Krishnavatara stotra suladi – Swargati nirgati

Composer : Shri Vijayadasaru

Smt.Nandini Sripad

ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ
ರಾಗ: ನಾಟಿ

ಧ್ರುವತಾಳ
ಸ್ವರ್ಗತಿ ನಿರ್ಗತಿ ಸಕಲ ನಿಗಮ ಮಸ್ತಕ ರನ್ನನೇ
ಅಗಣಿತ ಬಲನೇ ಜಗದಾ ಮೋಹನನೇ
ಸಗುಣ ನಿರ್ಗುಣದವನೇ ಸ್ವಗುರು ಸ್ವವಶನೇ
ಸ್ವಗಮನಾನೇ ಸ್ವಾಂಗ ಝಗಿಪ ಮುಕುಟನೇ
ಮಗುವಾಗಿ ನಗುತ ಮಲಗಿದ ಮಹಿಮನೇ
ಯುಗ ಯುಗದವತಾರ ಅನಾದಿಗನೇ ಜಗಕೆ ಸೋ –
ಜಿಗ ತೋರಿದ ಮಗುವಾದವನೇ
ಹಗಲಿರುಳು ಗೋಪಿಗೆ ಬಗೆ ತೋರಿದವನೇ
ಭೊಗರಿ ಚಂಡು ಚಿಣಿ ಕೋಲಾಡಿದವನೇ
ಚಿಗಿದು ಅಡವಿ ತಿರುಗಿ ವಗರು ಮೆದ್ದವನೇ
ಹಗಲಿರುಳು ಪರರ ವಗತನ ನಳಿದವನೇ
ಬಗೆಬಗೆಯಿಂದಲಿ ಹಗರಣದವನೇ
ಜಗಕೆ ಚನ್ನಿಗ ಗುಪ್ತ ವಿಜಯವಿಟ್ಠಲನೇ
ವಿಗಡತನದ ವಿನೋದಿಗನೆ ಪಳ್ಳಿಗನೇ || ೧ ||

ಮಟ್ಟತಾಳ

ಸಾಗರವೆಲ್ಲಾಪೋಷಣೆಗೊಂಬಾ –
ದಾಗಿದೆ ನಿನ್ನ ಕರತಳವಯ್ಯಾ
ವಾಗರ ಗಂಜಿ ಅಂಬಲಿ ಜೋರು
ನೀಗುಡುವೆ ಭೊಗಸಿಯನು ವಡ್ಡಿ
ದಾಗಡಿ ಬಳ್ಳಿ ತಲೆಗೆ ಸುತ್ತಿ
ಆಗರದೊಳಗೆ ಆಡುವದೇನೋ
ಸೋಗು ತೋರಿದ ವಿಚಿತ್ರ ಚರಿತಾ ಪ್ರ –
ಜಾಗರ ಮೂರುತಿ ವಿಜಯವಿಟ್ಠಲ
ಹೀಗಲ್ಲದೆ ಮತ್ತಾರರ್ಚಿಸಾರೇ || ೨ ||

ತ್ರಿವಿಡಿತಾಳ

ಸುತನ ಕನ್ನಿಕೆ ಮಾಡಿ ನೆರವ ಸ್ವರಮಣನೆ
ಕ್ಷಿತಿಯೊಳು ಗೊಲ್ಲರಂಗನಿಯರ ರಮಿಸುವರೆ
ಸತಿಯಾಗಿ ಸುರರಿಗೆ ಅಮೃತವನೆರೆದವನೇ
ಸತಿಯರು ಬೇಕೇನೊ ಮಾಯಾ ಲೀಲಾಗಾರನೇ
ಹಿತವಾಗಿ ಸುರರಿಗುಪದೇಶವಿತ್ತವನೇ
ಕ್ಷಿತಿಸುರ ಸಾಂದೀಪನಲ್ಲಿ ಓದೀಗನೇ
ಯತಿಗಳ ಮನಸಿಗೆ ದೂರತರವಾಗುವನೇ
ರಥವನ್ನು ನಡಿಸಿದ ಬಂಡಿ ಓವಿಗನೇ
ಚತುರ ಶ್ರೀವಿಜಯವಿಟ್ಠಲ ವಿಶ್ವ ನಾಟಕ
ಅತಿ ಆಶ್ಚರ್ಯವ ತೋರಿದ ಸತತ ಚತುರಿಗನೆ || ೩ ||

ಅಟ್ಟತಾಳ

ಸ್ತಂಭ ಸಂಭವನಾಗಿ ಉದುಭವಿಸಿದ ಪರಿ
ಎಂಬಿನೆ ಶುಕ್ಲ ಶೋಣಿತ ವಿರಹಿತ ದೇವಾ
ಕುಂಭಿಣಿಯೊಳು ದೇವಕಿದೇವಿ ಗರ್ಭದ –
ಲಿಂಬಿಟ್ಟು ಜನನವಾದ ಪರಿ ಆವದು
ತುಂಬರ ನಾರದ ಜಂಭಾರಿ ಶಂಭು ಸ್ವ –
ಯಂಭು ಸುರಾದ್ಯರ ಕುಣಿಸುವ ದೇವ
ಕಂಬು ಕೊಳಲು ತುತ್ತೂರಿ ಮವುರಿ
ಭೊಂ ಭೊಂ ಭೊಂ ಎಂದು ಊದುವ ಜಾಣಾ
ಕುಂಭದೊಳಗೆ ಜಲ ತುಂಬಿ ಅನೇಕರು
ಸಂಭ್ರಮದಿಂದಲಿ ಸಾಲಾಗಿ ನೋಡೆ
ಅಂಬಕಗಳಿ ಗಿಳಿಯಂಬಕ ಪೊಳೆವಂತೆ
ತುಂಬಿದ್ದ ಪರಿಪೂರ್ಣ ವಿಜಯವಿಟ್ಠಲರೇಯಾ || ೪ ||

