Composer : Shri Kalluru Subbanacharya [Vyasa vittala]
ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊ
ಸಿದ್ಧ ಮೂರುತಿ ವೆಂಕಟೇಶಾ [ಪ]
ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪ
ಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ [ಅ.ಪ.]
ಸಾಕಾರ ಸರ್ವಾಧಾರೀ | ಸ್ವಾಮಿ
ಲೋಕ ನಾಯಕನೆ ಉದಾರೀ ||
ಭೂಕಾಂತ ಭವ ಭಯಹಾರೀ | ಜಗ
ದೇಕನೆ ಪರ ಉಪಕಾರೀ |
ನಾ ಕರ ಮುಗಿವೆ ಕೃಪಾಕರ ಮೂರ್ತಿ ಇ |
ನ್ಯಾಕೆ ನಿರ್ದಯ ಮಾಡಿ ನೀಕರಿಸುವಿ ಎನ್ನ ||
ಸಾಕು ನಿನಗೆ ಪರಾಕು ಪೇಳುವ |
ದ್ಯಾಕೆ ಭಕುತರ ಸಾಕಲರಿಯೆ
ಸಾಕು ಭವ ಸುಖನೇಕ ಪರಿಯಲಿ |
ಬೇಕು ಪಾಲಿಸು ಏಕ ಭಕುತಿಯ [೧]
ಧರೆಗೆ ವೈಕುಂಠದ ಪರಿಯೇ | ತೋರಿ
ಮೆರೆವಿ ಮಹಾತ್ಮ ಶ್ರೀಹರಿಯೇ ||
ಸರಿ ನಿನಗಿದು ಹೊಸ ಪರಿಯೇ | ಭಾಗ್ಯ
ಮರಿಯಾದ ಮರಿತಿ ನೀ ಧೊರೆಯೇ ||
ಶಿರಿಯೆ ಮಂದಿರವಾಗಿ ಪರಿಪರಿ ರೂಪದಿ
ಕರವ ಜೋಡಿಸಿ ಉಪಚರಿಯ ಮಾಡಲು ಇತ್ತ
ಸರಸಿಜೋದ್ಭವ ಗರುಡ ನರಹರ |
ಸುರಪಮುಖ ದಿವಿಜರು ಪರಾಕೆನೆ
ಪರಮ ಪದ ಸಂಪದವಿದಲ್ಲದೆ |
ಶಿರಿಯ ಭಾಗ್ಯದಿ ಪರವೆ ನಿನಗೇ [೨]
ಮಣಿಮಯ ಖಚಿತ ಕಿರೀಟಾ | ಸಾರೆ
ಅನುವಾದ ನಾಮ ಲಲಾಟಾ ||
ಮಿನುಗುವ ನಗೆ ವಾರೆನೋಟಾ | ದಿನ
ಮಣಿ ಕರ್ಣ ಕುಂಡಲ ಮಾಟಾ ||
ಘನ ಶಂಖ ಚಕ್ರ ಭೂಷಣ ಶ್ರೀ ವತ್ಸಾಂಕ ಶೋ-
ಭನ ಕೌಸ್ತುಭ ಮಣಿ ಗಣ ಹಾರ ಶೃಂಗಾರ ||
ಖಣಿಯೆ ಕಟಿಕರ ಕನಕಮಯ ಸುವಸನ
ಕಾಂಚೀದಾಮ ಒಪ್ಪಲು ಪ್ರಣತರ ಭಯ
ಪ್ರದಕರ ಕುಂಭಿಣಿಗೆ
ತೋರುವ ಅನಘ ವೆಂಕಟನೆ [೩]
ನಿಗಮ ಗೋಚರ ನಿತ್ಯ ಮೋದಾ | ವಾದ
ಝಗ ಝಗಿಸುವ ದಿವ್ಯ ಪಾದಾ ||
ಯುಗಳಾರಾಧನಿ ಪರರಾದಾವರಿಗೆ |
ಅಗಣಿತ ಸುಖವೀವ ಶ್ರೀದಾ ||
ಗಗನ ಭೂಮಿಪ ಗತಿಪ್ರದ ದಶರಥ | ಪಂಚ
ಮೊಗನಾದಿ ಭುವನದೊಳಣುಗ ಮೊದಲಾದ ||
ಜಗದಿ ಬಹು ತಾಪಸಿಗಳ ಭಾವದಿ |
ಶಿಗದೆ ಮೋಹಾದಿಗಳ ಪಾಶಕೆ
ಮುಗಿದು ಕರಗಳ ಪೊಗಳುವರಿಗೆ |
ಬಗೆ ಬಗೆಯ ಕಾಮಗಳ ಹರಿಸಿದ [೪]
ಸ್ವಾಮಿ ಪುಷ್ಕರಣಿ ನಿವಾಸಾ | ನಾದ
ಕಾಮಿತ ಪ್ರದನೆ ಲಕ್ಷ್ಮೀಶಾ ||
ಧೀಮಂತ ಮಣಿ ದೀನ ಪೋಷಾ | ಎನ್ನ
ಯಾ ಮರೆಯದಿರು ನಿನ್ನ ದಾಸಾ |
ಸಾಮಗಾಯನ ಲೋಲ ಸತತ ಸದ್ಗುಣ ಶೀಲ
ಸಾಮಜ ವರದ ಮಹಾ ಮಹಿಮನೆ ಸಾರ್ವ ||
ಭೌಮ ಭವ್ಯ ತ್ರಿಧಾಮ ಸಂತರ ಪ್ರೇಮ
ಪೂರಣ ಕಾಮ ದಿವಿಜ ಲ-
ಲಾಮ ಭೂಧರ ವ್ಯಾಸ ವಿಠಲ ಯಾಮ
ಯಾಮಕೆ ಎನ್ನ ಪಾಲಿಸೋ [೫]
madhvAMtargata SrInivAsA | kAyo
siddha mUruti veMkaTESA [pa]
iddhareyoLu ninna | hoddidavara pApa
