Composer : Shri Jagannatha dasaru
ರಮಾ ಮನೋಹರನೆ ದೀನ ಪತಿತ ಪಾವನಾ ||ಪ||
ಚೆಂದದಿಂದ ವೇದ ತಂದ ಮಂದರೋದ್ಧರಾ
ಅರವಿಂದ ನಯನ ಬಂದು ರಕ್ಷಿಸೊ ಇಂದು ಭೂಧರಾ ||೧||
ಕರುಳಮಾಲೆ ಧರಿಸಿದ ಶ್ರೀ ವರದ ವಾಮನಾ
ಧೃತಕರದ ಪರಶುರಾಮ ರಾಘವ ಯದು ಕುಲೋತ್ತಮಾ ||೨||
ಲೋಕ ಮೋಹಕ ಬುದ್ಧನಾಗಿ ತೇಜಿಯನೇರಿದಾ
ಜಗದೇಕ ಜಗನ್ನಾಥ ವಿಠ್ಠಲ ಭೀಕರಾಂತಕಾ ||೩||
ramA manOharane dIna patita pAvanA ||pa||
ceMdadiMda vEda taMda maMdarOddharA
araviMda nayana baMdu rakShiso iMdu BUdharA ||1||
karuLamAle dharisida SrI varada vAmanA
dhRutakarada paraSurAma rAGava yadu kulOttamA ||2||
lOka mOhaka buddhanAgi tEjiyanEridA
jagadEka jagannAtha viThThala BIkarAMtakA ||3||
Leave a Reply