Satsanga Suladi – Prasannavenkata dasaru

By Smt.Nandini Sripad , Blore

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ ಸತ್ಸಂಗ ಸುಳಾದಿ
( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. )

ರಾಗ: ಅಠಾಣ
ಧ್ರುವತಾಳ
ಸುಜನರಾವನ ಮನೆಯಲ್ಲುಂಡು ದಣಿದರೆ
ಅಜನಜನಕನೇವೆ ತೃಪುತನಾದನು ಗಡ
ಅಜನಜನಕ ತೃಪುತನಾದಡೆ ತಡಿಯದೆ
ತ್ರಿಜಗಜ್ಜೀವರುಂಡಂತಾಯಿತು ನೋಡಿರೊ
ಸುಜನರಿಂದುರು ವಿಷಯದ ನಿವೃತ್ತಿ
ಸುಜನ ಸಂಗವೆ ಭವಾಂಬುಧಿಗೆ ಪ್ಲವ
ಪ್ರಸನ್ನವೆಂಕಟ ಕೃಷ್ಣನೆ ಕರ್ಣಾಧಾರ || ೧ ||

ಮಠ್ಯತಾಳ
ಎಲ್ಲಿ ಹರಿಯ ಪೂಜಕರಿದ್ದ ದೇಶ
ಅಲ್ಲಿ ಗಂಗಾದಿ ನದಿಗಳ ನಿವಾಸ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು
ಸಲ್ಲಲಿತ ಪಾತ್ರ ಲಾಭವೆಲ್ಲಕ್ಕು
ಫುಲ್ಲಲೋಚನ ಪ್ರಸನ್ನವೆಂಕಟ ಕೃಷ್ಣನ
ಬಲ್ಲ ಭಾಗ್ಯನಿಧಿಗಳ ಬರವೆಲ್ಲಿ
ಅಲ್ಲಿ ಸರ್ವಸಂಪದ ಶ್ರೇಯಸಕ್ಕು || ೨ ||

ರೂಪಕತಾಳ

ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬ್ರಾಹ್ಮರಿದ್ದಲ್ಲಿ ಪರಬ್ರಹ್ಮನಿಪ್ಪನಾಗಿ
ಬೊಮ್ಮನಲ್ಲಿ ವಿಶ್ವವಿಪ್ಪದು ತಪ್ಪುದ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ
ಬೊಮ್ಮನ ಪ್ರತಿಮರು ಬ್ರಹ್ಮಜ್ಞ ಬ್ರಾಹ್ಮರು
ಬ್ರಾಹ್ಮರ ದೈವ ಪ್ರಸನ್ವೆಂಕಟ ಕೃಷ್ಣ
ಬ್ರಹ್ಮವಿದ್ಯಾ ತಪೋಪೂರ್ಣ ಹೃದಯರಾದ || ೩ ||

ಅಟ್ಟತಾಳ

ಪುಷ್ಕರತ್ರಯ ಕುರುಕ್ಷೇತ್ರ ಪುಲ –
ಹಾಶ್ರಮ ಗಯಾ ಪ್ರಯಾಗ ಶ್ರೀ –
ಪುಷ್ಕರಾಕ್ಷನ ದಾಸರಲ್ಲಿ ನೈ –
ಮಿಷಾರಣ್ಯ ಫಲ್ಗುಶೇತು ಕು –
ಶಸ್ಥಳ ಮಧುರಾಪುರವು ಪ್ರಭಾ –
ಸಕ್ಷೇತ್ರವು ವಾರಣಾಸಿ ಬಿಂದುಸರ ಪಂ –
ಪಾಕ್ಷೇತ್ರವು ಶ್ರೀಪ್ರಸನ್ನವೆಂಕಟ
ಕೃಷ್ಣ ತೀರ್ಥಚರಣ ಶ್ರೀ –
ಪುಷ್ಕರಾಕ್ಷನ ದಾಸರಲ್ಲಿ || ೫ ||

