Tande Vijayaraya

Composer : Shri Mohana dasaru

Kum.Shripriya Rao & Smt.Shubha Rao

ತಂದೆ ವಿಜಯರಾಯ ಈ ವ್ಯಾಳ್ಯಗೆ
ಬಂದ್ಯೊ ವಿಜಯರಾಯ ||ಪ||
ಹಿಂದೇಸು ಜನುಮವೊ ಮುಂದೇಸು ಜನುಮವೊ
ಒಂದು ತಿಳಿಯೆ ನಾ ಎಂದೆಂದಿಗು ಯೆನ್ನ ||ಅ.ಪ||

ಸೂರ್ಯನ ಸುತನಂತೆ ಅಲ್ಲಿ
ಮಹಾ ಶೌರ್ಯ ದೂತರಂತೆ ||
ಕಾರ್ಯಾಕಾರ್ಯವು ತಿಳಿಯದೆ ಪರಿಚಾರ್ಯರ್
ಯೆಳೆಯುತಿರೆ ಭಾರ್ಯಳು ಮೊರೆಯಿಡೆ ||೧||

ಅದು ಧೈರ್ಯವು ನೋಡಿ ಸುದತಿ ತನ್ನ
ಹೃದಯ ಬದ್ಧ ಮಾಡಿ ||
ಮಧುಸೂದನನೆ ಮುದ ತೀರಿತು ಎಂದು
ವದರಿದಳ್ ವದರಿದಳ್ ವಿಜಯರಾಯರೆಂದು ||೨||

ಕರಗಳನೇ ಕಟ್ಟಿ ಸೆಳೆಯುತಿರೆ
ದೊರೆಗಳನೇ ಮುಟ್ಟಿ ||
ಸಿರಿ ಮೋಹನ ವಿಠ್ಠಲನ ಪಾದವ ತೋರಿ
ಧರೆಗೆ ತಂದು ಬಿಟ್ಯೊ ಕರುಣಾಳುವೆ ಯೆನ್ನ ||೩||


taMde vijayarAya I vyALyage
baMdyo vijayarAya ||pa||
hiMdEsu janumavo muMdEsu janumavo
oMdu tiLiye naa eMdeMdigu yenna ||a.pa||

sUryana sutanaMte alli
mahA Saurya dUtaraMte ||
kAryAkAryavu tiLiyade paricAryar
yeLeyutire BAryaLu moreyiDe ||1||

adu dhairyavu nODi sudati tanna
hRudaya baddha mADi ||
madhusUdanane muda tIritu eMdu
vadaridaL vadaridaL vijayarAyareMdu ||2||

karagaLanE kaTTi seLeyutire
doregaLanE muTTi ||
siri mOhana viThThalana paadava tOri
dharege taMdu biTyo karuNALuve yenna ||3||

Leave a Reply

Your email address will not be published. Required fields are marked *

You might also like

error: Content is protected !!