Composer : Shri Pranesha dasaru
ಪದುಮನಾಭನೆ ಏನೆಂತಾಡಿದ್ಯೊ |
ವೊದಗಿ ಬಂದವರಿಗೆ ಎದೆಗಲ್ಲಿನಂತೆ [ಪ]
ಸ್ವರ ಕೇಳಿದಾಕ್ಷಣ ಸ್ಮರಬಾಧೆ ಹೆಚ್ಚಿ ಜ- |
ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ (೧)
ಯೋಗೇಶ ನಿನ ನೋಡ ವೇಗದಿಂ ಬಂದೆವೊ |
ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ (೨)
ನಾರೆರಲಂಕಾರ ಸೀರಿ ಹಂಬಲ ಬಿಟ್ಟು |
ಸಾರಿದರೆಂದು ವಿಚಾರಿಸಲಿಲ್ಲೆ (೩)
ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |
ಚ್ಯುತನಾವೆ ನಿನಗೆ ಅಹಿತರಾದೆವೇನೋ (೪)
ಆಗಾರತೊರೆದು ಸುಭೋಗವಿತ್ತೆವೋ ನಿ- |
ನಿನಗೀಗ ಮರದಿ ನಮ್ಮ ಕೈಗುಣವೇನೋ (೫)
ವಾರಿಜಬಾಣಕ್ಕೆ ಆರಲಾರಿವೊ ದಯಾ |
ವಾರಿಧಿಕಾಮನಾ ಪೂರತಿ ಮಾಡೋ (೬)
ಪ್ರಾಣೇಶ ವಿಠ್ಠಲ ನೀ ಮಾನವರಂತಲ್ಲ |
ಪ್ರಾಣದ ಪದಕ ಈಗೇನು ಕಲ್ಲಾದ್ಯೊ (೭)
padumanABane EneMtADidyo |
vodagi baMdavarige edegallinaMte [pa]
svara kELidAkShaNa smarabAdhe hecci ja- |
rJaritarAdevo kELo taruNiyarella (1)
yOgESa nina nODa vEgadiM baMdevo |
hOgeMdu ninna nAligIgeMtu baMtO (2)
nAreralaMkAra sIri haMbala biTTu |
sAridareMdu vicArisalille (3)
patigaLu huDukoreMdati karuNavaralle |
cyutanAve ninage ahitarAdevEnO (4)
AgAratoredu suBOgavittevO ni- |
ninagIga maradi namma kaiguNavEnO (5)
vArijabANakke AralArivo dayA |
vAridhikAmanA pUrati mADO (6)
prANESa viThThala nI mAnavaraMtalla |
prANada padaka IgEnu kallAdyo (7)
Leave a Reply