Composer : Shri Vijayadasaru
ಶ್ರೀಕೃಷ್ಣಾವತಾರ ಸುಳಾದಿ
ರಾಗ: ಶಂಕರಾಭರಣ
ಧ್ರುವತಾಳ
ಆವನ್ನ ದಯದಿಂದ ಈ ದೇಹ ದೊರಕೋದು
ಆವನ್ನ ದಯದಿಂದ ಗುರು ಕರುಣಿಸುವನು
ಆವನ್ನ ದಯದಿಂದ ಸುಜ್ಞಾನ ತಿಳಿವದು
ಆವನ್ನ ದಯದಿಂದ ಭಕ್ತಿ ವೆಗ್ಗಳಿಸುವದು
ಆವನ್ನ ದಯದಿಂದ ವೈರಾಗ್ಯ ಪುಟ್ಟುವುದು
ಆವನ್ನ ದಯದಿಂದ ಧ್ಯಾನ ಸಂಘಟಿಸುವದು
ಆವನ್ನ ದಯದಿಂದ ಬಿಂಬಾ ಪೊಳೆವದು
ಆವನ್ನ ದಯದಿಂದ ತನ್ನ ತಾನರಿವನು
ಆವನ್ನ ದಯದಿಂದ ಆಗಮ ನಿಲ್ಲುವದು
ಆವನ್ನ ದಯದಿಂದ ಸಂಚಿತ ಪರಿವದು
ಆವನ್ನ ದಯದಿಂದ ಪ್ರಾರಬ್ಧ ತೀರುವದು
ಆವನ್ನ ದಯದಿಂದ ಈ ದೇಹ ದೊರಕೋದು
ಆವನ್ನ ದಯದಿಂದ ಭುವನತ್ರಯವಾಶ್ರೈಸೋದು
ಆವನ್ನ ಪಾವನ್ನ ನಾಮ ನೆನೆದರೆ
ಜೀವನ್ನ ಸುಖ ಉಂಟು ಜನರ ಭಯವಿಲ್ಲಾ
ಕಾವನ್ನಪಿತ ಹರಿ ವಿಜಯವಿಟ್ಠಲ ಸಂ –
ಜೀವನ್ನ ನಂಬಲು ಕಾವಾನು ದಯದಿಂದ || ೧ ||
ಮಟ್ಟತಾಳ
ನಂಬುವದಂಬುವದು ಅಂಬುಧಿಯೊಳು ಮಲಗಿ
ಅಂಬುಜ ಪೊಕ್ಕಳಲಿ ಅಂಬುಜಭವ ನೆಂ –
ದಂಬವನ ಪಡೆದ ಕಂಬುಕಂಠನ ಪಾ –
ದಾಂಬು ಧರಿಸಿ ತ್ರಿಯಂಬಕ ಪೆಸರಾದ
ನಂಬುವದಂಬುವದು ಅಂಬುಜಪತಿ ಪೀ –
ತಾಂಬರ ವಿಜಯವಿಟ್ಠಲನ ನಾಮವ
ಉಂಬವಗಲ್ಲದಲೆ ಇಂಬಿಲ್ಲ ಪರದಲ್ಲಿ
ಎಂಬುವದು ಶತಸಿದ್ಧಾ
ನಂಬುವದಂಬುವದು ಅಂಬುಜನಾಭನಾ || ೨ ||
ರೂಪಕತಾಳ
ಗೋಕುಲದೊಳು ಜನಿಸಿ ಏಕ ಮಾನವನಾಗಿ
ಆಕಳ ಕಾಯಿದ ಅನೇಕ ಗೋವಳರೊಡನೆ
ಸಾಕಾರ ಸತ್ಕ್ರೀಯಾ ಏಕಮೇವನು ತಾನು
ಲೋಕಕ್ಕೆ ಬಹು ಮೋಹಕ ತೋರುತ್ತಾ
ನಾಕಾದ್ಯರಿಗೆ ದೂರ ಭೀಕರಸುರಹರ
ಬೇಕಾದರೆ ಸಿಗ ನೂಕಿದರೆ ಪೋಗಾ
ಶೋಕನಾಶನ ನಾಮಾ ವಿಜಯವಿಟ್ಠಲರೇಯಾ
ಸಾಕಿ ಗೊಲ್ಲರಿಗೆ ಸಾಲೋಕ್ಯವ ಪಾಲಿಸಿದಾ || ೩ ||
ಝಂಪೆತಾಳ
ಆವ ದೇವರು ಕೊಟ್ಟ ವರಗಳನು ಜಯಿಸಿ ಮ –
ತ್ತಾವವನು ಕ್ಷಿತಿಯೊಳಗೆ ಪೆಸರಾದನೂ
ಆವನಾ ತೋರು ಅನಾದಿ ಕಾಲದಲಿಂದ
ಹೇವರಿಕೆ ಹಿಡಿಯದಲೆ ಹಿತರ್ಥವಾ
ಗೋವುಜನ್ನಿಗೆ ಪಾಲು ಶುನಕನ ಮರಿ ತಂದು
ದೇವರಾಮನೆಯೊಳು ಕುಡಿಸಿದಂತೆ
ನೋವಿಗರಾಗದೆ ಸರ್ವಲಕ್ಷಣ ನಾಮ
ಶ್ರೀವಿಜಯವಿಟ್ಠಲ ಸದೈವ ದೈವವೆನ್ನಿರೋ || ೪ ||
ತ್ರಿವಿಡಿತಾಳ
ಗುಂಡೇರಿ ಬಾಡಿ ಎದೆಗುಂಡಿಯ ಒಣಗಿಸಿ
ಕೆಂಡದ ಮಧ್ಯದಲಿ ಅಂಡೊಲಿದು ನಿಂದು
ದಿಂಡುಂದೆ ಉರುಳಿ ಮುಂಕೊಂಡು ಮಂಡಲವೆಲ್ಲ
ಕಂಡಲ್ಲೆ ತಿರುಗಿ ತಿರುಗಿ ತಿರುಗಿ ನೀವು
ದಂಡುಣಿಯಿಂದಲಿ ದಣಿದು ವ್ಯರ್ಥವಾಗಿ ನೀವ
ಖಂಡಾ ಮನಸಿನಲ್ಲಿ ಭಂಡಾದರೆ ನಮ್ಮಾ
ಅಂಡಜ ಗಮನಾನೊಲಿಯ ಕಾಣಿರೋ
ಪುಂಡರೀಕಾಕ್ಷ ಶ್ರೀವಿಜಯವಿಟ್ಠಲನ್ನ
ಪುಂಡರೀಕ ಪಾದದೊಲಿಮೆಯಾಗದನಕಾ || ೫ ||
