Composer : Shri Prasannavenkata dasaru
ರಾಗ: ಸಿಂಧುಭೈರವಿ ಖಂಡಛಾಪುತಾಳ
ಸತತ ಕಲ್ಯಾಣ ಅಚ್ಯುತ ಭಟರಿಗೆ || ಪ ||
ರತಿಪತಿ ಪಿತನಂಘ್ರಿ ರತ ಮಹಾತ್ಮರಿಗೆ || ಅ ಪ ||
ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲ |
ಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲ ||
ಖೇದ ಮನಕಿಲ್ಲ ಖಿನ್ನತೆಯು ಮುಖಕಿಲ್ಲ |
ಶ್ರೀಧವನ ನವ ಭಕುತಿಶೀಲ ಜೀವರಿಗೆ || ೧ ||
ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕು |
ಉರಗ ಪೂಮಾಲೆಯಕ್ಕು ಉರಿ ತಣ್ಣಗಕ್ಕು ||
ಶರಧಿ ಗೋಷ್ಪದವಕ್ಕು ಶರಘಾತ ಬೆಂಡಕ್ಕು |
ನರಹರಿಯ ನಾಮವನು ನಂಬಿ ತುತಿಪರಿಗೆ || ೨ ||
ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟ |
ಆಪತ್ತುಗಳಿಗೋಟ ಆಲಸ್ಯಕೋಟ ||
ಕೋಪ ದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟ |
ಶ್ರೀಪ್ರಸನ್ವೆಂಕಟನ ಭಜಿಪ ಭಕ್ತರಿಗೆ || ೩ ||
rAga: siMdhuBairavi KaMDaCAputALa
satata kalyANa acyuta BaTarige || pa ||
ratipati pitanaMGri rata mahAtmarige || a pa ||
Adhi vyAdhigaLilla aSuBavArtegaLilla |
krOdha nRupaBayavilla kAkumati illa ||
KEda manakilla Kinnateyu muKakilla |
SrIdhavana nava BakutiSIla jIvarige || 1 ||
arigaLe saKarakku ativiSha amRutavakku |
uraga pUmAleyakku uri taNNagakku ||
Saradhi gOShpadavakku SaraGAta beMDakku |
narahariya nAmavanu naMbi tutiparige || 2 ||
pApa tApagaLgOTa paridubaha eDargOTa |
ApattugaLigOTa AlasyakOTa ||
kOpa dAridrryakOTa kalivyasana madakOTa |
SrIprasanveMkaTana Bajipa Baktarige || 3 ||
Leave a Reply