Composer : Shri Prasanna Srinivasa dasaru
ಗುರುಗ ಧನ್ವಂತರೀ
ವರಾಹ ನರಹರಿ ನಿನ್ನಾ |
ಚರಣಕೆರಗುವೆ ಎನ್ನ ಬಿನ್ನಪ ಕೇಳಿ
ಪೊರೆ ಇವಳನ್ನಾ [ಪ]
ಉದರ ಶೂಲಿ ಎನಲು
ವೈದ್ಯ ಪಂಡಿತರು,
ಶಸ್ತ್ರ ಪ್ರಯೋಗಿಸಲಿಹರು
ಅವಶ್ಯ ಇಲ್ಲದಲೆ [೧]
ಶಸ್ತ್ರದ ವೈಷಮ್ಯ
ಬಾಧೆಗಳ ಕಳೆದು
ನಿತ್ರಾಣ ನರ ಉದರ
ಮಾಂದ್ಯಗಳ ತಿದ್ದಿ ಕಾಪಾಡು [೨]
ವಿಧಿತಾತ ಶ್ರೀ ಪ್ರಸನ್ನ
ಶ್ರೀನಿವಾಸ ಘೃಣಿಯೇ,
ನಿನ್ನ ದಯದಿಂದಲೇ ಜೀವರು
ನಮ್ಮೆಲ್ಲರ ಯೋಗ ಕ್ಷೇಮಗಳು [೩]
guruga dhanvaMtarI
varAha narahari ninnA |
caraNakeraguve enna binnapa kELi
pore ivaLannA [pa]
udara SUli enalu
vaidya paMDitaru,
Sastra prayOgisaliharu
avaSya illadale [1]
Sastrada vaiShamya
bAdhegaLa kaLedu
nitrANa nara udara
mAMdyagaLa tiddi kApADu [2]
vidhitAta SrI prasanna
SrInivAsa GRuNiyE,
ninna dayadiMdalE jIvaru
nammellara yOga kShEmagaLu [3]
Leave a Reply