Composer : Shri Purandara dasaru

By Smt.Shubhalakshmi Rao

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ||ಪ||
ಪದುಮನಾಭನ ಪಾದ ಭಜನೆ ಸುಖವಯ್ಯ ||ಅ||

ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೆಕು
ಬೆಲ್ಲವಾಗಿರಬೇಕು ಬಂಧುಜನರೊಳಗೆ |೧|

ಬುದ್ಧಿಯಲಿ ತನುಮನವ ತಿದ್ದಿಕೊಳುತಿರಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮಧ್ವಮತಾಬ್ಧಿಯಲಿ ಮೀನಾಗಿ ಇರಬೇಕು
ಶುದ್ಧನಾಗಿ ತತ್ವ ಶೋಧಿಸಲುಬೇಕು |೨|

ವಿಷಯಭೋಗದ ತೃಣಕೆ ಉರಿಯಾಗಿ ಇರಬೇಕು
ನಿಶಿಹಗಲು ಶ್ರೀಹರಿಯ ಭಜಿಸಬೇಕು
ವಸುಧೇಯೊಳು ಪುರಂದರವಿಠ್ಠಲನ ನಾಮವನು
ಹಸನಾಗಿ ನೆನೆನೆನೆದು ಸುಖಿಯಾಗಬೇಕು |೩|


idu BAgya idu BAgya idu BAgyavayya ||pa||
padumanABana pAda Bajane suKavayya ||a||

kallAgi irabEku kaThiNa BavatoreyoLage
billAgi irabEku ballavaroLage
mellane mAdhavana manava meccisabeku
bellavAgirabEku baMdhujanaroLage |1|

buddhiyali tanumanava tiddikoLutirabEku
muddAgi irabEku muni yOgigaLige
madhvamatAbdhiyali mInAgi irabEku
SuddhanAgi tatva shOdhisalubEku |2|

viShayaBOgada tRuNake uriyAgi irabEku
niSihagalu SrIhariya bhajisabEku
vasudhEyoLu puraMdaraviThThalana nAmavanu
hasanAgi nenenenedu sukhiyAgabEku |3|

Leave a Reply

Your email address will not be published. Required fields are marked *

You might also like

error: Content is protected !!