ಅಟ್ಟತಾಳ
ಸಪ್ತವೆರಡು ಲೋಕದೊಳಗೆ ವ್ಯಾಪ್ತಾನೀತಾ
ಸಪ್ತವರಣ ಬಾಹಿರದೊಳಗೀತಾ
ಸಪ್ತಾರ್ಚಿ ವಿಪ್ರರಾ ಮುಖದಿಂದ ಭುಂಜಿಸಿ
ತೃಪ್ತಿಯ ಬಡುವನೀತಾ ನಿತ್ಯತೃಪ್ತನೀತಾ
ಆಪ್ತನು ಜನುಮ ಜನುಮ ನಿಜದಾಸರಿಗೆ
ಕ್ಲಿಪ್ತಿಗೆ ಕಡಿಮೆ ಇಲ್ಲದಂತೆ ಪೊರೆವನು
ಗೋಪ್ತನಾಮ ನಮ್ಮ ವಿಜಯವಿಟ್ಠಲ ಸಂ –
ಕ್ಷೇಪ್ತನು ಎಂದೆಂದಿಗೆ ಇಹ ಪರದಲ್ಲಿ || ೬ ||
ಆದಿತಾಳ
ಮೂರೊಂದು ಮೂರೊಂದು ಮೂರು ಎರಡು ಮೂರು ಮೂರು
ಮೂರುತಿಯ ರೂಪ ನೋಡಿ ಮೂರು ಮೂಲೆಯೊಳಗಿದ್ದಾ
ಮೂರುತಿಯಿಂದ ಕೂಡಿಸಿ ಮೂರುತಿ ನಿರ್ಮಳರಾಗಿ
ಮೂರರೊಳಗೆ ಒಂದು ಪಿಡಿದು ಮೂರು ಪುರಾಣದಲ್ಲಿ ನೀನು
ಮೂರೊಂದು ಪದವಿಯಲ್ಲಿ ಮೂರುತಿವಂತನಾಗೋ
ಮೂರು ಆರು ಎರಡು ಕಲಿತು ಮೂರುತಿ ವಿಜಯವಿಟ್ಠಲನ್ನ
ಮೂರು ರೂಪಾದವನ ನಂಬಿ ಮೂರು ಮುವತ್ತವರ ಕೂಡೊ || ೭ ||
ಜತೆ
ನೀನೆಂದು ನಂಬಲು ಲಿಂಗ ಶರೀರವ
ಹಾನಿ ಮಾಡುವ ವಿಷ್ಣು ವಿಜಯವಿಟ್ಠಲನೊಲಿದು ||
SrIkRuShNAvatAra suLAdi
rAga: SaMkarABaraNa
dhruvatALa
Avanna dayadiMda I dEha dorakOdu
Avanna dayadiMda guru karuNisuvanu
Avanna dayadiMda suj~jAna tiLivadu
Avanna dayadiMda Bakti veggaLisuvadu
Avanna dayadiMda vairAgya puTTuvudu
Avanna dayadiMda dhyAna saMGaTisuvadu
Avanna dayadiMda biMbA poLevadu
Avanna dayadiMda tanna tAnarivanu
Avanna dayadiMda Agama nilluvadu
Avanna dayadiMda saMcita parivadu
Avanna dayadiMda prArabdha tIruvadu
Avanna dayadiMda I dEha dorakOdu
Avanna dayadiMda BuvanatrayavASraisOdu
Avanna pAvanna nAma nenedare
jIvanna suKa uMTu janara BayavillA
kAvannapita hari vijayaviTThala saM –
jIvanna naMbalu kAvAnu dayadiMda || 1 ||
maTTatALa
naMbuvadaMbuvadu aMbudhiyoLu malagi
aMbuja pokkaLali aMbujaBava neM –
daMbavana paDeda kaMbukaMThana pA –
dAMbu dharisi triyaMbaka pesarAda
naMbuvadaMbuvadu aMbujapati pI –
tAMbara vijayaviTThalana nAmava
uMbavagalladale iMbilla paradalli
eMbuvadu SatasiddhA
naMbuvadaMbuvadu aMbujanABanA || 2 ||
