Composer : Shri Vijaya dasaru
ಮಂತ್ರಾಲಯನಿವಾಸ ಉತ್ತಮ ಹಂಸ |
ಸಂತಾಪ ಪರಿಹರಿಸಿ ಕೊಡು ಎನಗೆ ಲೇಸಾ || ಪ||
ಯತಿಗಳ ಶಿರೋರನ್ನ ಯೋಗಸಂಪನ್ನ |
ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||
ನುತಿಸುವೆ ಭಕ್ತಿಯಲಿ ಬಿಡದೆ |
ಮುಕುತಿಯಲಿ ಸತತಾನಂದವನೀವ (೧)
ಕಪಿಲ ತೀರ್ಥದಲ್ಲಿ ಕರಣ ಶುದ್ಧಿಯಲ್ಲಿ |
ತಪವ ಮಾಡುವ ಮೌನಿ ಸೌಮ್ಯ ಜ್ಞಾನಿ ||
ಜಪಶೀಲ ಗುಣ ಗಣಾಂಬುಧಿ, ಪುಣ್ಯದ ಬುದ್ಧಿ
ಕೃಪೆಮಾಡಿ ಕೊಡು ಗುರುವೆ, ಶಿಷ್ಯ ಸುರ ತರುವೆ (೨)
ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |
ಶಮೆ ದಮೆಯಲ್ಲಿ ಉಳ್ಳ ಮಹಿಮೆಯಾ ||
ನಮಗೆ ಪೇಳುವೆ ವೇದಬಲ್ಲ ವಿನೋದ |
ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ (೩)
ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ |
ಭೇದ ವಿದ್ಯಾ ಸಜ್ಜನಕೆ ತಿಳುಪೆ ಮನಸು ನಿಲ್ಲಿಪೆ ||
ಪೋಷಿಸುವೆ ಅವರ ಅಟ್ಟುವ ಮಹದುರ |
ದೋಷವ ಕಳೆವಂಥ ವಿಮಲ ಶಾಂತ (೪)
ವರಹಜ ತೀರದಲ್ಲಿದ್ದ ಸುಪ್ರಸಿದ್ದ |
ಮರುತ ಮತಾಂಬುಧಿ ಸೋಮ ನಿಸ್ಸೀಮ ||
ಸರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ |
ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ (೫)
maMtrAlayanivAsa uttama haMsa |
saMtApa pariharisi koDu enage lEsA || pa||
yatigaLa SirOranna yOgasaMpanna |
kShitiyoLage ninage sarigANeno ||
nutisuve Baktiyali biDade |
mukutiyali satatAnaMdavanIva (1)
kapila tIrthadalli karaNa Suddhiyalli |
tapava mADuva mauni saumya j~jAni ||
japaSIla guNa gaNAMbudhi, puNyada buddhi
kRupemADi koDu guruve, SiShya sura taruve (2)
tamOguNa kArya pOgalADu vyAptiyA |
Same dameyalli uLLa mahimeyA ||
namage pELuve vEdaballa vinOda |
sumana suguNava mecce durmatake kicce (3)
kASi sEtuve madhye merevE janaralli |
BEda vidyA sajjanake tiLupe manasu nillipe ||
pOShisuve avara aTTuva mahadura |
dOShava kaLevaMtha vimala SAMta (4)
varahaja tIradallidda suprasidda |
maruta matAMbudhi sOma nissIma ||
sarasijApati namma vijayaviThThalanaMGri |
smarisuva sudhIMdra suta rAGavEMdra (5)
Leave a Reply