Composer : Shri Gurugovinda dasaru
ವಿಜಯರಾಯ | ಗುರು | ವಿಜಯರಾಯ [ಪ]
ವಿಜಯರಾಯ | ಗುರು | ವಿಜಯರಾಯ [ಅ.ಪ.]
ಎರಡನೆ ಯುಗದೊಳು ವಿಜಯರಾಯ | ಸುರಲೀಲ ಕಪಿಯಾದ್ಯೊ ವಿಜಯರಾಯ |
ಹರಿಕಾರ್ಯಕನುವಾಗಿ ವಿಜಯರಾಯ | ಹರಿಕರುಣ ಪಾತ್ರನೆ ವಿಜಯರಾಯ | ೧
ಶಕಟ ಭಂಜನ ಪಾದ ವಿಜಯರಾಯ | ಸುಕಮಲವ ಸೇವಿಸೆ ವಿಜಯರಾಯ |
ಪ್ರಕಟ ಯಾದವರಲ್ಲಿ ವಿಜಯರಾಯ | ನಿಕಂಪಾನೆನಿಸೀದೆ ವಿಜಯರಾಯ | ೨ |
ವರ ಕಲಿಯುಗದೊಳು ವಿಜಯರಾಯ | ಪುರಂದರ ದಾಸರೋಳ್ ವಿಜಯರಾಯ |
ತುರುಕರು ನೀನಾಗಿ ವಿಜಯರಾಯ | ಹರಿಚರಿತೆ ಕೇಳಿದೆ ವಿಜಯರಾಯ |೩|
ಧರೆ ಸುರ ಜನುಮದಿ ವಿಜಯರಾಯ | ಗುರು ಮಧ್ವಪತಿಯಾಗಿ ವಿಜಯರಾಯ |
ಗುರು ಚರಣ ಸೇವಿಸಿ ವಿಜಯರಾಯ | ಪರ ವಿದ್ಯಾರ್ಚಿಸಿದ್ಯೊ ವಿಜಯರಾಯ | ೪|
ಗುರು ವಾಜ್ಞದಿ ಮತ್ತೆ ವಿಜಯರಾಯ | ಶಿರಪಾದ ಪೂರೈಸೆ ವಿಜಯರಾಯ |
ವರ ಭೂಸುರನಾಗಿ ವಿಜಯರಾಯ | ಹರಿಚರಿತೆ ಪೇಳಿದೆ ವಿಜಯರಾಯ | ೫|
ವರಯುವ ವತ್ಸರ ವಿಜಯರಾಯ | ಎರಡು ನಾಲ್ಕರ ಮಾಸ ವಿಜಯರಾಯ |
ಎರಡು ಐದನೆ ದಿನ ವಿಜಯರಾಯ | ಗುರುವಾರ ಪ್ರಹರದಿ ವಿಜಯರಾಯ | ೬|
ವರಯೋಗ ಮಾರ್ಗದಿ ವಿಜಯರಾಯ | ಗುರು ಗೋವಿಂದ ವಿಠ್ಠಲನ ವಿಜಯರಾಯ |
ಚರಣಾಬ್ಜ ಸೇರುತ ವಿಜಯರಾಯ | ಮೆರೆವೆ ಭಕ್ತರ ಮನದಿ ವಿಜಯರಾಯ | ೭|
vijayarAya | guru | vijayarAya [pa]
vijayarAya | guru | vijayarAya [a.pa.]
eraDane yugadoLu vijayarAya | suralIla kapiyAdyo vijayarAya |
harikAryakanuvAgi vijayarAya | harikaruNa pAtrane vijayarAya | 1
SakaTa BaMjana pAda vijayarAya | sukamalava sEvise vijayarAya |
prakaTa yAdavaralli vijayarAya | nikaMpAnenisIde vijayarAya | 2 |
vara kaliyugadoLu vijayarAya | puraMdara dAsarOL vijayarAya |
turukaru nInAgi vijayarAya | haricarite kELide vijayarAya |3|
dhare sura janumadi vijayarAya | guru madhvapatiyAgi vijayarAya |
guru caraNa sEvisi vijayarAya | para vidyArchisidyo vijayarAya | 4|
guru vAj~jadi matte vijayarAya | shirapAda pUraise vijayarAya |
vara BUsuranAgi vijayarAya | haricarite pELide vijayarAya | 5|
varayuva vatsara vijayarAya | eraDu nAlkara mAsa vijayarAya |
eraDu aidane dina vijayarAya | guruvAra praharadi vijayarAya | 6|
varayOga mArgadi vijayarAya | guru gOviMda viThThalana vijayarAya |
caraNAbja sEruta vijayarAya | mereve Baktara manadi vijayarAya | 7|
Leave a Reply