Composer : Shri Shrida vittala dasaru
ಶ್ರೀ ಕರ್ಜಗಿ ದಾಸಪ್ಪನವರ ಕೃತಿ ( ಶ್ರೀದವಿಠಲಾಂಕಿತ )
ರಾಗ: ಭೌಳಿ ಖಂಡಛಾಪುತಾಳ
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ।
ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ॥ ಪ ॥
ವರ ಶುಕ್ಲವತ್ಸರದ ಭಾದ್ರಪದ ಶಿತಪಕ್ಷ ।
ಹರಿವಾರ ನವಮಿಯಲ್ಲೀ ।
ಸುರಸಿದ್ಧಸಾಧ್ಯ ಸನ್ಮುನಿಗಣಾರ್ಚಿತ ಪಾದ ।
ಹರಿಯೆ ಪರನೆಂದೆನುತಲಿ ।
ಧರಣಿಯನು ತ್ಯಜಿಸಿ ಬಹುಮಾನ ಪೂರ್ವಕವಾಗಿ ।
ಬೆರೆದು ಸುರ ಸಂದಣಿಯಲಿ ॥
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ।
ವರ ವಿಷ್ಣುದೂತ ವೈಮಾನಿಕರ ಒಡಗೂಡಿ ॥ 1 ॥
ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ।
ಖತಿ ದೂರರಿವರು ಜಗದೀ ।
ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ।
ಅತಿಶಯದಿ ಪೇಳಿ ಇಹಕೆ ।
ಸತತವು ಶರಣರ್ಗೆ ಗತಿಯಾಗುವಂತೆ ಸ – ।
ತ್ಪಥವಿಡಿಸಿ ಕರುಣದಿಂದ ॥
ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ।
ಮತಿದೋರಿ ಕೊಟ್ಟು ಸದ್ಗತಿಗೋಸುಗವಾಗಿ ॥ 2 ॥
ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ।
ಖೇಚರಾರೂಢ ಹರಿಯಾ ।
ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ।
ವೈಚಿತ್ರವನ್ನು ತೋರಿ ।
ಈ ಚರಾಚರದಿ ಸಂಗೀತ ಸಾಹಿತ್ಯದಲ್ಲಿ ।
ಪ್ರಾಚುರ್ಯವಂತರೆನಿಸೀ ॥
ಆ ಚತುರ್ದಶಭುವನಪತಿ ಶ್ರೀದವಿಟ್ಠಲನ ।
ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ ॥ 3 ॥
rAga BUpALi : KaMDaCAputALa
teraLidaru SrI jagannAthadAsAryaru
siripatiya smarisi haripurake haruShadali || pa ||
varaSuklavatsarada BAdrapada sitapakSha
harivAra navamiyalli
surasiddha sAdhya sanmunigaNArcita pAda
hariye paraneMdenutali
dharaNiyanu tyajisi bahumAnapUrvakavAgi
beredu surasaMdaNiyali
paramArthavaidi mana hariya pAdadoLiTTu
varaviShNudUta vaimAnikara oDagUDi || 1 ||
atiprEmigaLu hasanmuKaru daye bIruvaru
KatidUrarivaru jagadI
mitimIri SrIhariya kathe nAnA pariyalli
atiSayadi pELi ihake
satatavu SaraNarge gatiyAguvaMte sa –
tkathe piDisi karuNadiMda
hitavaMtarenisi sammatavAgi sarvarige
matidOri koTTu sadgatiyagOsugavAgi ||2||
AcaraNeyalli oMdaraGaLige biDade balu
KEcarArUDha hariyA
sOcitArAdhaneya mADi mareyade mahA
vaicitryavannu tOri
I carAcaradi saMgIta sAhityadali
prAcuryavaMtarenisI
A caturdaSaBuvanapati SrIdaviThalana
yOcaneya biDade maMgaLa SabdavAdyadiM ||3||
Leave a Reply