Sri Hari Mahime Suladi – Prasannavenkata dasaru

By Smt.Nandini Sripad , Blore

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ
ಶ್ರೀಹರಿ ಮಹಿಮೆ ಸುಳಾದಿ
( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. )
ರಾಗ: ಮುಖಾರಿ
ಧ್ರುವತಾಳ
ಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವ
ಮಗನ ಪಡೆದಿರುವೆ ನಾಭಿಕಮಲದಿ
ದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆ
ಖಗಗಮನಗಣಿತಗುಣನಿಲಯ ದೇವ
ಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯ
ಮಗನುಳ್ಳ ಸಿರಿಯು ಸಂಗಡಲೆ ಮುಕುಂದ –
ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬ
ಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳು
ಮಗುವೆನಿಸಿ ಗೋಕುಲದೆಶೋದೆನಂದನರ ಮು –
ದ್ದುಗಳ ಸಲಿಸಿದೆ ಮಹಾಮಹಿಮ ಕೃಷ್ಣ
ಆಗಮಕೋಟಿಗಳು ನಿನ್ನರಸಿ ಕಾಣವು ಗಡ
ಬಗೆಯಲಳವಾರಿಗಹುದಯ್ಯ ಜೀಯ
ವಿಗಡ ಪೋಕರನಳಿಸಿ ಆತ್ಮಜೀವರ ಬೆಳು –
ವಿಗೆಯ ತೋರಿಸುವೆ ವೈಷಮ್ಯವಿದೂರ
ಜಗದಾತ್ಮ ಜಗವ್ಯಾಪ್ತ ಜಗದುದರ ಜಗದ್ವರದ
ಜಗದೇಕ ಮೂರುತಿ ಪ್ರಸನ್ನವೆಂಕಟೇಶ || ೧ ||

ಮಠ್ಯತಾಳ

ಆಟವಾಡುವ ಬಾಲನೊಳು ಜಗ –
ನ್ನಾಟಕ ನೀನೆನಿಸಿ ಜಗದರ
ಕೋಟಲೆಗೆ ನಿಯತ ಕಾರಣ ತರತಮ
ಕೋಟಿಜೀವರ ಪೃಥಗ್ಗತಿಯನೀವ ಪ್ರಸ –
ನ್ವೆಂಕಟ ಹಾಟಕಗೆ ಸಾಮ್ರಾಟ ವಿಭು ನೀ || ೨ ||

ರೂಪಕತಾಳ

ಬೊಮ್ಮಾಂಡನಂತವ ನಿರ್ಮಿಸೆತ್ತೆಳೆದಾಡಿ
ಅಮ್ಮಗೋಪಿಗಮ್ಮಿ ಬೇಡಿ
ರಮ್ಮೆಯನಾಳಿ ಗೋವಳೆಯರೊಡನೆ ಕೇಳಿ
ಒಮ್ಮೆ ಗುಂಜಿಯ ಮಾಲೆ ತಾಳಿ –
ದ್ಯಮ್ಮಮ್ಮಾಚಿಂತ್ಯಮಹಿಮ ಕ್ರೀಡಾನಂತ
ನಮ್ಮ ಪ್ರಸನ್ವೆಂಕಟ ತಿಮ್ಮ || ೩ ||

ಝಂಪೆತಾಳ

ಒರಳನೆಳೆದು ಯಮಳಾರ್ಜುನರುದ್ಧೃತ
ಸರಳತಾಣದ ಹಬ್ಬದಂದು ಮಾತುಳನೊದ್ದ
ಗರಳದಂತನ ಶಿರವೇರಿ ನಾಟ್ಯಾಡಿದ
ಅರಳದಾವರೆ ಮುಖ ಪ್ರಸನ್ನವೆಂಕಟ
ತರಳರೊಳಬಡುತ ಬೆರಳಲಗ ಪೊತ್ತ
ತರಳ ಚಿನ್ಮಯ ತರಳನೆ || ೪ ||

