Madhava suteertha guru

Composer : Shri Gurugovinda dasaru

By Smt.Shubhalakshmi Rao

Shri Madhava Tirtharu – 1333-1349 AD –
Direct desciple of Shri Acharya Madhwaru..
sAdhitAkhilasattattvam bAdhitAkhiladurmatam |
bodhitAkhilasanmArgaM mAdhavAkhyayatiM bhaje ||
ಸಾಧಿತಾಖಿಲಸತ್ತತ್ವಂ ಬಾಧಿತಾಖಿಲದುರ್ಮತಂ |
ಬೋಧಿತಾಖಿಲಸನ್ಮಾರ್ಗ ಮಾಧವಾಖ್ಯ ಯತಿಂ ಭಜೇ |
साधिताखिलसत्तत्वम् बाधिताखिलदुर्मतम्।
बोधिताखिलसन्मार्गं माधवाख्ययतिं भजे॥
VRINDAVANA – MANURU (near Gulbarga)
Aradhane : BHADRAPADA AMAVASYA


ಮಾಧವ ಸುತೀರ್ಥ ಗುರು | ಭಕ್ತಜನ ಕಲ್ಪತರು
ಆದಿ ಗುರುಗಳ ಕರಜ | ಮಾಡೆನ್ನ ವಿರಜ [ಪ]

ಭೀಮ ಸತ್ತಟವಾಸ | ಕೈಮುಗಿದೆ ಮೌನೀಶ
ಸಾಮ ಸನ್ನುತ ಚರಣ | ಮೌನದಿಂ ಭಜನ ನೀ
ಮಾಡಿ ಆನಂದ ವಾರಿಧೀಯಲಿ ಮಿಂದು
ಆ ಮಹಿಮೆ ಪೊಗಳಲೂ | ಎನಗಾವ ಅಳಲೂ [೧]

ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನ
ನೀನಾಗಿ ತೋರುವಲಿ | ನಿನ್ನ ದಯವಿರಲಿ |
ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತು
ಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ [೨]

ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತ
ದೀನಜನ ಪರಿಪಾಲ | ಹರಿಭಕ್ತ ಲೋಲಾ |
ಜಾಣ ಗುರುಗೋವಿಂದ | ವಿಠಲ ಮಹಿಮಾನಂದ
ನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ [೩]


mAdhava sutIrtha guru | Baktajana kalpataru
Adi gurugaLa karaja | mADenna viraja [pa]

BIma sattaTavAsa | kaimugide maunISa
sAma sannuta caraNa | maunadiM Bajana nI
mADi AnaMda vAridhIyali miMdu
A mahime pogaLalU | enagAva aLalU [1]

j~jAnAyu rUpakane | prANapati enipanna
nInAgi tOruvali | ninna dayavirali |
maunISa ida horatu | anyabEDenu oLitu
prANa muKa tatvESa | rolime saha ASa [2]

AnaMda tIrtha mata | SiShTarali BOdhisuta
dInajana paripAla | hariBakta lOlA |
jANa gurugOviMda | viThala mahimAnaMda
nInAgi koTTenna uddhariso Ganna [3]

Leave a Reply

Your email address will not be published. Required fields are marked *

You might also like

error: Content is protected !!