Composer : Shri Gurugovinda dasaru
ವಿಘ್ನೇಶ – ವಿಘ್ನೇಶ [ಪ]
ಭಗ್ನ ಗೈಸಿ ದುರ್ ವಿಘ್ನಗಳನು ಹರಿಯಜ್ಞನಲ್ಲಿ
ಮನ | ಲಗ್ನವ ಗೈವುದು [ಅ.ಪ]
ನಭಕಭಿಮಾನಿಯೆ | ಪ್ರಭುಹರಿ ಭಜನೆಗೆ
ಶುಭ ಅವಕಾಶದ | ವೈಭವ ಪ್ರದನೇ (೧)
ಆದಿದೇವ ನಿನ | ಗಾದಿ ಪೂಜೆಯನು
ಮೋದದಿ ವಿಧಿಸುತ | ಸಾಧು ಜನೋದ್ಧಾರ (೨)
ಸಂತತ ಸಂಗವ | ಸಂತತ ಕೊಡುತಲಿ
ಪಂಥಾಬಿಧ ಹರಿ | ಚಿಂತೆಯಲಿರಿಸೋ (೩)
ವಿಶ್ವಂಭರ ಗುರು | ಗೋವಿಂದ ವಿಠಲನ
ವಿಶ್ವರೂಪ ಬಹು | ವಿಶ್ವಾಸಾರ್ಚಕ (೪)
viGnESa – viGnESa [pa]
Bagna gaisi dur viGnagaLanu hariyaj~janalli
mana | lagnava gaivudu [a.pa]
naBakaBimAniye | praBuhari Bajanege
SuBa avakASada | vaiBava pradanE (1)
AdidEva nina | gAdi pUjeyanu
mOdadi vidhisuta | sAdhu janOddhAra (2)
saMtata saMgava | saMtata koDutali
paMthAbidha hari | ciMteyalirisO (3)
viSvaMBara guru | gOviMda viThalana
viSvarUpa bahu | viSvAsArcaka (4)
Leave a Reply