Composer : Shri Vijayadasaru
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ
(ದಶಮಸ್ಕಂಧ ಭಾಗವತ)
ರಾಗ: ಸಾರಂಗ
ಧ್ರುವತಾಳ
ಕೃಷ್ಣಾ ಕಮಲನಾಭಾ ಕ್ರೀಡಾ ವಿನೋದ ಸರ್ವೋ –
ತ್ಕೃಷ್ಟ ಉದಾರ ಮನುಜ ವಿಗ್ರಹ ಲೀಲಾ
ಕೃಷ್ಣ ಬಾಂಧವ ಗೋಪಾ ಖಗವಾಹನ ದೇವಾ
ಅಷ್ಟ ಮಹಿಷಿ ರಮಣಾ ಶಾಮವರ್ನಾ
ಸೃಷ್ಟಿ ಸಂಹಾರ ಕರ್ತಾ ನಿರ್ದೋಷ ಗುಣವಾರಿಧಿ
ಶ್ರೇಷ್ಠಜನಕ ಸ್ವಾತಂತ್ರ ಪುರುಷಾ
ದುಷ್ಟದಾನವ ಹರಣಾ ದುಃಖನಿವಾರಣಾ
ಇಷ್ಟಾರ್ಥ ಪಾಲಿಸುವ ವಿಶ್ವಾ ಮನೋ –
ಭೀಷ್ಟವೇ ಭುಜಗಶಯ್ಯ ಸಕಲರಿಗೆ ಬ –
ಲೀಷ್ಟನೇ ಭವದೂರ ಅನಂತ ಕಾಲ ಧ –
ರ್ಮಿಷ್ಟನೇ ವೈಕುಂಠರಮಣ ಗೋಪಾಲನಾಥ
ನಿಷ್ಟಜನರ ಪಾತ್ರ ಮಿತ್ರಕೋಟಿ ತೇಜ
ತೃಷ್ಟ ಸಂತತ ಸಾರ್ವಭೌಮಾ ಬಲು ಪ್ರ –
ತಿಷ್ಟ ಉಂಟಾದ ದೈವ ಸರ್ವರೊಳಗೆ ಪ್ರ –
ವಿಷ್ಟನಾಗಿ ನಾನಾ ಚರಿತೆ ನಡಿಸುವ ಮಾಯಾ
ಕಷ್ಟ ದಾರಿದ್ರರಹಿತಾ ಕರುಣಿ ದಾನಿಗಳರಸ
ವಿಷ್ಣು ವಿಶ್ವರೂಪ ಲೋಕವಿಲಕ್ಷಣ
ವೃಷ್ಣಿಕುಲೋದ್ಭವ ವಿಜಯವಿಟ್ಠಲ ಎನ್ನಾ –
ರಿಷ್ಟ ಪೋಗಾಡು ದಿವ್ಯದೃಷ್ಟಿಯಿಂದಲಿ ನೋಡು || ೧ ||
ಮಟ್ಟತಾಳ
ಧರಣಿಯೊಳಗೆ ಮಹಾ ದುರುಳರು ಉದುಭವಿಸಿ
ನಿರುತ ಧರ್ಮಕೆ ಕೇಡು ತರುತಿರಲಾಗಿ ನಿ –
ರ್ಜರ ಸಮುದಾಯವು ನೆರೆದು ಯೋಚಿಸಿ ತಾ –
ಮರಸ ಸುತನ ಬಳಿಗೆ ಹರಿದು ಪೋಗಲು ನಿನಗೆ
ಅರುಹಲು ಕೇಳುತ್ತಲೇ ಕರುಣದಿಂದಲಿ ಆ –
ದರಿಸಿ ಸುರರಿಗೆಲ್ಲಾ ಧರಣಿಯೊಳಗೆ ಅವ –
ತರಿಸಿ ಮುಂದಾಗಿ ಸಂಚರಿಸುತ್ತಲಿರು ಎಂದು
ಪರಮಾನುಗ್ರಹ ಮಾಡಿ ಪೊರೆದಾ ಪ್ರೀತಿ ದೈವಾ
ನರಲೀಲೆ ತೋರಿ ವಿಜಯವಿಟ್ಠಲ ನರ –
ಹರಿ ರೂಪ ಧರಿಸಿದ ಪರಮ ಮಂಗಳ ಮೂರ್ತಿ || ೨ ||
ರೂಪಕತಾಳ
ಅಸುರ ಕಂಸನು ತಾಮಸ ಬುದ್ಧಿಯಲ್ಲಿ ವ್ಯ-
ಖ್ಖಸನಾಗಿ ರೋಷದಲ್ಲಿ ವಸುದೇವ ದೇವಕಿಯ
ಮಸದು ಮತ್ಸರಿಸಿ ಇಡಿಸಿದ ನಿಗಳವ ಬಂ –
ಧಿಸಿ ಶೆರೆಮನೆಯಲ್ಲಿ ಅಸೂಯವ ಬಡುತಲೆ
ಕುಸುಮನಾಭನೇ ಜನಿಸುವೆನೆಂದು ಮಾ –
ನಿಸ ವೇಷವನು ತಾಳಿ ಕುಶಲದಿಂದಲಿ ಆ –
ವಸುದೇವ ದೇವಕಿ ಬಸುರಿಲಿ ಉದುಭವಿಸಿ ಚಕ್ರಾಗದಾಬ್ಜ
ಬಿಸಿಜ ಚನ್ನಾಗಿ ಧರಿಸಿದ ಚತುರಹಸ್ತಾ
ದಿಶೆಗೆ ರವಿಯಂತೆ ರಂಜಿಸುವ ಸ್ವಪ್ರಕಾಶ
ಹಸುಳೆಯಾಗಿ ತೋರಿದ ಪರಂಜ್ಯೋತಿ
ವಸುಧಿ ಭಾರಹರಣ ವಿಜಯವಿಟ್ಠಲ ನೀನೆ
ಶಿಶುವಾಗಿ ಕಣ್ಣಿಗೆ ಕಾಣಿಸಿಕೊಂಡೆ ಈರ್ವರಿಗೆ || ೩ ||
ಝಂಪೆತಾಳ
ಮಧುರಾ ಪುರದಲಿ ಜನಿಸಿ ವೇಗದಿ ಯಮುನಾ