ತ್ರಿಪುಟತಾಳ

ಒಂದನುಳಿಸದೆಲ್ಲಾನೊಂದಿಸಿ ಜಲದೊಳಾ –
ನಂದದ ಲೀಲೆಯೊಳೊರಗಿದೆಯ
ಒಂದು ಗುಣದಿರವ ಇಂದಿರೆಗರುಹದಾ
ಒಂದ್ವಟ ಪರ್ಣದೊಳೊಂದಿದ ಬಾಲ ಮು –
ಕುಂದ ಪ್ರಸನ್ನವೆಂಕಟ ಗೋವಿಂದ || ೫ ||

ಜತೆ

ನಿನ್ನಾ ಮೂರುತಿ ನಿನ್ನಾ ಕೀರುತಿ
ನಿನ್ನಾ ಕಥಾಮೃತವೆನ್ನ ಕಣ್ಣ ಕಿವಿ
ನಾಲಿಗೆಯಲ್ಲಿ ಪೂರ್ಣಿಸು ಪ್ರಸನ್ವೆಂಕಟೇಶ ||


SrI prasanna veMkaTadAsArya viracita
SrIhari mahime suLAdi
( I suLAdiyalli jagannATaka sUtradhAriyAda SrIhariyu prapaMcakke niyAmakanAgi jIvara tAratamyavannu anusarisi avarige gatiyannu koDuttAneMdU , brahmAMDavannu nirmisuva mattu adannu laya mADuva BagavaMtana aciMtya mahimeyannu dAsAryaru sAri hELiddAre. )
rAga: muKAri
dhruvatALa
jagada jIvara nODi yukutiyali sRujisuva
magana paDediruve nABikamaladi
dRugamUraneMba mommaganihanu ninagele
KagagamanagaNitaguNanilaya dEva
maguLaidugaNeyiM mUjagava mOhipa kiriya
maganuLLa siriyu saMgaDale mukuMda –
dyugamane lOkapAvane pavitreyeMba
magaLu huTTidaLu vAmAMGriveraLoLu
maguvenisi gOkuladeSOdenaMdanara mu –
ddugaLa saliside mahAmahima kRuShNa
AgamakOTigaLu ninnarasi kANavu gaDa
bageyalaLavArigahudayya jIya
vigaDa pOkaranaLisi AtmajIvara beLu –
vigeya tOrisuve vaiShamyavidUra
jagadAtma jagavyApta jagadudara jagadvarada
jagadEka mUruti prasannaveMkaTESa || 1 ||

maThyatALa

ATavADuva bAlanoLu jaga –
nnATaka nInenisi jagadara
kOTalege niyata kAraNa taratama
kOTijIvara pRuthaggatiyanIva prasa –
nveMkaTa hATakage sAmrATa viBu nI || 2 ||

rUpakatALa

bommAMDanaMtava nirmisetteLedADi
ammagOpigammi bEDi
rammeyanALi gOvaLeyaroDane kELi
omme guMjiya mAle tALi –
dyammammAciMtyamahima krIDAnaMta
namma prasanveMkaTa timma || 3 ||

JaMpetALa

oraLaneLedu yamaLArjunaruddhRuta
saraLatANada habbadaMdu mAtuLanodda
garaLadaMtana SiravEri nATyADida
araLadAvare muKa prasannaveMkaTa
taraLaroLabaDuta beraLalaga potta
taraLa cinmaya taraLane || 4 ||

tripuTatALa

oMdanuLisadellAnoMdisi jaladoLA –
naMdada lIleyoLoragideya
oMdu guNadirava iMdiregaruhadA
oMdvaTa parNadoLoMdida bAla mu –
kuMda prasannaveMkaTa gOviMda || 5 ||

jate

ninnA mUruti ninnA kIruti
ninnA kathAmRutavenna kaNNa kivi
nAligeyalli pUrNisu prasanveMkaTESa ||

Leave a Reply

Your email address will not be published. Required fields are marked *

You might also like

error: Content is protected !!