Sarva Vyapti Suladi – Prasannavenkata dasaru

By Smt.Nandini Sripad,Blore

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ
ಸರ್ವವ್ಯಾಪ್ತಿ ಸುಳಾದಿ
( ಶ್ರೀಹರಿಯು ಬ್ರಹ್ಮ-ರುದ್ರ-ಇಂದ್ರಾದಿ ಎಲ್ಲ ದೇವತೆಗಳಿಗೆ ಆಶ್ರಯದಾತನಾಗಿ ದೇವ ದೇವೋತ್ತಮನಾಗಿದ್ದಾನೆ. ’ ಹರಿ ಪರತರಃ ’ ಎಂಬ ತತ್ತ್ವವನ್ನು ಇಲ್ಲಿ ಸಾರಿದ್ದಾರೆ. ಪರಮಾತ್ಮನ ಸರ್ವವ್ಯಾಪ್ತಿತ್ವವನ್ನು ಒತ್ತಿ ಹೇಳಿದ್ದಾರೆ. ಈ ಸುಳಾದಿಯು ಶ್ರೀ ಶಬ್ದದಿಂದ ಪ್ರಾರಂಭವಾಗಿದ್ದು , ಪಠಣ-ಪಾರಾಯಣ ಮಾಡುವುದರಿಂದ ಶ್ರೀಕರತ್ವವು ಉಂಟಾಗುವುದೆಂದು ದಾಸರು ಸೂಚಿಸುತ್ತಾರೆ. )

ರಾಗ: ನಾಟ

ಧ್ರುವತಾಳ

ಶ್ರೀವಧುವೆ ನಿನ್ನ ಪೊಂದಿರಲೆಲೈ ದೇವ
ಆವ ಕಾವುದು ಸಿರಿಯೆ
ಗೋವ್ರಜದಬಲೇರ ಮನೆಯ ಪಾಲಿನ ರುಚಿ
ಆವುದಧಿ ಮಿಗಿಲೆ
ಆವಾಗ ಮುನಿಮನಗೇಹದಿಂದ ರಥವಾಜಿ
ಬೋವತನವು ದೊಡ್ಡಿತೆ
ಭಾವಿಸಲಳವಲ್ಲನಂತ ಮಹಿಮ ನಿನ್ನ
ದೇವ ದಾನವರಿಗೊಲಿದೆ
ಕಾವನಜನಕ ಅಗಣಿತ ಗುಣನೆ
ಪ್ರಸನ್ನವೆಂಕಟೇಶ ಹರೆ || ೧ ||

ಮಠ್ಯತಾಳ

ಅಂಬುಜಭವ ಮೃಡ ಬಿಡೌಜರಿಗಿ –
ನ್ನಿಂಬುಗೊಡುವಾನಿಮಿಷರೊಡೆಯ
ನಂಬಿದರ ಕುಟುಂಬನೆ ಅಂತರ್ಬಹಿರ್ಮಯನೆ
ಕಂಬುಕೊಳಲು ಸಂಭ್ರಮದೂದುವ
ನಂಬಿದರ ಕುಟುಂಬನೆ ಕರು –
ಣಾಂಬಕ ಪ್ರಸನ್ವೆಂಕಟ ವಿಭುವೆ || ೨ ||

ತ್ರಿಪುಟತಾಳ

ಜಲಜಜಾಂಡವು ರೋಮರೋಮದ
ಕುಳಿಯಲಿಡಿದಿರಲಖಿಳ ಶರಣರ
ಸಲಹುದರಿದೆ ತಂದೆ
ಮಲಿನಯುತ ಜನಮೇಳ ನೆನೆಯಲು
ಸಲಹುದರಿದೆ ತಂದೆ
ಬಲಿಯ ಬಿಂಕವನೊತ್ತು ಅಮರರ ಸಲಹಿದ
ಸುಲಭರರಸ ಪ್ರಸನ್ನವೆಂಕಟಾ –
ಚಲ ವಿಭುವೆ ಎನ್ನೊಬ್ಬನಿಗೆ ನೀ
ಸಲಹುದರಿದೆ ತಂದೆ || ೩ ||

