Composer : Shri Henne ranga dasaru
ದೇವಿ ನೀ ಕರುಣಿಸಮ್ಮಾ ಶಿರಿ ಲಕುಮಿ
ದೇವಿ ನೀ ಕರುಣಿಸಮ್ಮಾ |ಪ|
ದೇವಿ ನೀ ಕರುಣಿಸು ದೀನನ ಮರಿಯದೇ ಭಾವದಿ
ಮನದಲಿ ಭಜಿಸುವೆ ತಾಯಿ [ಅ.ಪ]
ವಾರಿಜಮುಖಿ ನಿನ್ನ ವಂದಿಸುವೆ ನಾನು
ದಾರಿದ್ರ್ಯ ಪರಿಹರಿಸಿ, ದಯಮಾಡಿ ಸಲಹಮ್ಮಾ [೧]
ಸಾಗರನ ಸುತೆ ಸಕಲ ಲೋಕ ಮಾತೆ
ನಾಗ ಶಯನನ, ಉರದಲಿ ನಲಿದಾಡುವಿ [೨]
ಮದಗಜ ಗಾಮಿನಿ ಮಹಿಮಾ ಪ್ರಕಾಶಿನಿ
ಪದುಮನಾಭನ ಪಟ್ಟದ ರಾಣಿ [೩]
ಚಂದಿರಮುಖಿ ಚಲುವ ಕಾಂತೆ ಸೀತೇ
ಇಂದ್ರಾದಿಗಳಿಗೆ ಒಲಿದಿಷ್ಟಾರ್ಥ ವೀಯುವಿ [೪]
ಅರವಿಂದಾಲಯರನ್ನೆ ಆನಂದ ಪರಿಪೂರ್ಣೆ
’ವರ ಹೆನ್ನೆ ವಿಠಲನ’ ರಮಾ ನಮ್ಮಮ್ಮಾ ಕಾಯಮ್ಮಾ [೫]
dEvi nI karuNisammA Siri lakumi
dEvi nI karuNisammA |pa|
dEvi nI karuNisu dInana mariyadE BAvadi
manadali Bajisuve tAyi [a.pa]
vArijamuKi ninna vaMdisuve nAnu
dAridrya pariharisi, dayamADi salahammA [1]
sAgarana sute sakala lOka mAte
nAga Sayanana, uradali nalidADuvi [2]
madagaja gAmini mahimA prakASini
padumanABana paTTada rANi [3]
caMdiramuKi caluva kAMte sItE
iMdrAdigaLige olidiShTArtha vIyuvi [4]
araviMdAlayaranne AnaMda paripUrNe
‘vara henne viThalana’ ramA nammammA kAyammA [5]
Leave a Reply