Neera Tarangini

Composer : Shri Jagannatha dasaru

By Smt.Nandini Sripad

ರಾಗ: ಕಲ್ಯಾಣಿ, ಆದಿತಾಳ

ನೀರ ತರಂಗಿಣಿ ತೀರ ನಾರಸಿಂಹ || ಪ ||
ಸಾರಿದೆನೊ ತವಪಾದ ಪಂಕಜ |
ತೋರು ಮನದಲಿ ತವಕದಿ || ಅ ಪ ||

ನಾರದನುತ ಚಿಚ್ಛರೀರಗ ಶ್ರೀ ಭೂ ದು – |
ರ್ಗಾರಮಣ ದುರಿತಾರಿ ಬ್ರಹ್ಮ ಸ – |
ಮೀರ ಮುಖ್ಯ ವಿಬುಧಾರ್ಚಿತ |
ಚಾರು ಚರಣಯುಗ ಕ್ಷೀರಾಬ್ಧಿಶಯನ ಮ – ||
ದ್ಭಾರ ನಿನ್ನದು ಮೂರುಲೋಕದ | ಸೂರಿಗಮ್ಯ ಸುಖಾತ್ಮಕ || ೧ ||

ವೇದವೇದ್ಯ ಸಂಸಾರೋದಧಿ ತಾರಕ |
ಛೇದ ಭೇದ ವಿಷಾದವೇ ಮೊದ – |
ಲಾದ ದೋಷವರ್ಜಿತ |
ಶ್ರೀದ ಶ್ರೀಶ ಅನಂತ ಆತ್ಮಕಾಮ ||
ಬಾದರಾಯಣ ಭಕ್ತವರ ಪ್ರ|ಹ್ಲಾದಪೋಷಕ ಪಾಹಿಮಾಂ || ೨ ||

ಹೋತಹೃದ್ಯ ಜಗನ್ನಾಥವಿಠಲ ನಿನ್ನ |
ಮಾತು ಮಾತಿಗೆ ಸ್ಮರಿಸುತಿಹ ಸ – |
ಚ್ಚೇತನರನು ನೀ ಸರ್ವದಾ |
ವೀತಶೋಕ ಭವಭೀತಿ ಬಿಡಿಸಿ ತವ ||
ದೂತರೊಳಗಿಡು ಮಾತರಿಶ್ವಗ | ಭೂತಭಾವನ ಭವ್ಯದ || ೩ ||


rAga: kalyANi, AditALa

nIra taraMgiNi tIra nArasiMha || pa ||
sArideno tavapAda paMkaja |
tOru manadali tavakadi || a pa ||

nAradanuta cicCarIraga SrI BU du – |
rgAramaNa duritAri brahma sa – |
mIra muKya vibudhArcita |
cAru caraNayuga kShIrAbdhiSayana ma – ||
dBAra ninnadu mUrulOkada | sUrigamya suKAtmaka || 1 ||

vEdavEdya saMsArOdadhi tAraka |
CEda BEda viShAdavE moda – |
lAda dOShavarjita |
SrIda SrISa anaMta AtmakAma ||
bAdarAyaNa Baktavara pra|hlAdapOShaka pAhimAM || 2 ||

hOtahRudya jagannAthaviThala ninna |
mAtu mAtige smarisutiha sa – |
ccEtanaranu nI sarvadA |
vItaSOka BavaBIti biDisi tava ||
dUtaroLagiDu mAtariSvaga | BUtaBAvana Bavyada || 3 ||

Leave a Reply

Your email address will not be published. Required fields are marked *

You might also like

error: Content is protected !!