Composer : Shri Shyamasundara dasaru
ಲಂಬೋದರನೆ ನಿನ್ನ ನಂಬಿರುವೆನು ಯೆನ್ನ |
ಬೆಂಬಿಡದೆಲೆ ಪೊರೆ ಅಂಬಿಕಾ ತನಯನೆ || ಪ|
ಖೇಶನೆ ಎನ್ನನು- |ದಾಸಿನ ಮಾಡದೆ |
ಲೇಸಾಗಿ ಪೋಷಿಸು | ವಾಸುಕೀ ಭೂಷಣ || ೧ ||
ನಾಕೇಶ ವಂದಿತ | ಆಖು ವಾಹನ ಎನ್ನ |
ಕಾಕುಮತಿ ಕಳೆದು | ನೀ ಕಾಯೋ ಕರುಣದಿ || ೨ ||
ಶ್ರೀ ಮನೋಹರ ಸ್ವಾಮಿ | ಶ್ಯಾಮಸುಂದರ ಸಖ |
ಕಾಮಹರ ಸುತ | ಸಾಮಜ ವದನನೆ || ೩ ||
laMbOdarane ninna naMbiruvenu yenna |
beMbiDadele pore aMbikA tanayane || pa|
KESane ennanu- |dAsina mADade |
lEsAgi pOShisu | vAsukI BUShaNa || 1 ||
nAkESa vaMdita | AKu vAhana enna |
kAkumati kaLedu | nI kAyO karuNadi || 2 ||
SrI manOhara svAmi | SyAmasuMdara saKa |
kAmahara suta | sAmaja vadanane || 3 ||
Leave a Reply