rUpakatALa
gOkuladoLu janisi Eka mAnavanAgi
AkaLa kAyida anEka gOvaLaroDane
sAkAra satkrIyA EkamEvanu tAnu
lOkakke bahu mOhaka tOruttA
nAkAdyarige dUra BIkarasurahara
bEkAdare siga nUkidare pOgA
SOkanASana nAmA vijayaviTThalarEyA
sAki gollarige sAlOkyava pAlisidA || 3 ||
JaMpetALa
Ava dEvaru koTTa varagaLanu jayisi ma –
ttAvavanu kShitiyoLage pesarAdanU
AvanA tOru anAdi kAladaliMda
hEvarike hiDiyadale hitarthavA
gOvujannige pAlu Sunakana mari taMdu
dEvarAmaneyoLu kuDisidaMte
nOvigarAgade sarvalakShaNa nAma
SrIvijayaviTThala sadaiva daivavennirO || 4 ||
triviDitALa
guMDEri bADi edeguMDiya oNagisi
keMDada madhyadali aMDolidu niMdu
diMDuMde uruLi muMkoMDu maMDalavella
kaMDalle tirugi tirugi tirugi nIvu
daMDuNiyiMdali daNidu vyarthavAgi nIva
KaMDA manasinalli BaMDAdare nammA
aMDaja gamanAnoliya kANirO
puMDarIkAkSha SrIvijayaviTThalanna
puMDarIka pAdadolimeyAgadanakA || 5 ||
aTTatALa
saptaveraDu lOkadoLage vyAptAnItA
saptavaraNa bAhiradoLagItA
saptArci viprarA muKadiMda BuMjisi
tRuptiya baDuvanItA nityatRuptanItA
Aptanu januma januma nijadAsarige
kliptige kaDime illadaMte porevanu
gOptanAma namma vijayaviTThala saM –
kShEptanu eMdeMdige iha paradalli || 6 ||
AditALa
mUroMdu mUroMdu mUru eraDu mUru mUru
mUrutiya rUpa nODi mUru mUleyoLagiddA
mUrutiyiMda kUDisi mUruti nirmaLarAgi
mUraroLage oMdu piDidu mUru purANadalli nInu
mUroMdu padaviyalli mUrutivaMtanAgO
mUru Aru eraDu kalitu mUruti vijayaviTThalanna
mUru rUpAdavana naMbi mUru muvattavara kUDo || 7 ||
jate
nIneMdu naMbalu liMga SarIrava
hAni mADuva viShNu vijayaviTThalanolidu ||
Leave a Reply