯಲ್ಲಿ ಪುಟ್ಟಿ ಮುವ್ವತ್ತಾರು ವತ್ಸರವು
ಸರಿದುದೀ ಬಹುಧಾನ್ಯಕೆ,
ವರಗುರು ಉಪದೇಶ ಅಂಕಿತವು ಲಭಿಸಿ ಎಂ
ಟೊರುಷವಾಗಲಿಂದಿಗೆ,
ಪರಮ ಕೃಪೆಯಿಂದ ದಾಸತ್ವ ಸಿದ್ಧಿಸಲೆಂಬ
ವರವಿತ್ತ ಕಾಲ ಒದಗೆ,
ನರಹರಿಯೆ ನಿನ್ನ ಚರಣವೆ ಎನಗೆ ಗತಿ ಎಂದು
ನೆರೆ ನಂಬಿ ಪೊರಟೆನೀಗ ಬೇಗ [೧]

ಸರುವ ವಸ್ತುಗಳಲ್ಲಿ ಇರುವ ಅಭಿಮಾನ ಶ್ರೀ
ಹರಿ ನಿನ್ನ ಪದದಲಿರಿಸು,
ವರ ಗುರು ಚರಣದಲಿ ಸದ್ಭಕ್ತಿ ಸರ್ವದಾ
ಸ್ಥಿರವಾಗಿ ನೆಲೆಯಗೊಳಿಸು,
ಹೊರಗೊಳಗೆ ಹಿಂದುಮುಂದರಘಳಿಗೆ ಬಿಡದೆ ನೀ
ನಿರುತದಲಿ ಸಂರಕ್ಷಿಸು,
ಹರಿದಾಸ ಮಾರ್ಗದಲಿ ಹರುಷದಲಿ ನಲಿವಂತೆ
ವರಮತಿಯ ದಯಪಾಲಿಸು ಹರಿಯೆ [೨]

ಗುರುಕರುಣ ಕವಚ ತೊಟ್ಟಿರುವ ಎನಗಿನ್ನಾವ
ಪರಿಯ ಭಯವಿಲ್ಲವೆಂದು,
ಸ್ಥಿರವಾಗಿ ನಂಬಿ ಪೊರ ಮಡುವೆನೀ ಶುಭದಿನದಿ
ಗುರುವಾರ ಗುರು ಕೃಪೆಯಲಿ,
ಪರಿಪರಿಯ ದುಷ್ಕರ್ಮ ಪರಿಹರಿಸಿ ಕಾಯುವೊ
ಗುರುಚರಣ ಧ್ಯಾನಬಲದಿ,
ಮರುತಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ
ಕರುಣದಲಿ ಒಲಿದು ಪೊರೆಯೊ ಹರಿಯೆ [೩]


vijayarAyara dinadi vijaya payaNava mALpe
nijadAsakUTa pathadi ||pa.||

vijaya saKapriya taMde muddumOhana guru
vijayavittuddharisali dayadi ||a.pa.||

dhareyalli puTTi muvvattAru vatsaravu
saridudI bahudhAnyake,
varaguru upadESa aMkitavu laBisi eM
ToruShavAgaliMdige,
parama kRupeyiMda dAsatva siddhisaleMba
varavitta kAla odage,
narahariye ninna caraNave enage gati eMdu
nere naMbi poraTenIga bEga [1]

saruva vastugaLalli iruva aBimAna SrI
hari ninna padadalirisu,
vara guru caraNadali sadBakti sarvadA
sthiravAgi neleyagoLisu,
horagoLage hiMdumuMdaraGaLige biDade nI
nirutadali saMrakShisu,
haridAsa mArgadali haruShadali nalivaMte
varamatiya dayapAlisu hariye [2]

gurukaruNa kavaca toTTiruva enaginnAva
pariya BayavillaveMdu,
sthiravAgi naMbi pora maDuvenI SuBadinadi
guruvAra guru kRupeyali,
paripariya duShkarma pariharisi kAyuvo
gurucaraNa dhyAnabaladi,
marutAMtaryAmi SrI gOpAlakRuShNaviThThala
karuNadali olidu poreyo hariye [3]

Leave a Reply

Your email address will not be published. Required fields are marked *

You might also like

error: Content is protected !!