Rangavalida guru rayara

Composer : Shri Shyamasundara dasaru

By Smt.Shubhalakshmi Rao

ರಂಗವಲಿದ ಗುರುರಾಯರ ನೀ ನೋಡೋ |
ಅಂತರಂಗದಿ ಪಾಡೋ [ಪ]

ಭಂಗ ಬಡಿಪ ದುರಿತಂಗಳ ಈಡ್ಯಾಡೋ
ಸತ್ ಸಂಗವ ಬೇಡೋ [ಅ.ಪ]

ಹಿಂದೆ ಮೂರೊಂದವತಾರ ಧರಿಸಿದಾತ
ಇದು ಹಿರಿಯರ ಮಾತ |
ಬಂದ ಮರಳಿ ಮಹೀತಳದಿ ಜಗನ್ನಾಥ
ದಾಸಾರ್ಯ ಪ್ರಖ್ಯಾತ |
ತಂದೆ ನಮಗೆ ತಿಳಿ ಎಂದೆಂದಿಗು ಈತ
ಆನಂದ ಪ್ರದಾತ (೧)

ಬಣ್ಣಿಸಲೆನಗಿನ್-ನೊಶವೆ
ಇವರ ಚರಿಯ |
ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯ |
ತಾನಾಗಿ ವಿಧೇಯ |
ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ |
ಪುಸಿಯಲ್ಲವೊ ಖರಿಯ (೨)

ದಾಸವರ್ಯರಾ ವಾಸಗೈದ ಸ್ಥಾನ
ಗಯಕಾಶಿ ಸಮಾನ |
ಲೇಸು ಭಕ್ತಿಯಲಿ ಸೇವಿಸಲನುದಿನ |
ಕೊಡುವುದು ಸುಜ್ಞಾನ |
ಈ ಸನ್ಮಹಿಮರ ದೂಷಿಸುವವನೆ ಶ್ವಾನ |
ಯಾತಕೆ ಅನುಮಾನ (೩)

ನಿಗಮವಾಣಿಯ ಸಾರ ನಿರ್ಮಿಸಿರುವ |
ದೇಹಾಖ್ಯ ರಥವ |
ಸೊಗಸಿಲಿಂದ ತಾನೇರಿ ನಗುತ ಬರುವ |
ಚತುರ್ದಿಕ್ಕಿಲಿ ಮೆರೆವ |
ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ
ಪೊಗಳುವರಘ ತರಿವ (೪)

ಶ್ಯಾಮಸುಂದರನ ಸುಕಥಾಮೃತಸಾರ |
ರಚಿಸಿದ ಬಹುಚತುರ |
ಪಾಮರ ಜನರ ಪ್ರೇಮದಿ ಉದ್ಧಾರ |
ಮಾಡಲು ಗಂಭೀರ |
ಶ್ರೀಮಾನ್ ಮಾನವಿಕ್ಷೇತ್ರನೆ ನಿಜಾಗಾರ-
ವೆಂದೆನಿಸಿದ ಧೀರ (೫)


raMgavalida gururAyara nI nODO |
aMtaraMgadi pADO [pa]

BaMga baDipa duritaMgaLa IDyADO
sat saMgava bEDO [a.pa]

hiMde mUroMdavatAra dharisidAta
idu hiriyara mAta |
baMda maraLi mahItaLadi jagannAtha
dAsArya praKyAta |
taMde namage tiLi eMdeMdigu Ita
AnaMda pradAta (1)

baNNisalenagin-noSave
ivara cariya |
kaNNugaLiMdali kANuta pUrNayya |
tAnAgi vidhEya |
dhanyanenisi satpuNya paDedudariya |
pusiyallavo Kariya (2)

dAsavaryarA vAsagaida sthAna
gayakASi samAna |
lEsu Baktiyali sEvisalanudina |
koDuvudu suj~jAna |
I sanmahimara dUShisuvavane SvAna |
yAtake anumAna (3)

nigamavANiya sAra nirmisiruva |
dEhAKya rathava |
sogasiliMda tAnEri naguta baruva |
caturdikkili mereva |
mige virOdhisuva pApige palmuriva
pogaLuvaragha tariva (4)

shyAmasuMdarana sukathAmRutasAra |
racisida bahucatura |
pAmara janara prEmadi uddhAra |
mADalu gaMBIra |
SrImAn mAnavikShEtrane nijAgAra-
veMdenisida dhIra (5)

Leave a Reply

Your email address will not be published. Required fields are marked *

You might also like

error: Content is protected !!