Guruve neenolidu

Composer : Shri Varadesha vittala

By Smt.Shubhalakshmi Rao

ಗುರುವೆ ನೀನೊಲಿದು ಪಾಮರತರನಾದೆನ್ನ
ಹರುಷದಿ ಕರಪಿಡಿದು,
ಪರಮ ಕರುಣದಿಂದ ಹರಿದಾಸ್ಯವಿತ್ತು ಉ –
ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ||ಪ||

ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆ
ಕರುಣಿಸೆಂದಾಜ್ಞಾಪಿಸೆ,
ತರುಳನ ಶಿರದಲಿ ಕರವಿಟ್ಟು ಕೃಪೆಯಿಂದ
ಗುರುತು ತೋರಿದಕೆ ನಾ ಪರಮಧನ್ಯನೆಂಬೆ [೧]

ಮರುತಮತದ ತತ್ವ ಹರಿಕಥಾಮೃತಸಾರ
ವರ ರಹಸ್ಯಗಳೆಲ್ಲವ,
ಸರಸವಾಗುವತೆರ ಅರಹುವೆವೆಂತೆಂಬ
ವರವಾಕ್ಯದಂತೆ ಪರಿಪಾಲಿಪುದಯ್ಯ [೨]

ಹರಿಮುನಿದರು ಗುರು ಕರುಣಿಪನೊಮ್ಮಿಗೆ
ಗುರು ಮುನಿಯೆ ಹರಿ ಪೊರೆಯ,
ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು
ನೆರೆನಂಬಿರಲು ನೀನರಿಯದಂತಿಪ್ಪುದೆ [೩]

ಮರುತ ಮತಾಬ್ಧಿ ಚಂದಿರ ಗುರುರಾಜರ
ವರಬಲದಿ ಮೆರೆವ,
ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ
ಹರಿವಲಿಯುವ ತೆರ ಕರುಣಿಸೆನ್ನಯನಿಜ [೪]

ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ
ಹರಿರೂಪ ಕಾಂಬತೆರದಿ,
ವರದೇಶ ವಿಠಲನ ಸಿರದಾಸ್ಯತನವೆಂಬ
ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ [೫]


guruve nInolidu pAmarataranAdenna
haruShadi karapiDidu,
parama karuNadiMda haridAsyavittu u –
ddharisida upakAra mareyalArenu eMdU ||pa||

varadEMdrAryaru namma SaraNanu ivanige
karuNiseMdAj~jApise,
taruLana Siradali karaviTTu kRupeyiMda
gurutu tOridake nA paramadhanyaneMbe [1]

marutamatada tatva harikathAmRutasAra
vara rahasyagaLellava,
sarasavAguvatera arahuveveMteMba
varavAkyadaMte paripAlipudayya [2]

harimunidaru guru karuNipanommige
guru muniye hari poreya,
hariya kRupege muKya guruve kAraNaneMdu
nerenaMbiralu nInariyadaMtippude [3]

maruta matAbdhi caMdira gururAjara
varabaladi mereva,
hariBaktAgraNi nimma carite baNNisuvenA
harivaliyuva tera karuNisennayanija [4]

baride bAhyAcAra viracisadale manadi
harirUpa kAMbateradi,
varadESa viThalana siradAsyatanaveMba
gurututOruvudayya gurujagannAthArya [5]

Leave a Reply

Your email address will not be published. Required fields are marked *

You might also like

error: Content is protected !!