Bayala bhrantiya bidisayya

Composer : Shri Vijaya dasaru

ಬಯಲ ಭ್ರಾಂತಿಯ ಬಿಡಿಸಿ ಬಲವಾದ ಮತಿ ನೀಡಿ |
ಬಯಲ ಭ್ರಾಂತಿಯ ಬಿಡಿಸಯ್ಯ ಗುರುರಾಯ (ಅ.ಪ.)

ನಾನು ಎನ್ನುವ ಭ್ರಾಂತಿ ನನ್ನದು ಎಂಬುವ ಭ್ರಾಂತಿ
ಸ್ವಾಮಿ ನೀ ಬಿಡಿಸೈಯ ಜ್ಞಾನಿ ಗುರುರಾಯ
ಏನು ಇಲ್ಲದ ಋಣ ಬಾಧೆಯ ತಾಳೆ ನಾ
ಪಾರು ಗಾಣಿಸಿ ಕಾಯೊ ಪಾವನ ಹೃದಯ [೧]

ಆಸೆ ಪಾಶ ಮೋಹ ಮೋಸ ವಿಲಾಸಕೆ
ಸೋತು ಹೋಯಿತು ಮನ ಮುನಿ ಕುಲ ಶ್ರೇಯ
ಏಸು ಜನ್ಮದ ಪಾಪ ಮೀಸಲಾಗಿದೆ ಕಾಣೆ
ಘಾಸಿ ಮಾಡದೆ ಕಾಯೊ ವಾಸುದೇವನ ಪ್ರೀಯ [೨]

ದಾನಿ ಎಂಬುದು ಕೇಳಿ ಧಾವಿಸಿ ನಾ ಬಂದೆ
ಜ್ಞಾನ ಬಿಕ್ಷೆಯ ನೀಡೊ ಜ್ಞಾನಿ ಗುರುರಾಯ
ಹೀನ ಕರ್ಮದಿಂದ ಕ್ಷೀಣವಾಯಿತು ದೇಹ
ಕಾಣುವೆನೆಂದಿಗೆ ತವ ಚರಣ ಕಮಲ [೩]

ಪಾಮರ ನಾನೈಯ್ಯ ಪಾಪ ಹರ ನೀನೈಯ್ಯ
ಪ್ರೇಮದಿ ದಯ ಮಾಡೊ ಪಾದಾಮೃತ
ಪ್ರಾರ್ಥನೆ ಅರ್ಪಣೆ ಇರಲಿ ತವ ಪಾದದಿ
ವಿಜಯ ವಿಠ್ಠಲ ದಾಸನ ಶ್ರೀಸ ಪ್ರಭುವೆ [೪]


bayala bhrAMtiya biDisi balavAda mati neeDi |
bayala bhrAMtiya biDisayya gururAya (a.pa.)

nAnu ennuva bhrAMti nannadu eMbuva bhrAMti
swAmi nee biDisaiya j~jAni gururAya
Enu illada RuNa bAdheya tALe naa
pAru gANisi kAyo pAvana hRudaya [1]

Ase pAsha mOha mOsa vilAsake
sOtu hOyitu mana muni kula shrEya
Esu janmada pApa mIsalAgide kANe
ghAsi mADade kAyo vAsudEvana prIya [2]

dAni eMbudu kELi dhAvisi naa baMde
j~jAna bikSheya neeDo j~jAni gururAya
heena karmadiMda kSheeNavAyitu dEha
kANuveneMdige tava charaNa kamala [3]

pAmara nAnaiyya pApa hara neenaiyya
prEmadi daya mADo pAdAmRuta
prArthane arpaNe irali tava pAdadi
vijaya viThThala dAsana shrIsa prabhuve [4]

Leave a Reply

Your email address will not be published. Required fields are marked *

You might also like

error: Content is protected !!