Charana kamalavannu

Composer : Shri Gopaladasaru

By Smt.Shubhalakshmi Rao

ಚರಣ ಕಮಲವನ್ನು ನೆನೆವೆ ನಾ | ಗುರು
ಚರಣ ಕಮಲವನ್ನು ನೆನೆವೆ ನಾ || ಪ ||

ಚರಣ ಕಮಲವನ್ನು ನೆನೆದು ನೆನೆದು | ಹರಿ
ಚರಣ ಕಮಲವ ಅರ್ಚಿಸುವೆ ನಾ || ಅ ಪ ||

ಸುರದ್ವಿಜ ವೇಷದಿಂದಲಿ ತನ್ನ | ತ್ರೀಣಿ
ಸುರಗಂಗೆಯನ್ನು ಸೇವಿಸಿದನ್ನ ||
ಸುರಮುನಿಯಿಂದುಪದೇಶನ್ನ | ಭೂ
ಸುರರ ಕರುಣ ಸಂಪಾದಿಸುವನ್ನ || ೧ ||

ಪರಮತಗಳನ್ನು ಖಂಡಿಸಿದನ್ನ | ಸತ್ಯ
ಹರಿಪರನೆಂದು ಸ್ಥಾಪಿಸಿದನ್ನ ||
ಪರತತ್ವವನ್ನು ಅರುಪಿದನ್ನ | ತನ್ನ
ವರ ಗುರುಮಧ್ವಮತ ಪೊಂದಿದಾತನ್ನ || ೨ ||

ಪರಿಪರಿ ವ್ರತಾಚರಿಸಿದನ್ನ | ಮನೋ
ದುರ್ವ್ಯಸನ ಸಂಹರಿಸಿದನ್ನ ||
ಪರಿಪರಿ ಯಾತ್ರೆ ಚರಿಸಿದನ್ನ | ನಮ್ಮ
ಗುರುವರ ಶಿರೋರತುನನ್ನ || ೩ ||

ಶುದ್ಧ ಸಂಪ್ರದಾಯಕನನ್ನ | ತತ್ವ
ತಿದ್ದಿ ಮುದ್ದಿ ಮಾಡಿದಾತನ್ನ ||
ಅದ್ವೈತ ಮತವ ದೂಷಿಸಿ ತನ್ನ | ಸಿರಿ
ಮಧ್ವಮತಕೆ ಭೂಷಿತನ್ನ || ೪ ||

ಪರಸತಿ ಪರಧನ ತೊರೆದನ್ನ | ತನ್ನ
ಪರಿಚಾರಕರಿಗ್ಹಿತ ವರದನ್ನ ||
ಹರಿನಾಮಾಮೃತವನ್ನು ಸುರಿದನ್ನ | ತನ್ನ
ಸರಿ ಬಂದ ಶಿಷ್ಯರ ಪೊರೆದನ್ನ || ೫ ||

ದೂರ ಧರಿಸಿ ಸರ್ವ ಕಂಡನ್ನ | ನಿಜ
ಪ್ರಾರಬ್ಧ ಭೋಗವ ಉಂಡನ್ನ || ತನ್ನ
ಆರಾಧಿಪರ ಅಘ ಖಂಡನ್ನ | ನಮ್ಮ
ನಾರಾಯಣನ ನಿಜ ತೋಂಡನ್ನ || ೬ ||

ವೈಷ್ಣವ ಸಿದ್ಧಾಂತ ವರದನ್ನ | ಅ –
ವೈಷ್ಣವಾಚಾರವು ತೊರದನ್ನ || ವರ
ವೈಷ್ಣವರಿಗುಪದೇಶನ್ನ | ವೀರ
ವೈಷ್ಣವರ ದಾಸವರ್ಯನ್ನ || ೭ ||

ತಪಸೇ ಸಂಸಾರವೆಂದರಿದನ್ನ | ತನ್ನ
ಸ್ವಪನದಿ ಬಂದು ತೋರಿದನ್ನ ||
ಉಪದೇಶ ಬಲಿಕೆ ಮಾಡಿದನ್ನ | ನಿಜ
ಉಪದೇಶ ಜಪಿಸಿ ಪೇಳಿದನ್ನ || ೮ ||

ವಿಜಯವಿಠಲನ ದಾಸನ್ನ | ತನ್ನ
ಭಜಿಸುವರಿಗೆ ವರದಾತನ್ನ || ಸಿರಿ
ಅಜ ಗೋಪಾಲವಿಠಲ ದೂತನ್ನ | ನಿತ್ಯ
ಭಜಿಸಿ ಬದುಕುವ ಪುಣ್ಯಾತ್ಮನ್ನ || ೯ ||


caraNa kamalavannu neneve nA | guru
caraNa kamalavannu neneve nA || pa ||

caraNa kamalavannu nenedu nenedu | hari
caraNa kamalava arcisuve nA || a pa ||

suradvija vEShadiMdali tanna | trINi
suragaMgeyannu sEvisidanna ||
suramuniyiMdupadESanna | BU
surara karuNa saMpAdisuvanna || 1 ||

paramatagaLannu KaMDisidanna | satya
hariparaneMdu sthApisidanna ||
paratatvavannu arupidanna | tanna
vara gurumadhvamata poMdidAtanna || 2 ||

paripari vratAcarisidanna | manO
durvyasana saMharisidanna ||
paripari yAtre carisidanna | namma
guruvara SirOratunanna || 3 ||

Suddha saMpradAyakananna | tatva
tiddi muddi mADidAtanna ||
advaita matava dUShisi tanna | siri
madhvamatake BUShitanna || 4 ||

parasati paradhana toredanna | tanna
paricArakarig~hita varadanna ||
harinAmAmRutavannu suridanna | tanna
sari baMda SiShyara poredanna || 5 ||

dUra dharisi sarva kaMDanna | nija
prArabdha BOgava uMDanna || tanna
ArAdhipara aGa KaMDanna | namma
nArAyaNana nija tOMDanna || 6 ||

vaiShNava siddhAMta varadanna | a –
vaiShNavAcAravu toradanna || vara
vaiShNavarigupadESanna | vIra
vaiShNavara dAsavaryanna || 7 ||

tapasE saMsAraveMdaridanna | tanna
svapanadi baMdu tOridanna ||
upadESa balike mADidanna | nija
upadESa japisi pELidanna || 8 ||

vijayaviThalana dAsanna | tanna
Bajisuvarige varadAtanna || siri
aja gOpAlaviThala dUtanna | nitya
Bajisi badukuva puNyAtmanna || 9 ||

Leave a Reply

Your email address will not be published. Required fields are marked *

You might also like

error: Content is protected !!