Composer : Shri Karpara Narahari dasaru
ವಿಜಯರಾಯ ಭಜಿಸೋ ಹೇ ಮನುಜಾ ನೀ ||ಪ||
ವಿಜಯರಾಯರ ಪಾದ ಭಜಿಸುವ ಮನುಜರ
ವೃಜಿನ ವಾರಿಧಿಗೆ ಕುಂಭಜರೆನಿಸಿದ ಗುರು ||ಅ.ಪ||
ಮೊದಲು ಬೃಗುಮುನಿರೂಪದಿ ಶೀ-
ಘ್ರದಿ ಪೋಗಿ ಬರಲು ಶ್ರೀಹರಿ ಲೋಕದಿ,
ವಿಧಿ ವಿಷ್ಣು ಶಿವರೊಳು
ಪದುಮನಾಭನಕಿಂತ ಅಧಿಕರಿಲ್ಲೆಂದು
ನಾರದ ಮುನಿಗರುಹಿದ [೧]
ಜಗದೊಳು ಸಕಲ ಕ್ಷೇತ್ರ ತೀರ್ಥಗಳ
ಮಹಿಮೆಯ ವರ್ಣಿಸುತ, ಖಗರಾಜ
ಗಮನ ಶ್ರೀ ಭಗವದ್ಗುಣಗಳನ್ನು
ಬಗೆ ಬಗೆ ಪದ ಸುಳಾದಿಗಳಿಂದ ತುತಿಸಿದ [೨]
ಕಾಶಿಯೊಳಗೆ ಸಂಪ್ರಾಪ್ತ ಪುರಂದರ
ದಾಸರಿಂದಲಿ ಅಂಕಿತ
ಶೇಷಶಯನ ಶ್ರೀನಿವಾಸ ’ಕಾರ್ಪರನರ-
ಕೇಸರಿ ’ ಗತಿ ಪ್ರಿಯ ದಾಸರೆಂದೆನಿಸಿದ [೩]
vijayarAya BajisO hE manujA nI ||pa||
vijayarAyara pAda Bajisuva manujara
vRujina vAridhige kuMBajarenisida guru ||a.pa||
modalu bRugumunirUpadi SI-
Gradi pOgi baralu SrIhari lOkadi,
vidhi viShNu SivaroLu
padumanABanakiMta adhikarilleMdu
nArada munigaruhida [1]
jagadoLu sakala kShEtra tIrthagaLa
mahimeya varNisuta, KagarAja
gamana SrI BagavadguNagaLannu
bage bage pada suLAdigaLiMda tutisida [2]
kASiyoLage saMprApta puraMdara
dAsariMdali aMkita
SEShaSayana SrInivAsa ‘kArparanara-
kEsari ‘ gati priya dAsareMdenisida [3]
Leave a Reply