baddhavAgadu anyOpadrave modalilla [a.pa.]
sAkAra sarvAdhArI | svAmi
lOka nAyakane udArI ||
BUkAMta Bava BayahArI | jaga
dEkane para upakArI |
nA kara mugive kRupAkara mUrti i |
nyAke nirdaya mADi nIkarisuvi enna ||
sAku ninage parAku pELuva |
dyAke Bakutara sAkalariye
sAku Bava suKanEka pariyali |
bEku pAlisu Eka Bakutiya [1]
dharege vaikuMThada pariyE | tOri
merevi mahAtma SrIhariyE ||
sari ninagidu hosa pariyE | BAgya
mariyAda mariti nI dhoreyE ||
Siriye maMdiravAgi paripari rUpadi
karava jODisi upacariya mADalu itta
sarasijOdBava garuDa narahara |
surapamuKa divijaru parAkene
parama pada saMpadavidallade |
Siriya BAgyadi parave ninagE [2]
maNimaya Kacita kirITA | sAre
anuvAda nAma lalATA ||
minuguva nage vArenOTA | dina
maNi karNa kuMDala mATA ||
Gana SaMKa cakra BUShaNa SrI vatsAMka SO-
Bana kaustuBa maNi gaNa hAra SRuMgAra ||
KaNiye kaTikara kanakamaya suvasana
kAMcIdAma oppalu praNatara Baya
pradakara kuMBiNige
tOruva anaGa veMkaTane [3]
nigama gOcara nitya mOdA | vAda
Jaga Jagisuva divya pAdA ||
yugaLArAdhani pararAdAvarige |
agaNita suKavIva SrIdA ||
gagana BUmipa gatiprada daSaratha | paMca
moganAdi BuvanadoLaNuga modalAda ||
jagadi bahu tApasigaLa BAvadi |
Sigade mOhAdigaLa pASake
mugidu karagaLa pogaLuvarige |
bage bageya kAmagaLa harisida [4]
svAmi puShkaraNi nivAsA | nAda
kAmita pradane lakShmISA ||
dhImaMta maNi dIna pOShA | enna
yA mareyadiru ninna dAsA |
sAmagAyana lOla satata sadguNa SIla
sAmaja varada mahA mahimane sArva ||
Bauma Bavya tridhAma saMtara prEma
pUraNa kAma divija la-
lAma BUdhara vyAsa viThala yAma
yAmake enna pAlisO [5]
Leave a Reply