Moola Rama mahima suladi – Prasannavenkata dasaru

Composer : Shri Prasannavenkata dasaru

By Smt.Nandini Sripad

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ
ಶ್ರೀ ಮೂಲ ರಾಮದೇವರ ಮಹಿಮಾ ಸುಳಾದಿ
( ಈ ಸುಳಾದಿ ಸಂಕ್ಷಿಪ್ತ ರಾಮಾಯಣ ಕಥಾ ಸಂಗ್ರಹ. ರಘುವಂಶ ಕುಲತಿಲಕನಾದ ಶ್ರೀರಾಮಚಂದ್ರನನ್ನು ಬಣ್ಣಿಸಿದ್ದಾರೆ . ಅಕಳಂಕ – ಅಕಳಂಕ ಎಂದು ಪರಮಾತ್ಮನನ್ನು ನಿರ್ದೋಷಿ , ಗುಣಪೂರ್ಣನೆಂದು ಸ್ತುತಿಸುತ್ತಾ , ಶ್ರೀಮೂಲರಾಮನು ಆನಂದತೀರ್ಥರ ಬಳಿಗೆ ಬಂದ ವಿಚಾರವನ್ನು ಸೂಚಿಸಿದ್ದಾರೆ. )

ರಾಗ ಪೂರ್ವಿಕಲ್ಯಾಣಿ

ಧ್ರುವತಾಳ

ರಾಮ ರಘುಕುಲ ಸಾರ್ವಭೌಮ ಪೂರಣಕಾಮ
ಜೀಮೂತಶಾಮ ಶ್ರೀಮೂಲರಾಮ
ಕೋಮಲ ಶರೀರ ಸೀತಾ ಮುಖಾಂಬುಜ ಭ್ರಮರ
ಪ್ರೇಮಸಾಗರ ಭಕ್ತಜನ ಮನೋಹರ
ಸಾಮಜಾರ್ತಿಹರ ಸಾಮಗಾನಾದರ ನಿ –
ಸ್ಸೀಮ ಗುಣಗಂಭೀರ ಏಕವೀರ
ಸ್ವಾಮಿ ಮಠದರಸ ಮುನಿಸ್ತೋಮ ಮಾನಸಹಂಸ
ನೀ ಮನ್ನಿಸು ಪ್ರಸನ್ನವೆಂಕಟಾದ್ರೀಶ ರಘುರಾಮ ॥ 1 ॥

ಮಠ್ಯತಾಳ

ಪಿಂತೆ ಸಮೀರಜನ ಸೇವೆಗೆ ಮೆಚ್ಚ –
ತ್ಯಂತ ಪ್ರಸನ್ನನಾಗ್ಯವನ ಶುಭಕರ
ಸಂತತಿಗಭಯವನಿತ್ತಪೆನೆಂದೀಶ
ನಿಂತಿಹೆ ಪ್ರಸನ್ನವೆಂಕಟಪತಿರಾಮ
ಕಂತುಜನಕ ನಿತ್ಯಾನಂದನೆ ನಿ –
ನ್ನಂತವರಿಯೆ ನಿಗಮಾಗಮಕಳವೆ ॥ 2 ॥

ತ್ರಿಪುಟತಾಳ

ನಿರುತ ವೈಕುಂಠ ಮಂದಿರವಿದ್ದು
ಪರಣ ಕುಟೀರವನಾಶ್ರಯಿಸುವ ಘನತೆಯೆತ್ತ
ವರಪೀತಾಂಬರ ದಾಮವನು ಬಿಟ್ಟು ವಲ್ಕಲ
ಧರಿಸಿ ಕಾನನದಿ ಸಂಚರಿಪೋದೆತ್ತ
ನರಲೀಲೆಗಿದು ಶ್ಲಾಘ್ಯವೆಂದು ತೋರಿದೆ ಜಗ –
ದೊರೆಯೆ ಪ್ರಸನ್ನವೆಂಕಟಾದ್ರಿ ರಘುರಾಮ ॥ 3 ॥