ನದಿ ದಾಟುವಾಗ ಉರಗನು ಸೇವೆಯನು ಮಾಡೆ
ಒದಗಿ ತಂದು ನಿನ್ನ ಯಶೋದಾ ದೇವಿಯ
ಬದಿಯಲ್ಲಿ ಇಟ್ಟು ದುರ್ಗಾದೇವಿಯ ವೈಯ್ಯೇ
ಅದರಿಂದ ಕಂಸಗೆ ಖೇದ ವೆಗ್ಗಳಿಸೆ ಕ –
ರದು ಪೂತನಿಯನಟ್ಟೀ ಅವಳ ಅಸು ಹೀರಿದೆ
ಒದದೆ ಶಕಟನ ವನಕ್ಕೆ ಪೋದಲ್ಲಿ ಕಾಲಿಲೀ
ಮುದದಿಂದಲಿ ಬಲು ಜಾರ ಚೋರನೆನಿಸಿದೇ
ಮದುವೆ ಇಲ್ಲದೆ ಬಹು ಮಕ್ಕಳನ್ನು ಪಡೆದೇ
ಗದೆ ಬಿಲ್ಲು ಗಜುಗು ಚಂಡಾಟದಲಿ ಮೆರೆದೇ
ಎದುರಾದ ಹಯ ವೃಷಭ ಬಕ ಧೇನುಕ ವತ್ಸ
ಮೊದಲಾದ ಖಳರ ಮರ್ದಿಸಿ ಯಮಳಾರ್ಜುನರ
ಪದದಲ್ಲಿ ಶಾಪವನು ಕಳೆದು ಕಿಚ್ಚನೇ ನುಂಗಿ
ಹೃದದೊಳಗೆ ಇದ್ದ ಕಾಳಿಂಗನ ತುಳಿದು ಕಾಯ್ದು
ಸದರವಿಲ್ಲದೆ ಗಿರಿಗೆ ಹಾಕಿದನ್ನವನ್ನುಂಡು
ತುದಿ ಬೆರಳಲಿಂದೇಳು ದಿವಸ ಗಿರಿಯ ಧರಿಸಿ
ತ್ರಿದಶನಾಯಕನ ಭಂಗಿಸಿದೆ ಆ ಕ್ಷಣದಲೀ
ಕ್ಷುಧಿಗೆ ಅಂಬಲಿ ಕುಡಿದು ಗೋವಳರನಟ್ಟಿ ಯಾ –
ಗದ ಅನ್ನ ಸತಿಯರಿಂದಲಿ ತರಿಸಿ ಭುಂಜಿಸಿದೇ
ಪದುಮಗರ್ಭಗೆ ಬೆಡಗು ತೋರಿದ ಮಹದೈವ
ಪದುಮಲೋಚನ ನಮ್ಮ ವಿಜಯವಿಟ್ಠಲರೇಯಾ
ಮದನಾಟದಲ್ಲಿ ಗೋಪಿಯರ ಕೂಡ ನಲಿದಾ || ೪ ||
ತ್ರಿವಿಡಿತಾಳ
ಕರೆಯ ಬಂದಕ್ರೂರ ಭಕುತನ್ನ ಮನ್ನಿಸಿ
ಮರಳೆ ನಾರಿಯರ ವೊಡಂಬಡಿಸಿ
ಬರುತ ಉದಕದೊಳು ರೂಪವ ತೋರಿ
ಕರಿಯ ಸೀಳಿದೆ ರಜಕನ ಸಹಿತ
ಶರಾಸನ ಮುರಿದು ಗೋಮಕ್ಕಳೊಡನುಂಡೆ
ಹರುಷದಿಂದಲಿ ಮಾಲೆ ಕೊಡಲು ಧರಿಸಿಕೊಂಡೆ
ಕುರೂಪಿಯ ತಿದ್ದಿ ದಿವ್ಯಾಂಗನಿಯ ಮಾಡಿ
ತರಳನಾಗಿ ಪೋಗಿ ಸೊಕ್ಕಿದಾನಿಯ ಕೊಂದೆ
ವರಿಸಿದೆ ಮಲ್ಲರ ಕಾಳಗದೊಳಗೆ ನಿಂದು
ಹರಿದು ಕಂಸನ ಪಿಡಿದು ಅವನಿಗೆ ಈಡಾಡಿ
ಉರದ ಮೇಲೆ ಕುಣಿದು ಅವನ ಮರ್ದಿಸಿದೆ ಮುಂದೆ
ಸೆರೆಬಿದ್ದ ಜನನಿ ಜನಕರ ಬಿಡಿಸಿದೆ
ಮೆರೆದೆ ಬಾಲನಾಗಿ ಸೋಜಿಗವ ತೋರಿ
ಪರಮಜ್ಞಾನಿ ನೀನೆ ಸಾಂದೀಪನಲಿ ಓದಿ
ಗುರುಪುತ್ರ ಮೃತವಾಗಿರಲು ತಂದಿತ್ತೆ
ಸಿರಿ ರುಗ್ಮಿಣಿ ಸತ್ಯಭಾಮೆಯರ ಮಿಕ್ಕಾದಷ್ಟ –
ತರುಣಿಯರ ಮದುವ್ಯಾದಿ ಚರಿತೆ ತೋರಿ
ಭರದಿಂದ ಜರಾಸಂಧ ಕಾಲಯಮ ಶಿಶುಪಾಲ
ನರಕ ಹಂಸ ಡಿಬಿಕ ಸಾಲ್ವ ಪೌಂಡ್ರಿಕ
ದುರುಳಾಶ್ರೀಗಳ ದಂತವಕ್ತ್ರ ಬಲು ದೈತ್ಯರ
ಒರಿಸಿದ ಅವರವರ ದುರುಳಾತೆಯನು ನೋಡಿ
ಕರುಣದಿಂದಲಿ ಮುಚುಕುಂದನ್ನ ಪಾಲಿಸೀ
ಪರಿಪರಿ ಬಗೆಯಿಂದ ಶರಧಿಯೊಳಗೆ ನಲಿದೆ
ಹರನಲ್ಲಿ ಸಂತಾನ ಬೇಡಿ ತಪವ ಮಾಡಿದೆ
ಹಿರಿದೋ ನಿನ್ನ ಮಹಿಮೆ ಪೊಗಳಾಲಳವೇ
ಅರಸು ಉಗ್ರಸೇನಗೆ ಒಲಿದ ವಿಜಯವಿಟ್ಠಲ
