Composer : Shri Indiresha ankita
ರಾಘವೇಂದ್ರ ತೀರ್ಥ |
ಬೋಧಿಸು ಭಾಗವತದ ಅರ್ಥ |
ರಾಘವ ನಿಜಪದ ಆರಾಧಿಪ ಧೀರ,
ಸರಾಗದಿ ಪಾಲಿಸು ನೀ ಪುರುಷಾರ್ಥ [ಪ]
ತುಂಗಾ ತೀರ ನಿವಾಸ, ತುಂಗಾ ತಟವಾಸ
ರಾಘವ ಸಿಂಗನ ನಿಜದಾಸ,
ಪಂಗು ಬಧಿರ ಮುಖ್ಯಾಂಗ ಹೀನರ
ಕೃಪಾಂಗ ನೋಟದಿ ಶುಭಾಂಗರ ಮಾಡುವಿ [೧]
ಪಾದೋದಕ ಸೇವಾ ಕೃತರಿಗೆ,
ಅಗಾಧ ಫಲಗಳೀವ,
ಮಾಧವನಾಜ್ಞೆಯಲಿ ಮಾಯಿಗಳೋಡಿಸಿ
ಸಾಧು ಜನಕೆ ಆಹ್ಲಾದ ಬಡಿಸುವಂತೆ [೨]
ಭುಜಗಧರಾಧಿಪನಾ ವಲಿಸಿಕೊಂಡ
ಸುಜನ ಶಿರೋಮಣಿಯೇ,
ನಿನ್ನ ನಿಜ ಪದ ಯುಗಳನು ಭಜಿಸುವ ಜನಕೆ
ವಿಜಯಪ್ರದ ಇಂದಿರೆಶನ ದೂತ [೩]
rAGavEMdra tIrtha |
bOdhisu BAgavatada artha |
rAGava nijapada ArAdhipa dhIra,
sarAgadi pAlisu nI puruShArtha [pa]
tuMgA tIra nivAsa, tuMgA taTavAsa
rAGava siMgana nijadAsa,
paMgu badhira muKyAMga hInara
kRupAMga nOTadi SuBAMgara mADuvi [1]
pAdOdaka sEvA kRutarige,
agAdha PalagaLIva,
mAdhavanAj~jeyali mAyigaLODisi
sAdhu janake AhlAda baDisuvaMte [2]
BujagadharAdhipanA valisikoMDa
sujana SirOmaNiyE,
ninna nija pada yugaLanu Bajisuva janake
vijayaprada iMdireSana dUta [3]
Leave a Reply