Composer : Shri Jagannatha dasaru
ರಥವನೇರಿದ ರಥಿಕನ್ಯಾರೇ ಪೇಳಮ್ಮಯ್ಯ |
ಕಥಿತ ಧ್ಯಾತ ಸಂಸ್ತುತ ವಿತತಾನತ
ಹಿತಕರ ದಿವಿಷತ್ ಪತಿ ಕಾಣಮ್ಮ ||ಪ||
ಹಾಟಕ ರತ್ನ ಸುಪೀಠ ಮಧ್ಯ
ಮಂಟಪದಿ ಪೇಳಮ್ಮಯ್ಯ,
ಕೋಟಿ ಭಾಸ್ಕರ ಪ್ರಭಾಟೋಪದಿ
ರಾಜಿಸುವ ಪೇಳಮ್ಮಯ್ಯ,
ತಾಟಂಕಯುತ ವಧೂಟಿಯ
ರಿಕ್ಕೆಲದಲಿಹ ನೋಡಮ್ಮಯ್ಯ,
ಆಟದೆ ಕುರುಜ ಮಹಾಟವಿ ಸವರಿ ಕಿ
ರೀಟಯ ಸಲಹಿದ ಖೇಟ ವಾಹನನೇ,
ಕೇಳಮ್ಮಯ್ಯ [೧]
ಭುಜಗರಾಜ ಫಣಿಮಣಿ ಮಂಡಲ
ಮಂಡಿತನೇ ನೋಡಮ್ಮಯ್ಯ,
ವಿಜಯ ವರದ ಅರಿ ಗದಾಂಬುಜಧರ
ಭುಜನೇ ನೋಡಮ್ಮಯ್ಯ,
ಗಜ ಚರ್ಮಧರಾದ್ಯ ನಿಮಿಷಗಣ
ಸೇವಿತನ ನೋಡಮ್ಮಯ್ಯ,
ಅಜನ ನಾಭಿಯಲಿ ಪಡೆದು ಚರಾಚರ
ಸೃಜಿಸಿ ಪೇಳ್ದ ನೀರಜ ಲೋಚನ, ಕಾಣಮ್ಮ [೨]
ಏತಾ ದೃಶ ಮಹಾಮಹಿಮ ರಮಾ
ವಲ್ಲಭನೆ ಪೇಳಮ್ಮಯ್ಯ,
ಶ್ವೇತ ದ್ವೀಪಾನಂತಾಸನ
ವೈಕುಂಠನುಳಿದು ಪೇಳಮ್ಮಯ್ಯ,
ವೀತಭಯ ಜಗನ್ನಾಥವಿಠಲ
ಬರಲೇಕೆ ಪೇಳಮ್ಮಯ್ಯ,
ಭೂತಳ ಜನರಭಿಲಾಷೆ ಸಲಿಸಲು
ವಾತಾಶನ ಗಿರಿಗಿಳಿದ, ಕಾಣಮ್ಮಯ್ಯ [೩]
rathavanErida rathikanyArE pELammayya |
kathita dhyAta saMstuta vitatAnata
hitakara diviShat pati kANamma ||pa||
hATaka ratna supITha madhya
maMTapadi pELammayya,
kOTi BAskara praBATOpadi
rAjisuva pELammayya,
tATaMkayuta vadhUTiya
rikkeladaliha nODammayya,
ATade kuruja mahATavi savari ki
rITaya salahida KETa vAhananE,
kELammayya [1]
BujagarAja PaNimaNi maMDala
maMDitanE nODammayya,
vijaya varada ari gadAMbujadhara
BujanE nODammayya,
gaja carmadharAdya nimiShagaNa
sEvitana nODammayya,
ajana nABiyali paDedu carAcara
sRujisi pELda nIraja lOcana, kANamma [2]
EtA dRuSa mahAmahima ramA
vallaBane pELammayya,
SvEta dvIpAnaMtAsana
vaikuMThanuLidu pELammayya,
vItaBaya jagannAthaviThala
baralEke pELammayya,
BUtaLa janaraBilAShe salisalu
vAtASana girigiLida, kANammayya [3]
Leave a Reply