ಏಕತಾಳ

ನಾರಾಯಣಾಶ್ರಮ ನಂದಾಶ್ರಮ ಸೀ –
ತಾರಾಮಾಶ್ರಮ ಸರ್ವಾಶ್ರಮದಲಿ
ನೈರಂತರವಾಸಕೆ ಸಹಸ್ರಾಧಿಕವು
ಶ್ರೀರಮಣನ ಶರಣರು ಕೊಂಡರೆ
ಮೇರು ಮಹೇಂದ್ರವು ಮಲಯಾದಿ ಕುಲಗಿರಿ
ಭೂರಿಪುಣ್ಯದ ಧರ್ಮಾದಿ ಫಲಸ್ಥಳ
ಕಾರುಣ್ಯನಿಧಿ ಪ್ರಸನ್ನವೆಂಕಟ ಕೃಷ್ಣ
ಚಾರು ಚರಣ ಚಾರಕರೆ ಪಾವನರು || ೬ ||

ಜತೆ
ಸುಜ್ಞಜನರ ಪ್ರಿಯ ಪ್ರಸನ್ವೆಂಕಟಕೃಷ್ಣ
ಸುಜ್ಞರೆ ಹರಿಪ್ರಿಯರಹರೆಂದೆಂದು || ೭ ||


SrI prasanna veMkaTadAsArya viracita satsaMga suLAdi
( dAsaru sajjanara saMgavannu , adariMduMTAguva AdhyAtmika lABAtiSayagaLannu eLe^^eLeyAgi I suLAdiyalli biDisi hELiddAre. paramaBAgavataru , sAdhusaMtaru , BagavadBaktaru BOjana svIkarisidare adariMduMTAguva prayOjanavannu hELuttA , sajjana saMgavu janara viShaya nivRuttiyannu mADuvudallade , BavasAgaravannu dATisuva teppavAgaballadu , BagavadBaktara sahavAsavE mOkShakke sAdhana eMdu BAgavatada ASayavannellA illi vyaktapaDisiddAre. )

rAga: aThANa
dhruvatALa
sujanarAvana maneyalluMDu daNidare
ajanajanakanEve tRuputanAdanu gaDa
ajanajanaka tRuputanAdaDe taDiyade
trijagajjIvaruMDaMtAyitu nODiro
sujanariMduru viShayada nivRutti
sujana saMgave BavAMbudhige plava
prasannaveMkaTa kRuShNane karNAdhAra || 1 ||

maThyatALa
elli hariya pUjakaridda dESa
alli gaMgAdi nadigaLa nivAsa
alli sarvasaMpada SrEyasakku
sallalita pAtra lABavellakku
PullalOcana prasannaveMkaTa kRuShNana
balla BAgyanidhigaLa baravelli
alli sarvasaMpada SrEyasakku || 2 ||

rUpakatALa

brahmavidyA tapOpUrNa hRudayarAda
brAhmariddalli parabrahmanippanAgi
bommanalli viSvavippadu tappuda
brahmavidyA tapOpUrNa hRudayarAda
bommana pratimaru brahmaj~ja brAhmaru
brAhmara daiva prasanveMkaTa kRuShNa
brahmavidyA tapOpUrNa hRudayarAda || 3 ||

aTTatALa

puShkaratraya kurukShEtra pula –
hASrama gayA prayAga SrI –
puShkarAkShana dAsaralli nai –
miShAraNya PalguSEtu ku –
SasthaLa madhurApuravu praBA –
sakShEtravu vAraNAsi biMdusara paM –
pAkShEtravu SrIprasannaveMkaTa
kRuShNa tIrthacaraNa SrI –
puShkarAkShana dAsaralli || 5 ||

EkatALa

nArAyaNASrama naMdASrama sI –
tArAmASrama sarvASramadali
nairaMtaravAsake sahasrAdhikavu
SrIramaNana SaraNaru koMDare
mEru mahEMdravu malayAdi kulagiri
BUripuNyada dharmAdi PalasthaLa
kAruNyanidhi prasannaveMkaTa kRuShNa
cAru caraNa cArakare pAvanaru || 6 ||

jate
suj~jajanara priya prasanveMkaTakRuShNa
suj~jare haripriyarahareMdeMdu || 7 ||

Leave a Reply

Your email address will not be published. Required fields are marked *

You might also like

error: Content is protected !!