ಆದಿತಾಳ

ಘನವಂಗುಟದಲಿನ್ನು ವನಜಜಾಂಡಗಳನ್ನು
ತೃಣದಂತೆ ವ್ಯಾಪಿಸಿ ದಿನವಾ ನಡಿಸುವ ದೈವಾ
ಮನುಜ ವೇಷವ ತಾಳಿ ಜನನಿಯ ಭೀತಿಗೆ ಬಾ –
ಯನು ಮುಚ್ಚಿ ಬಾಲನಾಗಿ ಮನಿಯೊಳಗಿಪ್ಪ ದೇವ
ಅಣು ಘನವೆರಡು ನಿನ್ನನಬಾರದು ನಿನ್ನ
ಗುಣಗಳ ಸರ್ವಲಕ್ಷಣಗಳು ನೂತನವೂ
ಅನಿಶನಾಮಕ ನಮ್ಮ ವಿಜಯವಿಟ್ಠಲರೇಯಾ
ಅನುಪಮ ಚರಿತ ಚೇತನಾಚೇತನ ಪ್ರಾಣಾ || ೫ ||

ಜತೆ

ಅಮರಾಸುರರಿಗೆ ಸೌಖ್ಯದುಃಖಕ್ಕೆ ಕಾರಣ
ನಮೋ ನಮೋ ಸೋಮ ವಿಜಯವಿಟ್ಠಲ ಗೋಪ||


SrIvijayadAsArya viracita
SrIkRuShNAvatAra stOtra suLAdi
rAga: nATi

dhruvatALa
svargati nirgati sakala nigama mastaka rannanE
agaNita balanE jagadA mOhananE
saguNa nirguNadavanE svaguru svavaSanE
svagamanAnE svAMga Jagipa mukuTanE
maguvAgi naguta malagida mahimanE
yuga yugadavatAra anAdiganE jagake sO –
jiga tOrida maguvAdavanE
hagaliruLu gOpige bage tOridavanE
Bogari caMDu ciNi kOlADidavanE
cigidu aDavi tirugi vagaru meddavanE
hagaliruLu parara vagatana naLidavanE
bagebageyiMdali hagaraNadavanE
jagake canniga gupta vijayaviTThalanE
vigaDatanada vinOdigane paLLiganE || 1 ||

maTTatALa

sAgaravellApOShaNegoMbA –
dAgide ninna karataLavayyA
vAgara gaMji aMbali jOru
nIguDuve Bogasiyanu vaDDi
dAgaDi baLLi talege sutti
AgaradoLage ADuvadEnO
sOgu tOrida vicitra caritA pra –
jAgara mUruti vijayaviTThala
hIgallade mattArarcisArE || 2 ||

triviDitALa

sutana kannike mADi nerava svaramaNane
kShitiyoLu gollaraMganiyara ramisuvare
satiyAgi surarige amRutavaneredavanE
satiyaru bEkEno mAyA lIlAgAranE
hitavAgi surarigupadESavittavanE
kShitisura sAMdIpanalli OdIganE
yatigaLa manasige dUrataravAguvanE
rathavannu naDisida baMDi OviganE
catura SrIvijayaviTThala viSva nATaka
ati AScaryava tOrida satata caturigane || 3 ||

aTTatALa

staMBa saMBavanAgi uduBavisida pari
eMbine Sukla SONita virahita dEvA
kuMBiNiyoLu dEvakidEvi garBada –
liMbiTTu jananavAda pari Avadu
tuMbara nArada jaMBAri SaMBu sva –
yaMBu surAdyara kuNisuva dEva
kaMbu koLalu tuttUri mavuri
BoM BoM BoM eMdu Uduva jANA
kuMBadoLage jala tuMbi anEkaru
saMBramadiMdali sAlAgi nODe
aMbakagaLi giLiyaMbaka poLevaMte
tuMbidda paripUrNa vijayaviTThalarEyA || 4 ||

AditALa

GanavaMguTadalinnu vanajajAMDagaLannu
tRuNadaMte vyApisi dinavA naDisuva daivA
manuja vEShava tALi jananiya BItige bA –
yanu mucci bAlanAgi maniyoLagippa dEva
aNu GanaveraDu ninnanabAradu ninna
guNagaLa sarvalakShaNagaLu nUtanavU
aniSanAmaka namma vijayaviTThalarEyA
anupama carita cEtanAcEtana prANA || 5 ||

jate

amarAsurarige sauKyaduHKakke kAraNa
namO namO sOma vijayaviTThala gOpa ||

Leave a Reply

Your email address will not be published. Required fields are marked *

You might also like

error: Content is protected !!