Pranesha dasaraya

Composer : Shri Venkata vittala

By Smt.Shubhalakshmi Rao

Shri Pranesha Dasaru 1736 – 1822
Birth place – Lingasuguru
Ankita given by – Shri Jagannathadasaru
Gurugalu – Sri Jagannathadasaru & Sri Rotti Varadacharyaru

ಪ್ರಾಣಪತಿ ಪದದ್ವಂದ್ವ ಪಂಕಜಾಸಕ್ತಂ ಮಾನಸಂ |
ಶಮಾದಿ ಗುಣ ಸಂಯುಕ್ತಂ ಶ್ರೀ ಪ್ರಾಣೇಶ ಗುರುಂ ಭಜೇ ||
prANapati padadvaMdva paMkajAsaktaM mAnasaM |
SamAdi guNa saMyuktaM SrI prANESa guruM BajE ||


ಪ್ರಾಣೇಶ ದಾಸಾರ್ಯರ ಭಜಿಪರಿಗೆ
ಏನೇನೂ ಭಯವಿಲ್ಲವೋ |ಪ|
ಸಾನುರಾಗದಿಂದಲಿ ಜ್ಞಾನ ಭಕುತಿಯನಿತ್ತು |
ಶ್ರೀನಿವಾಸನ ಪಾದ ಕಾಣಿಸುವರು ಬಿಡದೆ |ಅ.ಪ|

ದಾಸರೊಳಗ್ರೇಸರ ಜಗನ್ನಾಥ
ದಾಸಾಖ್ಯ ಗುರುವರರ |
ಏಸೇಸು ಕಾಲ ಸೇವಿಸುತ ವರಲ್ಲಿದ್ದು
ಲೇಸಾಗಿ ಮುದ್ರೆ ಪ್ರಾಣೇಶವಿಠ್ಠಲನೆಂದು |
ತೋಷದಿಂದಲಿ ಕೊಂಡು ಶ್ರೀ ಜಗದೀಶ
ಗುಣಗಳ ಕವನರೂಪದಿ |
ದೇಶದೇಶದಿ ಮೆರೆಸಿ ಭಕುತಿಯ
ಸೂಸುತಿಪ್ಪರು ಭಕುತ ಜನರಿಗೆ || ೧ ||

ಶ್ರೀರಂಗ ಪದಗಳ ಅರವಿಂದದಿ
ಮನ ಆರಡಿಯಂತೆ ಧೀರ |
ಸೇರಿಸಿ ಜಪಗಳ ಪೂರೈಸುತಿಹರು
ಪೂರಕಾದಿಗಳಿಂದ ಕ್ರೂರರಾರ್ವರ ಗೆದ್ದು |
ತೋರುವರು ತತ್ವಧಿಕ ಸುರರಿಗೆ
ಪ್ರೇರಕನು ಶ್ರೀಹರಿಯೆ |
ಇನ್ನೊಬ್ಬರು ಇಲ್ಲೆಂದೆನುತ
ಇಹ ಸಂಸಾರದಲಿ ಆಚರಿಸುತಿಪ್ಪರು || ೨ ||

ಭೂಮಿಯೊಳವತರಿಸಿ ಸರ್ವದಾ
ಮಹಾಮಹಿಮನ ಸ್ಮರಿಸಿ |
ಹೇಮಾದಿಗಳು ಪರಕಾಮಿನಿ
ಯರುಗಳಲ್ಲಿ ಮನವಿಡದೆ
ಶ್ರೀರಾಮನಧ್ಯಾನದಿ | ಬಲು
ಪ್ರೇಮದಿಂದಲಿ ಲಯವ ಚಿಂತಿಸಿ
ಕಾಮ ಪಿತ ವೆಂಕಟವಿಠಲನಡಿ |
ತಾಮರಸಗಳ ಧೇನಿಸುತ ಹರಿಧಾಮವನು
ಸೇರಿದರು ಹರುಷದಿ || ೩||


prANESa dAsAryara Bajiparige
EnEnU BayavillavO |pa|
sAnurAgadiMdali j~jAna Bakutiyanittu |
SrInivAsana pAda kANisuvaru biDade |a.pa|

dAsaroLagrEsara jagannAtha
dAsAKya guruvarara |
EsEsu kAla sEvisuta varalliddu
lEsAgi mudre prANESaviThThalaneMdu |
tOShadiMdali koMDu SrI jagadISa
guNagaLa kavanarUpadi |
dESadESadi meresi Bakutiya
sUsutipparu Bakuta janarige || 1 ||

SrIraMga padagaLa araviMdadi
mana AraDiyaMte dhIra |
sErisi japagaLa pUraisutiharu
pUrakAdigaLiMda krUrarArvara geddu |
tOruvaru tatvadhika surarige
prErakanu SrIhariye |
innobbaru illeMdenuta
iha saMsAradali Acarisutipparu || 2 ||

BUmiyoLavatarisi sarvadA
mahAmahimana smarisi |
hEmAdigaLu parakAmini
yarugaLalli manaviDade
SrIrAmanadhyAnadi | balu
prEmadiMdali layava ciMtisi
kAma pita veMkaTaviThalanaDi |
tAmarasagaLa dhEnisuta haridhAmavanu
sEridaru haruShadi || 3||

Leave a Reply

Your email address will not be published. Required fields are marked *

You might also like

error: Content is protected !!