Composer : Shri Indirapati vittala
ಪ್ರಸನ್ನ ವೇಂಕಟದಾಸರೇ |
ಪರಿ ಪಾಲಿಸೆನ್ನನು ಪ್ರಾರ್ಥಿಪೆ | ಪ |
ಬನ್ನ ಬಟ್ಟೆನೋ ಘನ್ನ ಮಹಿಮನೆ
ಇನ್ನು ಕರುಣಿಸೋ ಸತ್ ಕೃಪೆ | ಅ.ಪ |
ಅಸನವಸನದಿ ವನಿತೆ ವ್ಯಸನದಿ
ಬಿಸಜನಾಭನ ನೆನೆಯದೆ |
ಮೋಸ ಹೋದೆನೋ ಘಾಸಿಯಾದೆನೋ
ಲೇಸೆಣಿಸಿ ನಿಮ್ಮಡಿ ಸಾರಿದೆ |೧|
ತಕ್ರ ಬೇಡಲು ವಕ್ರ ಮಾತಿಗೆ
ಕ್ಷಿಪ್ರದಲಿ ಗೃಹ ತ್ಯಜಿಸಿದೆ
ನಕ್ರಹರ ಅಕ್ರೂರ ವರದ ಶ್ರೀ
ಚಕ್ರಿ ಅರಸುತ ಚರಿಸಿದೆ |೨|
ಮಣಿಸಿ ಹಣಿಸುವ ಜಗವಕುಣಿಸುವ |
ಕುಣಿಸುವನ ನೀ ತಣಿಸಿದೆ |
ಕೃಷ್ಣ ಕಥನವ ಮನನ ಮಥನವ |
ಗಂಧರ್ವ ಗಾನದಿ ಉಣಿಸಿದೆ |೩|
ಚಂದ್ರಸಾವಿರ ದರ್ಶನ ವರ
ವರ್ಷ ಋತು ಹರಿದಾಸರ |
ಸಾಂದ್ರಗುರು ಹರಿಪದವ ಸ್ಮರಿಸುತ |
ಹರಿಪುರದಿ ನಿಜವಾಸರ |೪|
ಮಂದ ಭಾಗ್ಯನು ಬಂದು ನಿಂದಿಹೆ |
ದ್ವಂದ್ವ ಪದಕಭಿವಂದನ |
ಇಂದಿರಾಪತಿ ವಿಠಲನ ಪ್ರಿಯ
ಬಿಡಿಸೋ ಜನುಮದ ಬಂಧನ |೫|
prasanna vEMkaTadAsarE |
pari pAlisennanu prArthipe | pa |
banna baTTenO Ganna mahimane
innu karuNisO sat kRupe | a.pa |
asanavasanadi vanite vyasanadi
bisajanABana neneyade |
mOsa hOdenO GAsiyAdenO
lEseNisi nimmaDi sAride |1|
takra bEDalu vakra mAtige
kShipradali gRuha tyajiside
nakrahara akrUra varada SrI
cakri arasuta cariside |2|
maNisi haNisuva jagavakuNisuva |
kuNisuvana nI taNiside |
kRuShNa kathanava manana mathanava |
gaMdharva gAnadi uNiside |3|
caMdrasAvira darSana vara
varSha Rutu haridAsara |
sAMdraguru haripadava smarisuta |
haripuradi nijavAsara |4|
maMda BAgyanu baMdu niMdihe |
dvaMdva padakaBivaMdana |
iMdirApati viThalana priya
biDisO janumada baMdhana |5|
Leave a Reply