ಅಟ್ಟತಾಳ

ಹರವರದಲಿ ಬಲು ಮತ್ತಾದ ರಜನೀ
ಚರವರ ಲಂಕೆಯಲಿ ಬಲಿದು ಗರ್ವದಿ
ಸುರವರರನುರೆ ಬಾಧಿಸಲವರನು
ಪೊರೆವರು ದಾರಯ್ಯ ನಿನ್ನಿಂದ
ಸ್ಥಿರವರದಾಯಕ ಪ್ರಸನ್ವೆಂಕಟ
ಗಿರಿವರನೀಲಯ ಕೌಸಲ್ಯೆಯ ಕಂದ ॥ 4 ॥

ಆದಿತಾಳ

ಅಕಳಂಕ ಅಕುತೋತಂಕ ಅಕಳಂಕ
ಮಕುಟ ಕುಂಡಲ ಕೌಸ್ತುಭ ಕೇಯೂರ ವಲ –
ಯಾಂಕಿತ ಕೋದಂಡ ಕಾರ್ಮುಕಪಾಣಿ
ಅಕಳಂಕ ಸುಖತೀರ್ಥವಂದಿತ ಪಾ –
ದಕಮಲ ವಿಧಿನುತ ಮುಖಪಾಲಕ
ಪ್ರಸನ್ನ ವೆಂಕಟಾಧಿಪ ಅಕಳಂಕ ॥ 5 ॥

ಜತೆ

ಅಂದು ನರಹರಿಯತಿಗೆ ಅಂದದಲ್ಲೊಲಿದಿಲ್ಲಿ
ಬಂದು ನೀನಿಂತೆ ನಿಜರಮಣಿಯೊಡನೆ
ಎಂದೆಂದು ಸತ್ಯಾನಭಿವ ತೀರ್ಥ ಗುರು ಹೃದಯ
ಮಂದಿರನೆ ಪ್ರಸನ್ನವೆಂಕಟವರದ ರಾಮ ॥


Shri prasanna venkata dAsArya virachita
Shri mUla rAmadevara mahima suLadi
rAga : pUrvikalyaNi

dhruvatALa

rAma raGukula sArvaBauma pUraNakAma
jImUtaSAma SrImUlarAma
kOmala SarIra sItA muKAMbuja Bramara
prEmasAgara Baktajana manOhara
sAmajAtihara sAmagAnAdara ni
ssIma guNagaMBIra EkavIra
svAmi maThadarasa munistOma mAnasahaMsa
nI mannisu prasannavenkaTAdrISa raGurAma ॥ 1 ॥

maThyatALa

pinte samIrajana sEvege mecca –
tyanta prasannanAgyavana SuBakara
santatigaBayavanittapenendISa
nintihe prasannavenkaTapatirAma
kantujanaka nityAnandane ni –
nnantavariye nigamAgamakaLave ॥ 2 ॥

tripuTatALa

niruta vaikunTha mandiraviddu
paraNa kuTIravanASrayisuva Ganateyetta
varapItAMbara dAmavanu biTTu valkala
dharisi kAnanadi sancaripOdetta
naralIlegidu SlAGyavendu tOride jaga –
doreye prasannavenkaTAdri raGurAma ॥ 3 ॥

aTTatALa

haravaradali balu mattAda rajanI
caravara lankeyali balidu garvadi
suravararanure bAdhisalavaranu
porevaru dArayya ninninda
sthiravaradAyaka prasanvenkaTa
girivaranilaya kausalyeya kanda ॥ 4 ॥

AditALa

akaLanka akutOtanka akaLanka
makuTa kunDala kaustuBa kEyUra vala –
yAnkita kOdanDa kArmukapANi
akaLanka suKatIrthavandita pA
dakamala vidhinuta maKapAlaka
prasanna venkaTAdhipa akaLaMka ॥ 5 ॥

jate

andu narahariyatige andadallolidilli
bandu nIninte nijaramaNiyoDane
endendu satyAnaBiva tIrtha guru hRudaya
mandirane prasannavenkaTavarada rAma ॥

Leave a Reply

Your email address will not be published. Required fields are marked *

You might also like

error: Content is protected !!