Tatva suvvali – Shri Bhu Durga Stuti

Composer : Shri Jagannatha dasaru

ಶ್ರೀ ಜಗನ್ನಾಥದಾಸಾರ್ಯ ವಿರಚಿತ ತತ್ತ್ವಸುವ್ವಾಲಿ
ಶ್ರೀ ಭೂ – ದುರ್ಗಾ ಸ್ತುತಿ

ಶ್ರೀಭೂಮಿದುರ್ಗೆ ಮತ್ತೇಭೇಂದ್ರಗಮನೆ ಸ್ವ –
ರ್ಣಾಭಗಾತ್ರೇ ಸುಚರಿತ್ರೆ | ಸುಚರಿತ್ರೆ ಶ್ರೀಪದ್ಮ-
ನಾಭನ್ನ ಜಾಯೆ ವರವೀಯೆ || ೧ ||

ತ್ರಿಗುಣಾಭಿಮಾನಿ ಎನ್ನವಗುಣದ ರಾಶಿಗಳ
ಬಗೆಯದಲೆ ಕಾಯೆ ವರವೀಯೆ | ವರವೀಯೆ ನಿನ್ನ ಪದ-
ಯುಗಳಕ್ಕೆ ನಮಿಪೆ ಜಗದಂಬೆ || ೨ ||

ದರಹಸಿತವದನಸುಂದರಿ ಕಮಲಸದನೆ ನಿ-
ರ್ಜರಸಿದ್ಧಗೀತೇ ವಿಧಿಮಾತೇ | ವಿಧಿಮಾತೆ ಲೋಕಸುಂ-
ದರಿಯೆ ನೀ ನೋಡೇ ದಯಮಾಡೇ || ೩ ||

ಪ್ರಳಯಕಾಲದಿ ಪತಿಯು ಮಲಗಬೇಕೆನುತ ವಟ-
ದೆಲೆಯಾಗಿ ಹರಿಯ ಒಲಿಸಿದಿ | ಒಲಿಸಿದಿ ಜಗದ ಮಂ-
ಗಳದೇವಿ ನಮಗೆ ದಯವಾಗೆ || ೪ ||

ತಂತುಪಟದಂತೆ ಜಗದಂತರ್ಬಹಿರದಲ್ಲಿ
ಕಾಂತನೊಡಗೂಡಿ ನೆಲೆಸಿರ್ಪೆ | ನೆಲೆಸಿರ್ಪೆ ನೀನೆನ್ನ
ಅಂತರಂಗದಲಿ ನೆಲೆಗೊಳ್ಳೆ || ೫ ||

ಈಶಕೋಟಿಪ್ರವಿಷ್ಟೆ ಈಶಭಿನ್ನಳೆ ಸರ್ವ –
ದೋಷವರ್ಜಿತಳೆ ವರದೇಶೇ | ವರದೇಶೆ ಪತಿಯೊಡನೆ
ವಾಸವಾಗೆನ್ನ ಮನದಲ್ಲಿ || ೬ ||

ಆನಂದಮಯ ಹರಿಗೆ ನಾನಾಭರಣವಾದೆ
ಪಾನೀಯವಾದೆ ಪಟವಾದೆ | ಪಟವಾದೆ ಪಂಕಜ-
ಪಾಣಿ ನೀನೆಮಗೆ ದಯವಾಗೆ ||೭||

ಮಹದಾದಿ ತತ್ತ್ವಗಳ ಧರಿಸಿ ನಿನ್ನುದರದೊಳು
ದೃಹಿಣಾಂಡ ಪಡೆದೆ ಪತಿಯಿಂದ | ಪತಿಯಿಂದ ಶ್ರೀಲಕ್ಷ್ಮಿ
ಮಹಮಹಿಮಳೆ ಎಮಗೆ ದಯವಾಗೆ || ೮ ||

ಆವ ಬ್ರಹ್ಮಭವಾದಿ ದೇವರೆಲ್ಲರು ತವ ಕೃ –
ಪಾವಲೋಕನದಿ ಕೃತಕೃತ್ಯ | ಕೃತ ಕೃತ್ಯರಾಗಿಹರು
ದೇವಿ ನಾ ಬಯಸುವುದು ಅರಿದಲ್ಲ || ೯ ||

ಪಕ್ಷೀಂದ್ರವಾಹನನ ವಕ್ಷಸ್ಥಳನಿವಾಸಿ
ಅಕ್ಷಯಜ್ಞಾನಿ ಸುಖಪೂರ್ಣೆ | ಸುಖಪೂರ್ಣೆ ಕಮಲದಳಾಯ-
ತಾಕ್ಷಿ ನೋಡು ದಯದಿಂದ || ೧೦ ||

ಹಲವು ಮಾತೇಕೆ ಶ್ರೀಲಲನೆ ಜಗನ್ನಾಥವಿ –
ಟ್ಠಲ ನಿಂದ ಕೂಡಿ ಮನದಲ್ಲಿ | ಮನದಲ್ಲಿ ವಾಸವಾ-
ಗ್ಹಲವು ಕಾಲದಲಿ ಅವಿಯೋಗಿ || ೧೧ ||


SrI jagannAthadAsArya viracita tattvasuvvAli
SrI BU – durgA stuti

SrIBUmidurge mattEBEMdragamane sva –
rNABagAtrE sucaritre | sucaritre SrIpadma-
nABanna jAye varavIye || 1 ||

triguNABimAni ennavaguNada rASigaLa
bageyadale kAye varavIye | varavIye ninna pada-
yugaLakke namipe jagadaMbe || 2 ||

darahasitavadanasuMdari kamalasadane ni-
rjarasiddhagItE vidhimAtE | vidhimAte lOkasuM-
dariye nI nODE dayamADE || 3 ||

praLayakAladi patiyu malagabEkenuta vaTa-
deleyAgi hariya olisidi | olisidi jagada maM-
gaLadEvi namage dayavAge || 4 ||

taMtupaTadaMte jagadaMtarbahiradalli
kAMtanoDagUDi nelesirpe | nelesirpe nInenna
aMtaraMgadali nelegoLLe || 5 ||

ISakOTipraviShTe ISaBinnaLe sarva –
dOShavarjitaLe varadESE | varadESe patiyoDane
vAsavAgenna manadalli || 6 ||

AnaMdamaya harige nAnABaraNavAde
pAnIyavAde paTavAde | paTavAde paMkaja-
pANi nInemage dayavAge ||7||

mahadAdi tattvagaLa dharisi ninnudaradoLu
dRuhiNAMDa paDede patiyiMda | patiyiMda SrIlakShmi
mahamahimaLe emage dayavAge || 8 ||

Ava brahmaBavAdi dEvarellaru tava kRu –
pAvalOkanadi kRutakRutya | kRuta kRutyarAgiharu
dEvi nA bayasuvudu aridalla || 9 ||

pakShIMdravAhanana vakShasthaLanivAsi
akShayaj~jAni suKapUrNe | suKapUrNe kamaladaLAya-
tAkShi nODu dayadiMda || 10 ||

halavu mAtEke SrIlalane jagannAthavi –
TThala niMda kUDi manadalli | manadalli vAsavA-
g~halavu kAladali aviyOgi || 11 ||

Leave a Reply

Your email address will not be published. Required fields are marked *

You might also like

error: Content is protected !!