Composer : Shri Jagannatha dasaru
ರಾಗ: ಪಂತುವರಾಳಿ , ಖಂಡಛಾಪುತಾಳ
ಯಾತರವ ನಾನಯ್ಯ ಇಂದಿರೇಶ || ಪ ||
ಹೋತನಾಮಕನೆ ನಿನ್ನಾಧೀನ ಈ ಜಗವೆಲ್ಲ || ಅ ಪ ||
ಕಾಲಗುಣಕರ್ಮ ಸ್ವಭಾವಗಳ ಮನ ಮಾಡಿ |
ಶ್ರೀಲೋಲ ನೀ ಸರ್ವರೊಳಗೆ ಇದ್ದು ||
ಲೀಲೆಗೈಯುತ ಲಿಪ್ತನಾಗದೆ ನಿರುತದೀ |
ಪಾಲಿಸುವೆ ಸಂಹರಿಪೆದಿವಿಜದಾನವತತಿಯ || ೧ ||
ತಿಳಿಸಿಕೊಂಬುವ ನೀನೆ ಶೃತಿಸ್ಮೃತಿಗಳೊಳಗಿದ್ದು |
ತಿಳಿಸುವವ ನೀನೆ ಉಪದೇಶಕರೊಳು ||
ತಿಳಿವವನು ನೀನೆ ಬುದ್ಧ್ಯಾದಿಂದ್ರಿಯಗಳೊಳಗೆ |
ನೆಲೆಗೊಂಡುನಿಖಿಳವ್ಯಾಪಾರ ಮಾಡುತಲಿಪ್ಪೆ || ೨ ||
ಅಗಣಿತ ಮಹಿಮ ಜಗಜ್ಜನ್ಮಾದಿಕಾರಣ |
ತ್ರಿಗುಣವರ್ಜಿತ ತ್ರಿವಿಕ್ರಮ ತ್ರಿಧಾಮಾ ||
ಭೃಗುಮುನಿವಿನುತ ಜಗನ್ನಾಥವಿಠ್ಠಲ ನಿನ್ನ |
ಪೊಗಳಿ ಹಿಗ್ಗುವ ಭಾಗ್ಯ ಕೊಡು ಜನುಮ ಜನುಮಕ್ಕೂ || ೩ ||
rAga: paMtuvarALi , KaMDaCAputALa
yAtarava nAnayya iMdirESa || pa ||
hOtanAmakane ninnAdhIna I jagavella || a pa ||
kAlaguNakarma svaBAvagaLa mana mADi |
SrIlOla nI sarvaroLage iddu ||
lIlegaiyuta liptanAgade nirutadI |
pAlisuve saMharipe divijadAnavatatiya || 1 ||
tiLisikoMbuva nIne SRutismRutigaLoLagiddu |
tiLisuvava nIne upadESakaroLu ||
tiLivavanu nIne buddhyAdiMdriyagaLoLage |
nelegoMDu niKiLa vyApAra mADutalippe || 2 ||
agaNita mahima jagajjanmAdikAraNa |
triguNavarjita trivikrama tridhAmA ||
BRugumunivinuta jagannAthaviThThala ninna |
pogaLi higguva BAgya koDu januma janumakkU || 3 ||
Leave a Reply