Composer : Shri Shyamasundara dasaru
Shri Guru Jagannatha dasaru:
1837 – 1918, Aradhane – Ashwija bahula Paadya
ಗುರುಪೂರ್ವ ಜಗನ್ನಾಥದಾಸಸ್ಯಾಮಿತ ತೇಜಸ: |
ತಸ್ಯಪಾದಾಬ್ಜ ಸಂಭೂತಾ: ರಜಾಂಸಿ ಶಿರಸಾವಹೇ |
गुरुपूर्व जगन्नाथदासस्यामित तेजस: ।
तस्यपादाब्ज संभूता: रजांसि शिरसावहे ।
gurupoorva jagannaathadaasasyaamita tEjasa: |
tasyapaadaabja sambhootaa: rajaamsi shirasaavahE |
ನಿತ್ಯ ಬಿಡದೆ ಭಜಿಸೋ | ಕೋಶಿಗಿ ಮುತ್ಯನ ಕೃಪೆ ಘಳಿಸೋ ||
ಸತ್ಯವಾಗಿ ಭವ ಕತ್ತಲೆ ಓಡಿಸಿ ಉತ್ತಮಗತಿಯನು | ಇತ್ತು ಪಾಲಿಸುವ ||ಅ.ಪ||
ಯಾತಕೆ ಅನುಮಾನ |
ಈತನೆ ಜಾತ ರೂಪ ಶಯನ |
ಜಾತದಾತಯತಿ | ನಾಥ ಶ್ರೀರಾಯರ
ಪ್ರೀತಿ ಪಡೆದ ಪಿತ | ಭ್ರಾತಾರ್ಯರು ನಿಜ [೧]
ಪುನಃ ಜಗದಿ ಜನಿಸಿ |
ಗಣಪತಿ ಅನುಚರ
ನಾಮವ ಧರಿಸಿ ಅಖಿಲ ನಿಗಮದೋಳ್ |
ಮಿನುಗುವ ಹರಿ ಗುಣಮಣಿ
ಬೆಳಕನು ಗುಣಿ ಜನಕೆ ತೋರಿಸಿದನು [೨]
ಮಂದಾಜಾತ ನಯನ |
ಶಾಮಸುಂದರ ವಿಠ್ಠಲನ
ಪೊಂದಿದ ಮಾನವಿ ಮಂದಿರ ನೊಲಿಸುತ
ಮಂದಜನರ ದಯದಿಂದ ಸಲಹುವನು [೩]
nitya biDade BajisO | kOshigi mutyana kRupe ghaLisO ||
satyavAgi Bava kattale ODisi uttamagatiyanu | ittu pAlisuva ||a.pa||
yAtake anumAna |
Itane jAta rUpa Sayana |
jAtadAtayati | nAtha SrIrAyara
prIti paDeda pita | BrAtAryaru nija [1]
punaH jagadi janisi |
gaNapati anucara
nAmava dharisi aKila nigamadOL |
minuguva hari guNamaNi
beLakanu guNi janake tOrisidanu [2]
maMdAjAta nayana |
SAmasuMdara viThThalana
poMdida mAnavi maMdira nolisuta
maMdajanara dayadiMda salahuvanu [3]
Leave a Reply