Composer : Shri Purandara dasaru
ಗುಣವಾಯಿತೆನ್ನ ಭವರೋಗ
ಕೃಷ್ಣನೆಂಬ ವೈದ್ಯ ದೊರಕಿದನು
ಗುಣವಾಗುವವರಿಗೆ ಎಣೆಯಿಲ್ಲ
ಗುಣವಂತರಾಗುವರು ಭವವೆಲ್ಲ ||ಪ||
ಸಂತತ ಹರಿಭಕ್ತಿಯನು ಪಾನ
ಸಂತತ ಗುರುಭಕ್ತಿ ಮರುಪಾನ
ಸಂತತ ಶ್ರವನ ಕಠಿನ ಪಥ್ಯ
ಸಂತತ ಕೀರ್ತನ ಉಷ್ಣೋದಕ |೧|
ಚಂದ್ರೋದಯ ಉಂಟು ಈತ-ನಲ್ಲಿ
ಚಿಂತಾಮಣಿಯುಂಟು ಈತ-ನಲ್ಲಿ
ಸಂಚಿಯೊಳಗೆ ತುಂಬ ಮಾತ್ರೆಗಳುಂಟು
ಚೆನ್ನಾಗಿ ಗುಣ ಮಾಡುವನೀತ |೨|
ಗುರು ಸ್ಮರಣೆಯು ಶುಂಠಿ ಮೆಣಸು
ಹರಿ ದಿವ್ಯ ನಾಮವು ಸಾರನ್ನ
ಗುರು ಪಾದ ಸೇವೆಯು ಸಿಹಿ ಸಾರು
ಹರಿ ಪಾದೋದಕವೇ ಘೃತವು |೩|
ಸಹಸ್ರನಾಮದಿ ತಾ ವಂದ್ಯ
ಸಕಲ ಸ್ವತಂತ್ರಕೆ ತಾ ಬಾಧ್ಯ
ಹರಿ ಸರ್ವೋತ್ತಮ-ನೆಂಬ ವೈದ್ಯ
ಪುರಂದರವಿಠಲನೆ ನಿರವದ್ಯ |೪|
guNavAyitenna BavarOga
kRuShNaneMba vaidya dorakidanu
guNavAguvavarige eNeyilla
guNavaMtarAguvaru Bavavella ||pa||
saMtata hariBaktiyanu pAna
saMtata guruBakti marupAna
saMtata Sravana kaThina pathya
saMtata kIrtana uShNOdaka |1|
caMdrOdaya uMTu Ita-nalli
ciMtAmaNiyuMTu Ita-nalli
saMciyoLage tuMba mAtregaLuMTu
cennAgi guNa mADuvanIta |2|
guru smaraNeyu SuMThi meNasu
hari divya nAmavu sAranna
guru pAda sEveyu sihi sAru
hari pAdOdakavE GRutavu |3|
sahasranAmadi tA vaMdya
sakala svataMtrake tA bAdhya
hari sarvOttama-neMba vaidya
puraMdaraviThalane niravadya |4|
Leave a Reply