ಸರಿ ಸರಿ ಬಂದಂತೆ ಲೀಲೆ ಮಾಡಿದ ದೇವ || ೫ ||
ಅಟ್ಟತಾಳ
ದ್ವಾರಕಾಪುರದಲ್ಲಿ ನಾರಿಯರ ಕೂಡ
ವಾರವಾರಕೆ ವಿಹಾರ ಮಾಡಿದ ದೈವಾ
ನಾರದನು ಒಂದು ಪಾರಿಜಾತವ ತರೇ
ಕಾರುಣ್ಯದಲಿ ಪೋಗಿ ನಾರಿಯ ಸಂಗಡ
ಪಾರಿಜಾತ ವೃಕ್ಷ ಬೇರರಸಿ ತಂದೆ
ದಾರಿದ್ರತನದಲ್ಲಿ ಧಾರುಣಿಸುರ ನಿನ್ನ
ಸಾರಲು ಭಾಗ್ಯ ಅಪಾರವಾಗಿಯಿತ್ತೆ
ಆರು ಹತ್ತುಸಾವಿರ ಸತಿಯರಲ್ಲಿ
ಈರೈದುಸುತರು ಕುಮಾರಿ ಒಬ್ಬಳ ವಿ –
ಸ್ತಾರದಿಂದಲಿ ಪೆತ್ತ ಮೀರಿದಾ ದೈವವೇ
ವಾರಿಧಿಯೊಳು ಪೋಗಿ ಕಿರೀಟಿಗೋಸುಗ
ಧಾರುಣಿಸುರನ ಕುಮಾರನ ಕರೆದಿತ್ತೇ
ಭೂರಿ ದಕ್ಷಿಣದಿಂದಾಧ್ವರವ ಮಾಡಿದೆ
ಕೋರಿದವರ ಮನಸಾರ ವರವನೀವಾ
ವಾರಿಜಧರ ನಮ್ಮ ವಿಜಯವಿಟ್ಠಲರೇಯಾ
ತೋರಿದೆ ಸುರಮುನಿ ನಾರದಗೆ ಬೆಡಗು || ೬ ||
ಆದಿತಾಳ
ಏಕಮೇವನು ನೀನು ಲೋಕದೊಳಗೆ ಬಲು
ಪ್ರಾಕೃತ ಚರಿತೆ ಅನೇಕ ಬಗೆಯಲಿ ತೋರಿ
ಆ ಕಂದರ್ಪಜ ಪಿನಾಕಿಯ ಭಕುತನ್ನ
ಸೂಕುಮಾರಿಗೆ ಸೋತು ತಾಕಿ ಸೆರೆ ಬಿದ್ದಿರಲು
ಪಾಕಶಾಸನ ಸುಧಾಕಲಶ ತಂದವನ್ನ
ನೀ ಕರುಣದಿಂದಲೇರಿ ರಾಕಾಬ್ಜನಂತೆ ಪೊಳೆವ
ನಾಕ ಜನರ ನೋಡಿ ಶ್ರೀಕಂಠನ ಹಿಂದು ಮಾಡಿ
ಭೂಕಂಪಿಸುವ ಬಲೀಕುಮಾರನ ಕರಗ –
ಳಾ ಕಡಿದು ಮೊಮ್ಮಗನ ಜೋಕೆಯಿಂದಲಿ ಬಿಡಿಸಿ
ಲೋಕ ಮೂರರೊಳಗೆ ಸಾಕಾರನೆನಿಸಿದೆ
ಸಾಕು ಮಾಡಿದೆ ಯದುಕುಲವನ್ನು ವ –
ನೀಕೆ ನೆವದಿಂದ ಲೋಕೇಶ ತಲೆದೂಗೆ
ಸಾಕಿದೆ ಭೂಮಿಯ ತೂಕಾ ಇಳುಹಿ ವೇಗ
ವಾಕು ಉದ್ಧವಗೆ ವಿವೇಕ ಮಾರ್ಗವ ಪೇಳಿ
ಈ ಕೃಷ್ಣಾವತಾರ ಸಾಕುಮಾಡಿ ವಂ –
ದೂ ಕಳೇವರ ಇಟ್ಟು ಈ ಕುಂಭಿಣಿಗೆ ತೋರಿ –
ದಾ ಕಪಟನಾಟಕ ಶ್ರೀಕಾಂತ ತಾ –
ಳಂಕ ತಮ್ಮ ವಿಜಯವಿಟ್ಠಲಾ
ಸೋಂಕಿದಾಕ್ಷಣ ತೊಂಡೆ ಭೂಕಾಂತವಾಗಿದೆ || ೭ ||
ಜತೆ
ಪಾರ್ಥಸಾರಥಿ ಕುರುವಂಶ ಘಾತಕನೆ ಮು –
ಕ್ತಾರ್ಥ ಎನ್ನ ದೊರೆ ವಿಜಯವಿಟ್ಠಲರೇಯಾ ||
SrIvijayadAsArya viracita
SrIkRuShNAvatAra stOtra suLAdi
(daSamaskaMdha BAgavata)
rAga: sAraMga
dhruvatALa
kRuShNA kamalanABA krIDA vinOda sarvO –
tkRuShTa udAra manuja vigraha lIlA
kRuShNa bAMdhava gOpA KagavAhana dEvA
aShTa mahiShi ramaNA SAmavarnA
sRuShTi saMhAra kartA nirdOSha guNavAridhi
SrEShThajanaka svAtaMtra puruShA
duShTadAnava haraNA duHKanivAraNA