ಅಟ್ಟತಾಳ

ಮುಟ್ಟಿ ನಿನ್ನನು ನುತಿಸಿದೊಡಂ ಕಿವಿ –
ಗೊಟ್ಟು ಕಥೆಗೇಳಿ ಬಾಳ್ದಡಂ
ಕಷ್ಟ ದುಷ್ಟರೊತ್ತಿದಯ್ಯ
ಬೆಟ್ಟಿಲಿ ನಗವನೆತ್ತಿದ ಕೃಷ್ಣನೆಂದರೆ
ದಿಟ್ಟ ಪ್ರಸನ್ನವೆಂಕಟ ಕೃಷ್ಣನೆಂದರೆ || ೪ ||

ಆದಿತಾಳ

ಶ್ರೀವರ ಮೂರುತಿ ಭೂವರಾಹನೆ
ಈ ಉರಗಾದ್ರಿಗೆ ವೈಕುಂಠವೆಂಬೆ ಗಡ
ದೇವರ ದೇವ ದೀನನ ನೇವರಿಸಿದವನೆ
ದೇವರ ದೇವ ಧ್ರುವನಿಗೆ ನೇವರಿಸಿದವನೆ
ದೇವರ ದೇವ ಭಕ್ತರ ಕಾವ ಪ್ರಸನ್ವೆಂಕಟಪತಿ
ನಮೋ ನಮೋ ದೇವ || ೫ ||

ಜತೆ

ತನ್ನ ವತ್ಸಕೆ ಧೇನು ತೊಳಲುವಂತೆ ಪ್ರ –
ಸನ್ನ ವೆಂಕಟರೇಯ ಬುಧಕಾಮಧೇನು ||


SrI prasanna veMkaTadAsArya viracita
sarvavyApti suLAdi
( SrIhariyu brahma-rudra-iMdrAdi ella dEvategaLige ASrayadAtanAgi dEva dEvOttamanAgiddAne. ‘ hari parataraH ‘ eMba tattvavannu illi sAriddAre. paramAtmana sarvavyAptitvavannu otti hELiddAre. I suLAdiyu SrI SabdadiMda prAraMBavAgiddu , paThaNa-pArAyaNa mADuvudariMda SrIkaratvavu uMTAguvudeMdu dAsaru sUcisuttAre. )

rAga: nATa

dhruvatALa

SrIvadhuve ninna poMdiralelai dEva
Ava kAvudu siriye
gOvrajadabalEra maneya pAlina ruci
Avudadhi migile
AvAga munimanagEhadiMda rathavAji
bOvatanavu doDDite
BAvisalaLavallanaMta mahima ninna
dEva dAnavarigolide
kAvanajanaka agaNita guNane
prasannaveMkaTESa hare || 1 ||

maThyatALa

aMbujaBava mRuDa biDaujarigi –
nniMbugoDuvAnimiSharoDeya
naMbidara kuTuMbane aMtarbahirmayane
kaMbukoLalu saMBramadUduva
naMbidara kuTuMbane karu –
NAMbaka prasanveMkaTa viBuve || 2 ||

tripuTatALa

jalajajAMDavu rOmarOmada
kuLiyaliDidiralaKiLa SaraNara
salahudaride taMde
malinayuta janamELa neneyalu
salahudaride taMde
baliya biMkavanottu amarara salahida
sulaBararasa prasannaveMkaTA –
cala viBuve ennobbanige nI
salahudaride taMde || 3 ||

aTTatALa

muTTi ninnanu nutisidoDaM kivi –
goTTu kathegELi bALdaDaM
kaShTa duShTarottidayya
beTTili nagavanettida kRuShNaneMdare
diTTa prasannaveMkaTa kRuShNaneMdare || 4 ||

AditALa

SrIvara mUruti BUvarAhane
I uragAdrige vaikuMThaveMbe gaDa
dEvara dEva dInana nEvarisidavane
dEvara dEva dhruvanige nEvarisidavane
dEvara dEva Baktara kAva prasanveMkaTapati
namO namO dEva || 5 ||

jate

tanna vatsake dhEnu toLaluvaMte pra –
sanna veMkaTarEya budhakAmadhEnu ||

Leave a Reply

Your email address will not be published. Required fields are marked *

You might also like

error: Content is protected !!