ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ
ಶ್ರೀಕೃಷ್ಣ ಮಹಿಮಾ ಸ್ತೋತ್ರ ಸುಳಾದಿ
( ಮುದ್ದು ಮೂರುತಿ ಬಾಲ ಗೋಪಾಲ ಶ್ರೀಕೃಷ್ಣನ ರೂಪ , ವೃಂದಾವನದಲ್ಲಿ ಅವನ ಕುಣಿತ ,
ಅವನ ಸರ್ವೋತ್ತಮತ್ವವನ್ನು ತಿಳಿಸಿದ್ದಾರೆ. ಭಗವಂತನ ಸರ್ವಪ್ರೇರಕತ್ವ , ನಿಯಾಮಕತ್ವವನ್ನು ಸ್ತುತಿಸುತ್ತಾ , ಪರಮಾತ್ಮನ ನಾಮಸ್ಮರಣೆಯೊಂದಿಗೆ ಭಕ್ತರು ತಮ್ಮ ಇಂದ್ರಿಯಗಳನ್ನು ಹೇಗೆ ಸಾರ್ಥಕಪಡಿಸಿಕೊಳ್ಳಬೇಕೆಂದು ದಾಸರು ತಿಳಿಸಿಕೊಟ್ಟಿದ್ದಾರೆ. )
ರಾಗ: ಆರಭಿ
ಧ್ರುವತಾಳ
ಬಾಲಸೂರ್ಯನಿಭಮಣ್ಯಾಂಕ ಮೌಳಿ
ಹೀಲಿಯ ಪಿಂಛ ಪ್ರವಾಳ ಗುಚ್ಛ
ಮಾಲ್ಯಾಲರದಂಡೆ ಝೇಂಕರಿಪಾಳಿ
ಬಾಲರಯ್ಯನ ಮೊಗದ ಶೋಭೆ
ಭ್ರೂಲತೆ ವಿಲಾಸ ನೋಟದಿ ಮಕರ ಕುಂಡಲ ವಿ –
ಶಾಲೇರಿ ಸಿರಿವತ್ಸ ಕೌಸ್ತುಭ
ನೀಲಮಾಣಿಕ ವಜ್ರವಲಯ ವೈಜಂತಿ ವನ –
ಮಾಲೆ ತುಲಸಿ ಗಂಧ ಮೌಕ್ತಿಕ ಸರಗಳ
ನೀಲನದ ರತುನ ದಾಮ ಪೊನ್ನ
ಚೀಲ ನೂಪುರ ಕಿರುಗೆಜ್ಜೆಯ ಗೋ –
ಪಾಲ ಪ್ರಸನ್ನವೆಂಕಟ ಶಾಮಲಕಾಯ || ೧ ||
ಮಠ್ಯತಾಳ
ನಂದವ್ರಜದ ಗೋವರ ವೃಂದಾಂಬುಧಿಗೆ ಪೂ –
ರ್ಣೇಂದು ನಂದಸೂನು ಲಾಸ್ಯವಾಡೆ
ಒಂದೊಂದು ಲಯದ ಗತಿ ಹೊಂದ್ಯಮರ
ದುಂದುಭಿಗಳ್ದಂ ಧಳಧಂ ಧಂದಳೆನ್ನೆ
ಗಂಧರ್ವ ತುಂಬುರರು ನಾರಂದ ಮಹತೀಗೀತ ಪ್ರ –
ಬಂಧ ಹೇಳ ನಂದರಸ –
ದಿಂದಾಡುತಿರೆ ಗೋವಿಂದ ದಂದಂ
ದಂದಂ ಧಿಮಿಕೆನ್ನ ಲಂದದಿ ಮದ್ದಳೆ ತಾಳ
ಬಂದಿಮೊಗ ತುತ್ತುರಿ ಕಹಳೆ ಕಂಬುವೇಣುಗೂಡಿ
ಅಂದಾಡಿದ ಪ್ರಸನ್ವೆಂಕಟ ಕೃಷ್ಣ ನಲವಿಂದ || ೨ ||
ತ್ರಿವಿಡಿತಾಳ
ಶ್ರೀಕಮಲಭಭೂರ್ವ ಪಿನಾಕಿ ವಿಪಾಹಿಪ
ನಾಕಜಾದ್ಯರ ಚೇಷ್ಟಕ
ಶ್ರೀಕರ ಪ್ರಸನ್ನವೆಂಕಟ ಕೃಷ್ಣ
ಆಕಳಕಾವರ ವಶಗ ಹಾಹಾ || ೩ ||
ಅಟ್ಟತಾಳ
ಅನಂತ ನಿಗಮ ನಿಕರಕೆ ನಿಲುಕದ
ಅನಂತಾನಂತ ಗುಣಪರಿಪೂರ್ಣಗೆ
ಧೇನುಕಾವರ ಪಳ್ಳಿ ಗೋಟಲೆ
ತೀಯಂ ತೀಯಂ ವೈಯ್ಯ ಅಯ್ಯಾ
ಧೇನುಕಾವರ ಪಳ್ಳಿ ಗೋಟಲೆ
ಜ್ಞಾನಿಜನಕೆ ಮೋದ ಹಾನಿ ಖಳರ್ಗೀವ
ಜ್ಞಾನಾನಂದ ಬಾಲ ಪ್ರಸನ್ನವೆಂಕಟ ಕೃಷ್ಣಗೆ || ೪ ||
ಏಕತಾಳ
ವೈಕುಂಠ ವಾರಿಜಾಕ್ಷ ಲೋಕರಕ್ಷ
ತೋಕವೇಷಧರ ಮುರಹರ ಶ್ರೀಧರ
ಶ್ರೀಕರ ಗುಣನಿಧೆ ಪುರಾಣಪುರುಷ ಹರೇ ಹರೇ
ಗೋಕುಲಪತೆ ಗೋವರ್ಧನಧರ
ಪಾಕಹ ಮದನಿಕಾರಕರ ಪ್ರಸ –
ನ್ವೆಂಕಟ ಕೃಷ್ಣನೆಲೊ ಭಕ್ತವತ್ಸಲ || ೫ ||
ಜತೆ
ಶುಭಕೀರ್ತನೆ ಜಿಹ್ವೆಗೆ ಶುಭಕಥೆ ಕಿವಿಗಳಿಗೆ
ಶುಭಮೂರ್ತಿ ಕಣ್ಗೀಯಯ್ಯ ಪ್ರಸನ್ನವೆಂಕಟ ಕೃಷ್ಣಯ್ಯ ||
SrI prasanna veMkaTadAsArya viracita
SrIkRuShNa mahimA stOtra suLAdi
( muddu mUruti bAla gOpAla SrIkRuShNana rUpa , vRuMdAvanadalli avana kuNita ,