iShTArtha pAlisuva viSvA manO –
BIShTavE BujagaSayya sakalarige ba –
lIShTanE BavadUra anaMta kAla dha –
rmiShTanE vaikuMTharamaNa gOpAlanAtha
niShTajanara pAtra mitrakOTi tEja
tRuShTa saMtata sArvaBaumA balu pra –
tiShTa uMTAda daiva sarvaroLage pra –
viShTanAgi nAnA carite naDisuva mAyA
kaShTa dAridrarahitA karuNi dAnigaLarasa
viShNu viSvarUpa lOkavilakShaNa
vRuShNikulOdBava vijayaviTThala ennA –
riShTa pOgADu divyadRuShTiyiMdali nODu || 1 ||
maTTatALa
dharaNiyoLage mahA duruLaru uduBavisi
niruta dharmake kEDu tarutiralAgi ni –
rjara samudAyavu neredu yOcisi tA –
marasa sutana baLige haridu pOgalu ninage
aruhalu kELuttalE karuNadiMdali A –
darisi surarigellA dharaNiyoLage ava –
tarisi muMdAgi saMcarisuttaliru eMdu
paramAnugraha mADi poredA prIti daivA
naralIle tOri vijayaviTThala nara –
hari rUpa dharisida parama maMgaLa mUrti || 2 ||
rUpakatALa
asura kaMsanu tAmasa buddhiyalli vya-
KKasanAgi rOShadalli vasudEva dEvakiya
masadu matsarisi iDisida nigaLava baM –
dhisi Seremaneyalli asUyava baDutale
kusumanABanE janisuveneMdu mA –
nisa vEShavanu tALi kuSaladiMdali A –
vasudEva dEvaki basurili uduBavisi cakrAgadAbja
bisija cannAgi dharisida caturahastA
diSege raviyaMte raMjisuva svaprakASa
hasuLeyAgi tOrida paraMjyOti
vasudhi BAraharaNa vijayaviTThala nIne
SiSuvAgi kaNNige kANisikoMDe Irvarige || 3 ||
JaMpetALa
madhurA puradali janisi vEgadi yamunA
nadi dATuvAga uraganu sEveyanu mADe
odagi taMdu ninna yaSOdA dEviya
badiyalli iTTu durgAdEviya vaiyyE
