Composer : Shri Prasannavenkata dasaru
ರಾಗ: ಶಿವರಂಜಿನಿ, ಖಂಡಛಾಪುತಾಳ
ಮಹತಿಗೆ ಮಹತು ಶ್ರೀಹರಿಯ ನಾಮ |
ಬಹು ಭಾಗ್ಯವಂತರಿಗೆ ದೊರೆವುದೀ ನಾಮ || ಪ ||
ಹಿಂದೊದಗಿದಘರಾಶಿ ಬೀಸಿ ಬಿಸುಟುವ ನಾಮ |
ಮುಂದೆ ಬಹ ದುರಿತಕಡ್ಡಾದ ನಾಮ ||
ಮಂದಮತಿ ಕತ್ತಲೆಗೆ ಬಾಲಾರ್ಕ ಸಮ ನಾಮ |
ದಂದುಗದ ಬಳ್ಳಿಯನು ಕಡಿವ ನಾಮ || ೧ ||
ಮುಕುತಿ ನಗರವ ತುಂಬಿಸುವ ಅಭಯಕರ ನಾಮ |
ಶಕುತರ ಮಾಲಿಕೆಗೆ ಅಭಯದ ನಾಮ ||
ಅಕಳಂಕ ದಾಸರಿಗೆ ಆದ್ಯಂತಗತ ನಾಮ |
ಭಕುತರೆಡರಿನ ಗಿರಿಗೆ ವಜ್ರ ನಾಮ || ೨ ||
ಸರ್ವ ಶ್ರುತಿ ಮುನಿಗಳುಗ್ಗಡಿಸುತಿಹ ನಾಮ |
ಉರ್ವಿಯೊಳು ನಂಬಿದರ ಪೊರೆವ ನಾಮ ||
ಸರ್ವಜ್ಞರಾಯರು ನಿರ್ವಚನಿಸುತಿಹ ನಾಮ |
ಸರ್ವೇಶ ಪ್ರಸನ್ನವೆಂಕಟನ ದಿವ್ಯ ನಾಮ || ೩ ||
rAga: SivaraMjini, KaMDaCAputALa
mahatige mahatu SrIhariya nAma |
bahu BAgyavaMtarige dorevudI nAma || pa ||
hiMdodagidaGarASi bIsi bisuTuva nAma |
muMde baha duritakaDDAda nAma ||
maMdamati kattalege bAlArka sama nAma |
daMdugada baLLiyanu kaDiva nAma || 1 ||
mukuti nagarava tuMbisuva aBayakara nAma |
Sakutara mAlikege aBayada nAma ||
akaLaMka dAsarige AdyaMtagata nAma |
BakutareDarina girige vajra nAma || 2 ||
sarva Sruti munigaLuggaDisutiha nAma |
urviyoLu naMbidara poreva nAma ||
sarvaj~jarAyaru nirvacanisutiha nAma |
sarvESa prasannaveMkaTana divya nAma || 3 ||
Leave a Reply