avana sarvOttamatvavannu tiLisiddAre. BagavaMtana sarvaprErakatva , niyAmakatvavannu stutisuttA , paramAtmana nAmasmaraNeyoMdige Baktaru tamma iMdriyagaLannu hEge sArthakapaDisikoLLabEkeMdu dAsaru tiLisikoTTiddAre. )
rAga: AraBi
dhruvatALa
bAlasUryaniBamaNyAMka mauLi
hIliya piMCa pravALa gucCa
mAlyAlaradaMDe JEMkaripALi
bAlarayyana mogada SOBe
BrUlate vilAsa nOTadi makara kuMDala vi –
SAlEri sirivatsa kaustuBa
nIlamANika vajravalaya vaijaMti vana –
mAle tulasi gaMdha mauktika saragaLa
nIlanada ratuna dAma ponna
cIla nUpura kirugejjeya gO –
pAla prasannaveMkaTa SAmalakAya || 1 ||
maThyatALa
naMdavrajada gOvara vRuMdAMbudhige pU –
rNEMdu naMdasUnu lAsyavADe
oMdoMdu layada gati hoMdyamara
duMduBigaLdaM dhaLadhaM dhaMdaLenne
gaMdharva tuMburaru nAraMda mahatIgIta pra –
baMdha hELa naMdarasa –
diMdADutire gOviMda daMdaM
daMdaM dhimikenna laMdadi maddaLe tALa
baMdimoga tutturi kahaLe kaMbuvENugUDi
aMdADida prasanveMkaTa kRuShNa nalaviMda || 2 ||
triviDitALa
SrIkamalaBaBUrva pinAki vipAhipa
nAkajAdyara cEShTaka
SrIkara prasannaveMkaTa kRuShNa
AkaLakAvara vaSaga hAhA || 3 ||
aTTatALa
anaMta nigama nikarake nilukada
anaMtAnaMta guNaparipUrNage
dhEnukAvara paLLi gOTale
tIyaM tIyaM vaiyya ayyA
dhEnukAvara paLLi gOTale
j~jAnijanake mOda hAni KaLargIva
j~jAnAnaMda bAla prasannaveMkaTa kRuShNage || 4 ||
EkatALa
vaikuMTha vArijAkSha lOkarakSha
tOkavEShadhara murahara SrIdhara
SrIkara guNanidhe purANapuruSha harE harE
gOkulapate gOvardhanadhara
pAkaha madanikArakara prasa –
nveMkaTa kRuShNanelo Baktavatsala || 5 ||
jate
SuBakIrtane jihvege SuBakathe kivigaLige
SuBamUrti kaNgIyayya prasannaveMkaTa kRuShNayya ||
Leave a Reply