adariMda kaMsage KEda veggaLise ka –
radu pUtaniyanaTTI avaLa asu hIride
odade SakaTana vanakke pOdalli kAlilI
mudadiMdali balu jAra cOranenisidE
maduve illade bahu makkaLannu paDedE
gade billu gajugu caMDATadali meredE
edurAda haya vRuShaBa baka dhEnuka vatsa
modalAda KaLara mardisi yamaLArjunara
padadalli SApavanu kaLedu kiccanE nuMgi
hRudadoLage idda kALiMgana tuLidu kAydu
sadaravillade girige hAkidannavannuMDu
tudi beraLaliMdELu divasa giriya dharisi
tridaSanAyakana BaMgiside A kShaNadalI
kShudhige aMbali kuDidu gOvaLaranaTTi yA –
gada anna satiyariMdali tarisi BuMjisidE
padumagarBage beDagu tOrida mahadaiva
padumalOcana namma vijayaviTThalarEyA
madanATadalli gOpiyara kUDa nalidA || 4 ||
triviDitALa
kareya baMdakrUra Bakutanna mannisi
maraLe nAriyara voDaMbaDisi
baruta udakadoLu rUpava tOri
kariya sILide rajakana sahita
SarAsana muridu gOmakkaLoDanuMDe
haruShadiMdali mAle koDalu dharisikoMDe
kurUpiya tiddi divyAMganiya mADi
taraLanAgi pOgi sokkidAniya koMde
variside mallara kALagadoLage niMdu
haridu kaMsana piDidu avanige IDADi
urada mEle kuNidu avana mardiside muMde
serebidda janani janakara biDiside
merede bAlanAgi sOjigava tOri
paramaj~jAni nIne sAMdIpanali Odi
guruputra mRutavAgiralu taMditte
siri rugmiNi satyaBAmeyara mikkAdaShTa –
taruNiyara maduvyAdi carite tOri
BaradiMda jarAsaMdha kAlayama SiSupAla
naraka haMsa Dibika sAlva pauMDrika
duruLASrIgaLa daMtavaktra balu daityara
orisida avaravara duruLAteyanu nODi
karuNadiMdali mucukuMdanna pAlisI
