Yatara bhaya srinathana

Composer : Shri Jagannatha dasaru

By Smt.Nandini Sripad

ಶ್ರೀ ಜಗನ್ನಾಥದಾಸರ ರಚನೆ , ರಾಗ: ಜಂಜೂಟಿ , ಆದಿತಾಳ
ಯಾತರ ಭಯ ಶ್ರೀನಾಥನ ಪರಮ ಸು –
ಪ್ರೀತಿಯ ಪಡೆದವಗೆ ॥ ಪ ॥
ಕಾತರ ಪಡದಲೆ ಪಾತಕಹರ ವಿಧಿ
ತಾತನೆ ನಿಜಸುಖದಾತನೆಂದರಿತವಗ್ಯಾ ॥ ಅ.ಪ ॥

ಬಂಧು ಜನರು ತನಗೊಂದಿಸಿ ನುಡಿಯಲು ಬಂದ ಭಾಗ್ಯವೇನೊ
ಹಿಂದೆ ಮುಂದೆ ತನ್ನ ನಿಂದಿಸಿ ನುಡಿಯಲು ಕುಂದಾದದ್ದೇನೊ
ಮಂದರಧರ ಗೋವಿಂದನ ಮಾನಸ
ಮಂದಿರದಲಿ ತಂದಿಟ್ಟಿರುವವಗಿನ್ಯಾ ॥ 1 ॥

ದುಸುಮುಸುಗುಟ್ಟುವ ಸತಿಸುತರಿಂದಲಿ ಹಸಗೆಟ್ಟದ್ದೇನೋ
ಅಶನಾಚ್ಛಾದನ ತರಲಿಲ್ಲವೆಂದು ವ್ಯಸನಪಟ್ಟರೇನೊ
ಕುಸುಮನಾಭ ಸುಮನಸರೊಂದಿತ ಪದ
ವಸುದೇವನ ಸುತನೊಶದಲ್ಲಿರುವವಗ್ಯಾ ॥ 2 ॥

ಘಾಸಿಯಿಂದಲಾಯಾಸ ಪಡುತ ಅವಾಸದೊಳಿದ್ದೇನೋ
ಕಾಶಿ ಕಂಚಿ ಕಾಳಹಸ್ತಿ ಮೊದಲ ಪರ ದೇಶ ತಿರುಗಲೇನೋ
ಈಶಾಧೀಶ ಜಗನ್ನಾಥವಿಠ್ಠಲನ
ದಾಸನೆಂದು ಸಂತೋಷದಲ್ಲಿರುವವಗ್ಯಾ ॥ 3 ॥


yAtara Baya SrInAthana parama su –
prItiya paDedavage || pa ||
kAtara paDadale pAtakahara vidhi
tAtane nijasuKadAtaneMdaritavagyA || a.pa ||

baMdhu janaru tanagoMdisi nuDiyalu baMda BAgyavEno
hiMde muMde tanna niMdisi nuDiyalu kuMdAdaddEno
maMdaradhara gOviMdana mAnasa
maMdiradali taMdiTTiruvavaginyA || 1 ||

dusumusuguTTuva satisutariMdali hasageTTaddEnO
aSanAcCAdana taralillaveMdu vyasanapaTTarEno
kusumanABa sumanasaroMdita pada
vasudEvana sutanoSadalliruvavagyA || 2 ||

GAsiyiMdalAyAsa paDuta avAsadoLiddEnO
kASi kaMci kALahasti modala para dESa tirugalEnO
ISAdhISa jagannAthaviThThalana
dAsaneMdu saMtOShadalliruvavagyA || 3 ||

Leave a Reply

Your email address will not be published. Required fields are marked *

You might also like

error: Content is protected !!