Composer : Shri Jagannatha dasaru
ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ
ನರಕದಲಿ ಗುರಿಯಾದೆನೊ ಹರಿಯೆ,
ಸಿರಿರಮಣ ತವ ಚರಣ ದೊರಕುವುದು
ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ||
ಸಾಕಲ್ಯದಿಂದ ಸಾಲಗ್ರಾಮಕಭಿಷೇಕ
ಆಕಳ್-ಹಾಲಲಿ ಮಾಡದೆ
ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು
ಬದುಕ-ಬೇಕೆಂದು ಹಾಲ ಹೊಯ್ದೆ
ಕಾಕು ಬುದ್ಧಿಗಳಿಂದ ಗುಡುಗುಡಿ ನಶ್ಯಪುಡಿ
ಹಾಕಿ ಭಂಗಿಯ ಸೇದಿದೆ
ಲೋಕ ನಿಂದಕನಾಗಿ ಪಾತಕವ ನೆಚ್ಚಿ
ಅನೇಕ ಜೂಜುಗಳಾಡಿದೆ, ಹರಿಯೇ ||೧||
ಉತ್ತಮ ಬ್ರಾಹ್ಮಣರ ವೃತ್ತಿಯನೆ ತೆಗೆಸಿ
ಬ್ರಹ್ಮಹತ್ಯಗಾರನು ಎನಿಸಿದೆ,
ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ
ಸತ್ತ ಸುದ್ದಿಯ ಪೇಳಿದೆ,
ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ
ಕುತ್ತಿಗೆಯ ನಾ ಕೊಯಿಸಿದೆ,
ಹತ್ತು ಜನರೆನ್-ಹೆಣಕೆ ನಿತ್ಯ ಕಲ್-ಹೊಡೆಯುತಿರೆ
ಮೃತ್ಯುದೇವತೆ ಎನಿಸಿದೆ, ಬಿಡದೆ ||೨||
ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ
ಗತಿಯೇನು ಪೇಳೊ ಕೊನೆಗೆ,
ಸತತ ತವ ಧ್ಯಾನದಲಿ ರತನಾಗಿ ಇರುವ
ಸನ್ಮತಿಯನೆ ಪಾಲಿಸೀಗ,
ಪತಿತ ಪಾವನನೆಂಬ ಬಿರುದು ಅವನಿಯ ಮೇಲೆ
ಶ್ರುತಿ ಸಾರುತಿದೆಯೋ ಹೀಗೆ,
ಶಿತಿಕಂಠನುತ ಜಗನ್ನಾಥವಿಠ್ಠಲ ನಿನಗೆ
ನುತಿಸಿ ಮೊರೆಹೊಕ್ಕೆ ಹರಿಯೇ, ದೊರೆಯೇ ||೩||
narahariye ninna nAmasmaraNe mADade
narakadali guriyAdeno hariye,
siriramaNa tava caraNa dorakuvudu
hyAMginnu parama pApiShTha nAnu ||pa||
sAkalyadiMda sAlagrAmakaBiShEka
AkaL-hAlali mADade
nAlkeMTu nAyigaLa sAki maneyoLu
baduka-bEkeMdu hAla hoyde
kAku buddhigaLiMda guDuguDi naSyapuDi
hAki BaMgiya sEdide
lOka niMdakanAgi pAtakava necci
anEka jUjugaLADide, hariyE ||1||
uttama brAhmaNara vRuttiyane tegesi
brahmahatyagAranu eniside,
matte muMji maduve samayakke nA hOgi
satta suddiya pELide,
vittaviddavara benhatti dUtara kaLuhi
kuttigeya nA koyiside,
hattu janaren-heNake nitya kal-hoDeyutire
mRutyudEvate eniside, biDade ||2||
kShitiyoLage innAru hitava bayasuvarenage
gatiyEnu pELo konege,
satata tava dhyAnadali ratanAgi iruva
sanmatiyane pAliseega,
patita pAvananeMba birudu avaniya mEle
Sruti sArutideyO hIge,
SitikaMThanuta jagannAthaviThThala ninage
nutisi morehokke hariyE, doreyE ||3||
Leave a Reply