paripari bageyiMda SaradhiyoLage nalide
haranalli saMtAna bEDi tapava mADide
hiridO ninna mahime pogaLAlaLavE
arasu ugrasEnage olida vijayaviTThala
sari sari baMdaMte lIle mADida dEva || 5 ||
aTTatALa
dvArakApuradalli nAriyara kUDa
vAravArake vihAra mADida daivA
nAradanu oMdu pArijAtava tarE
kAruNyadali pOgi nAriya saMgaDa
pArijAta vRukSha bErarasi taMde
dAridratanadalli dhAruNisura ninna
sAralu BAgya apAravAgiyitte
Aru hattusAvira satiyaralli
Iraidusutaru kumAri obbaLa vi –
stAradiMdali petta mIridA daivavE
vAridhiyoLu pOgi kirITigOsuga
dhAruNisurana kumArana karedittE
BUri dakShiNadiMdAdhvarava mADide
kOridavara manasAra varavanIvA
vArijadhara namma vijayaviTThalarEyA
tOride suramuni nAradage beDagu || 6 ||
AditALa
EkamEvanu nInu lOkadoLage balu
prAkRuta carite anEka bageyali tOri
A kaMdarpaja pinAkiya Bakutanna
sUkumArige sOtu tAki sere biddiralu
pAkaSAsana sudhAkalaSa taMdavanna
nI karuNadiMdalEri rAkAbjanaMte poLeva
nAka janara nODi SrIkaMThana hiMdu mADi
BUkaMpisuva balIkumArana karaga –
LA kaDidu mommagana jOkeyiMdali biDisi
lOka mUraroLage sAkAraneniside
sAku mADide yadukulavannu va –
nIke nevadiMda lOkESa taledUge
sAkide BUmiya tUkA iLuhi vEga
vAku uddhavage vivEka mArgava pELi
I kRuShNAvatAra sAkumADi vaM –
dU kaLEvara iTTu I kuMBiNige tOri –
dA kapaTanATaka SrIkAMta tA –
LaMka tamma vijayaviTThalA
sOMkidAkShaNa toMDe BUkAMtavAgide || 7 ||
jate
pArthasArathi kuruvaMSa GAtakane mu –
ktArtha enna dore vijayaviTThalarEyA ||
Leave a Reply